ಪ್ರತಿಯಾಬ್ಬ ಗ್ರಾಮ ಲೆಕ್ಕಿಗನಿಗೆ ಸಿಂಪ್ಯೂಟರ್
ಚಿಕ್ಕಮಗಳೂರು : ರಾಜ್ಯದ ಗ್ರಾಮ ಲೆಕ್ಕಿಗರ ಮೋಡಿ ಅಕ್ಷರಕ್ಕೆ ಪೂರ್ಣವಿರಾಮ ಹಾಕಿ, ಅಚ್ಚುಕಟ್ಟಾದ ದಾಖಲೆಗಳ ಕಾಪಿಡಲು ಅನುವಾಗುವಂತೆ ಪ್ರತಿಯಾಬ್ಬ ಗ್ರಾಮ ಲೆಕ್ಕಿಗನಿಗೆ ಸಿಂಪ್ಯೂಟರ್ ಒದಗಿಸುವ ಕುರಿತು ಸರ್ಕಾರ ಚಿಂತಿಸುತ್ತಿದೆ.
ಕಂದಾಯ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ರಾಜೀವ್ ಚಾವ್ಲಾ ಶನಿವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಒಂದು ಸಿಂಪ್ಯೂಟರ್‌ಗೆ 10 ಸಾವಿರ ರುಪಾಯಿ ವೆಚ್ಚವಾಗಲಿದೆ. 9 ಲಕ್ಷ ರುಪಾಯಿ ಖರ್ಚು ಮಾಡಿದರೆ, ಎಲ್ಲಾ ಗ್ರಾಮ ಲೆಕ್ಕಿಗರಿಗೆ ಸಿಂಪ್ಯೂಟರ್ ಪೂರೈಸುವುದು ಸಾಧ್ಯ. ಗ್ರಾಮಲೆಕ್ಕಿಗರಿಗೆ ಬರೆಯುವ ಕೆಲಸ ಸಾಕಷ್ಟು ಕಡಿಮೆಯಾಗುವುದಲ್ಲದೆ, ಸಿಂಪ್ಯೂಟರ್‌ನಲ್ಲಿನ ಮಾಹಿತಿಯನ್ನು ಕಂಪ್ಯೂಟರ್‌ಗೆ ವರ್ಗಾಯಿಸುವುದೂ ಸಾಧ್ಯ. ಸಿಂಪ್ಯೂಟರ್ ಬಳಕೆ ಕುರಿತಂತೆ ಗ್ರಾಮ ಲೆಕ್ಕಿಗರಿಗೆ ತರಪೇತಿ ನೀಡಲಾಗುವುದು ಎಂದು ಚಾವ್ಲಾ ಹೇಳಿದರು.












Click it and Unblock the Notifications