ಸದ್ಯದಲ್ಲೇ ಬೆಂಗಳೂರಿನ ವ್ಯಸ್ತ ರಸ್ತೆಗಳಲ್ಲಿ ಆಡಿಬಲ್ ಟ್ರಾಫಿಕ್ ಸಿಗ್ನಲ್
ಬೆಂಗಳೂರು: ಆಡಿಬಲ್ ಟ್ರಾಫಿಕ್ ಸಿಗ್ನಲ್ ಅಂದರೆ ಶ್ರವ್ಯ ಸಂಚಾರ ಸಂಕೇತವನ್ನು ನಗರದಲ್ಲಿ ಅಳವಡಿಸಲು ವ್ಯವಸ್ಥೆ ಮಾಡುವುದಾಗಿ ನಗರ ಪೊಲೀಸ್ ಕಮಿಷನರ್ ಎಚ್. ಟಿ. ಸಾಂಗ್ಲಿಯಾನಾ ಹೇಳಿದ್ದಾರೆ.
ಟ್ರಾಫಿಕ್ ಸಿಗ್ನಲ್‌ಗಳ ಯಶಸ್ವಿ ನಿರ್ವಹಣೆಗೆ ಆಡಿಬಲ್ ಸಿಗ್ನಲ್‌ಗಳು ಸಹಾಯಮಾಡಲಿವೆ ಎಂಬ ದೃಷ್ಠಿಯಿಂದ ಈ ವ್ಯಲಸ್ಥೆ ಆರಂಭಿಸಲು ನಿರ್ಧರಿಸಲಾಗಿದೆ ಎಂದ ಸಾಂಗ್ಲಿಯಾನಾ ಅವರು ಗುರುವಾರ, ಅಂತರರಾಷ್ಟ್ರೀಯ ಹೆಲೆನ್ ಕೆಲ್ಲರ್ಸ್ ದಿನಾಚರಣೆಯ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಅಲ್ಲದೆ, ವ್ಯಸ್ತವಾಗಿರುವ ರಸ್ತೆಗಳನ್ನು ದಾಟಲು ಅಂಧರಿಗೆ ಸಹಾಯ ಮಾಡಲು ಕಾನೆಸ್ಟೇಬಲ್‌ಗಳನ್ನು ನೇಮಕ ಮಾಡಿಕೊಳ್ಳುವ ಯೋಚನೆಯೂ ಇದೆ. ಅಂಧರು ಸಂಚರಿಸುವ ವಾಹನಗಳನ್ನು ನಿಲ್ಲಿಸಲು ಪ್ರತ್ಯೇಕ ಪಾರ್ಕಿಂಗ್ ಜಾಗವನ್ನು ಕಾಯ್ದಿರಿಸುವ ಬಗ್ಗೆಯೂ ಪ್ರಯತ್ನಗಳು ಸಾಗಿವೆ ಎಂದು ಸಾಂಗ್ಲಿಯಾನಾ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications