ಆಕಾಶವಾಣಿ ವಿದೇಶ ಚಾನೆಲ್‌ನಲ್ಲಿ ಜು.1ರಿಂದ ಕನ್ನಡ ಕಾರ್ಯಕ್ರಮಗಳು

ಬೆಂಗಳೂರು: ಆಕಾಶವಾಣಿ ವಿದೇಶ ಚಾನೆಲ್‌ನಲ್ಲಿ ಜುಲೈ 1ರಿಂದ ಕನ್ನಡ ಕಾರ್ಯಕ್ರಮಗಳು ಪ್ರಸಾರವಾಗಲಿವೆ ಎಂದು ಪ್ರಸಾರಭಾರತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ಎಸ್‌. ಶರ್ಮಾ ತಿಳಿಸಿದ್ದಾರೆ.

ವಿದೇಶ ಚಾನೆಲ್‌ ಮೂಲಕ ಆಸ್ಟ್ರೇಲಿಯಾ, ಅಮೆರಿಕಾ ಮತ್ತು ದುಬೈ ಸೇರಿದಂತೆ 60 ದೇಶಗಳಲ್ಲಿ ಕನ್ನಡ ಕಾರ್ಯಕ್ರಮಗಳು ಬಿತ್ತರವಾಗಲಿವೆ. ಭಾರತೀಯ ಭಾಷೆಗಳ ಕಾರ್ಯಕ್ರಮದಲ್ಲಿ ಕನ್ನಡ ಕಾರ್ಯಕ್ರಮಗಳು ಪ್ರಸಾರವಾಗುತ್ತಿಲ್ಲ ಎಂದು ಇತ್ತೀಚೆಗೆ ಕನ್ನಡಿಗರು ಪ್ರತಿಭಟಿಸಿದ್ದರು. ಇದನ್ನು ಪರಿಗಣಿಸಿ ಈಗ ಕನ್ನಡ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ಶರ್ಮಾ ಹೇಳಿದರು. ಅವರು ಗುರುವಾರ ಪ್ರಸಾರ ಭಾರತಿಯ ಬೆಂಗಳೂರು ಮಾರ್ಕೆಟಿಂಗ್‌ ವಿಭಾಗವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಬೆಂಗಳೂರು ನಗರದ ಹೊರವಲಯದಲ್ಲಿರುವ ಹೊಸಕೋಟೆಯ ಸೂಪರ್‌ ಟ್ರಾನ್ಸ್‌ಮಿಟರ್‌ ಮೂಲಕ ಎಲ್ಲ ಭಾರತೀಯ ಭಾಷೆಗಳ ಕಾರ್ಯಕ್ರಮ ಪ್ರಸಾರವಾಗಲಿದೆ. ಇದುವರೆಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳ ಕಾರ್ಯಕ್ರಮಗಳಿಗೆ ಯಾವುದೇ ರೀತಿ ಆದಾಯ ಅಪೇಕ್ಷಿಸದೆ ಪ್ರಚಾರ ನೀಡಲಾಗುತ್ತಿತ್ತು. ಆದರೆ ಇನ್ನು ಮುಂದೆ ರಾಜ್ಯ ಸರಕಾರವೂ ಜಾಹೀರಾತುಗಳ ಮೂಲಕ ಬೆಂಬಲ ನೀಡಬೇಕು ಎಂದು ಈ ಸಂದರ್ಭದಲ್ಲಿ ಶರ್ಮಾ ಮನವಿ ಮಾಡಿಕೊಂಡರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+