ಯುಬಿ ಕುದುರೆ ವಿಜಯ ಮಲ್ಯ ರಾಜ್ಯಸಭೆ ಚುನಾವಣೆ ಗೆಲ್ಲುವುದೇ?

Will it be a Cheer day for Vijay Mallya?ಬೆಂಗಳೂರು: ರಾಜ್ಯಸಭೆಯ ನಾಲ್ಕು ಕ್ಷೇತ್ರಗಳಿಗೆ ಬುಧವಾರ (ಮಾ.27) ನಡೆಯುವ ಚುನಾವಣೆ ಭಾರೀ ಕುತೂಹಲ ಮೂಡಿಸಿದ್ದು , ಕಾಂಗ್ರೆಸ್‌ನ ಮೂವರು ಸ್ಪರ್ಧಿಗಳೊಂದಿಗೆ ರಾಜ್ಯಸಭೆ ಪ್ರವೇಶಿಸುವ ನಾಲ್ಕನೇ ವ್ಯಕ್ತಿಯ ಕುರಿತು ಲೆಕ್ಕಾಚಾರಗಳು ಚುರುಕಾಗಿವೆ.

ಜನತಾ ಪರಿವಾರದ ಬೆಂಬಲದೊಂದಿಗೆ ಕಣಕ್ಕಿಳಿದಿರುವ ಮದ್ಯೋದ್ಯಮಿ ವಿಜಯ ಮಲ್ಯ ಅವರು ಭಾರತೀಯ ಜನತಾ ಪಕ್ಷದ ಡಿ.ಕೆ.ತಾರಾದೇವಿ ಸಿರ್ದ್ಧಾರ್ಥ ಅವರಿಗೆ ಪ್ರಬಲ ಸ್ಪರ್ಧೆ ಒಡ್ಡಿದ್ದಾರೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಎಂ.ವಿ.ರಾಜಶೇಖರನ್‌, ಪ್ರೇಮಾ ಕಾರ್ಯಪ್ಪ ಹಾಗೂ ಜನಾರ್ಧನ ಪೂಜಾರಿ ಅವರ ಗೆಲುವು ಖಚಿತವಾಗಿದೆ. ಕಾಂಗ್ರೆಸ್‌ನ ಹೆಚ್ಚುವರಿ ಮತಗಳ ಹಂಚಿಕೆ ಕುರಿತು ಈಗ ಚರ್ಚೆ ನಡೆದಿದೆ.

ಕಾಂಗ್ರೆಸ್‌ ಶಾಸಕರಿಗೆ ವಿಪ್‌ : ಪಕ್ಷದ ಅಭ್ಯರ್ಥಿಗಳಿಗೇ ಮತ ಚಲಾಯಿಸುವಂತೆ ಕಾಂಗ್ರೆಸ್‌ ಶಾಸಕರಿಗೆ ವಿಪ್‌ ನೀಡಲಾಗುವುದು ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಕಾರ್ಯದರ್ಶಿ ಕರಿಯಣ್ಣ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಪಕ್ಷದ ಹೆಚ್ಚುವರಿ ಮತಗಳನ್ನು ಇತರರಿಗೆ ನೀಡುವ ಸುದ್ದಿಗಳನ್ನು ನಿರಾಕರಿಸಿದ ಅವರು, ಪಕ್ಷದ ಅಭ್ಯರ್ಥಿಗಳಿಗೇ ಎಲ್ಲ ಮತಗಳನ್ನು ಚಲಾಯಿಸಲು ಬುಧವಾರ ಬೆಳಗ್ಗೆ ವಿಪ್‌ ವಿಧಿಸಲಾಗುವುದು ಎಂದರು.

ಮೋತಿಲಾಲ್‌ ವೋರಾ ಅವರನ್ನು ರಾಜ್ಯಸಭಾ ಚುನಾವಣೆಯ ವೀಕ್ಷಕರನ್ನಾಗಿ ಕಾಂಗ್ರೆಸ್‌ ಹೈಕಮಾಂಡ್‌ ದೆಹಲಿಯಿಂದ ಕಳುಹಿಸಿದ್ದು , ಅವರು ಮಂಗಳವಾರ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ನೇತೃತ್ವದಲ್ಲಿ ನಡೆದ ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ ಪಾಲ್ಗೊಂಡರು. ಸಚಿವ ಸಂಪುಟದ ಪ್ರಮುಖ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

ಶಿಸ್ತಿನ ಸಿಪಾಯಿಗಳಾಗಿ : ಪಕ್ಷದ ಅಭ್ಯರ್ಥಿಗಳಿಗೇ ಮತ ಚಲಾಯಿಸುವಂತೆ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಕಾಂಗ್ರೆಸ್‌ ಶಾಸಕರಿಗೆ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಕಾಂಗ್ರೆಸ್‌ ಪಕ್ಷ ಶಿಸ್ತಿಗೆ ಹೆಸರುವಾಸಿಯಾಗಿದ್ದು , ಶಾಸಕರು ಪಕ್ಷದ ಘನತೆಯನ್ನು ಕಾಪಾಡಬೇಕು. ಯಾರೂ ಸಹ ಕಣ್ಣಿಗೆ ಪೊರೆಯಿಟ್ಟುಕೊಂಡು ವರ್ತಿಸಬಾರದು, ಕಿವಿ ಇಲ್ಲದವರಂತೆ ನಟಿಸಬಾರದು ಎಂದು ಮಂಗಳವಾರದ ಶಾಸಕಾಂಗ ಸಭೆಯಲ್ಲಿ ಕೃಷ್ಣ ಕಠಿಣವಾಗಿ ಹೇಳಿದರು.

ಇತರರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ...
ತಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಗಳು ಗೆದ್ದರೆ ಸಾಕು. ಉಳಿದ ಅಭ್ಯರ್ಥಿಗಳ ಬಗ್ಗೆ ತಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಪಕ್ಷದ ವೀಕ್ಷಕರಾಗಿ ಆಗಮಿಸಿರುವ ಎಐಸಿಸಿ ಖಜಾಂಚಿ ಮೋತಿಲಾಲ್‌ ವೋರಾ ಸುದ್ದಿಗಾರರಿಗೆ ತಿಳಿಸಿದರು. ಬಿಜೆಪಿಯನ್ನು ಬೆಂಬಲಿಸುವ ವಿಷಯವೇ ಇಲ್ಲ ಎಂದು ಸ್ಪಷ್ಟಪಡಿಸಿದ ವೋರಾ, ಮಲ್ಯ ಅವರನ್ನು ಬೆಂಬಲಿಸುವ ಕುರಿತು ಏನನ್ನೂ ಸ್ಪಷ್ಟವಾಗಿ ಹೇಳದೆ ನುಣುಚಿಕೊಂಡರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+