ಮಾ.29ದೇಶದ ಪ್ರಥಮ ಆನ್‌ಲೈನ್‌ಲಾಟರಿಡ್ರಾ,2 ಕೋಟಿ ರು.ಜಾಕ್‌ಪಾಟ್
ಬೆಂಗಳೂರು : ಭಾರತದ ಪ್ರಥಮ ಆನ್‌ಲೈನ್ ಲಾಟರಿ ಡ್ರಾ ಬರುವ ಶುಕ್ರವಾರ (ಮಾರ್ಚ್ 29) ಸಿಕ್ಕಿಂನಲ್ಲಿ ನಡೆಯಲಿದೆ. 2 ಕೋಟಿ ರುಪಾಯಿಗಳ ಜಾಕ್‌ಪಾಟ್ ಇದು.
ಪ್ಲೇವಿನ್ ಇನ್ಫಾವೆಸ್ಟ್ ಲಿಮಿಟೆಡ್ (ಸದ್ಯಕ್ಕೆ ಭಾರತದ ಏಕೈಕ ಲಾಟರಿ ಸಂಸ್ಥೆ) ಮಂಗಳವಾರ ಈ ವಿಷಯ ಕುರಿತ ಪ್ರಕಟಣೆ ಹೊರಡಿಸಿದೆ. ಅಂದು ದೇಶಾದ್ಯಂತ ಮೊದಲ ಡ್ರಾದ ನೇರಪ್ರಸಾರವಿರುತ್ತದೆ. ಭಾರತದ 14 ರಾಜ್ಯಗಳಲ್ಲಿನ ರೆಸ್ಟೊರಾಗಳು, ಶಾಪಿಂಗ್ ಸಂಕೀರ್ಣಗಳು, ಬಸ್ ನಿಲ್ದಾಣಗಳು ಮೊದಲಾದ ಸಾರ್ವಜನಿಕರು ಸೇರುವ ಸ್ಥಳಗಳಲ್ಲಿ 3500 ಕಂಪ್ಯೂಟರ್ ಟರ್ಮಿನಲ್ ಬೂತ್‌ಗಳನ್ನು ಕಂಪನಿ ಸ್ಥಾಪಿಸಿದೆ. ಈ ಬೂತ್‌ಗಳಲ್ಲಿ ನಿಮ್ಮ ಅದೃಷ್ಟದ ಸಂಖ್ಯೆಯ ಟಿಕೇಟ್ ಖರೀದಿಸುವ ಅವಕಾಶ.
ಕಂಪನಿಯ ವ್ಯವಸ್ಥಾಪಕ ಅಧಿಕಾರಿ ಸಂಜಯ್ ದಾಸ್ ಹೇಳುವಂತೆ- ಇನ್ನು 2 ವರ್ಷಗಳಲ್ಲಿ ದೇಶಾದ್ಯಂತ ಇಂಥಾ 10 ಸಾವಿರ ಬೂತ್‌ಗಳನ್ನು ಸ್ಥಾಪಿಸಲಾಗುವುದು. 500 ಶತಕೋಟಿ ರುಪಾಯಿ ಅಂದಾಜು ವಹಿವಾಟಿನ ವ್ಯಾಪಾರವಿದು. ಪ್ರತಿದಿನ 2 ಕೋಟಿ ಗ್ರಾಹಕರನ್ನು ಕಂಪನಿ ನಿರೀಕ್ಷಿಸುತ್ತಿದೆ. ಬರುವ ತಿಂಗಳುಗಳಲ್ಲಿ ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲೂ ಡ್ರಾ ಪ್ರಾರಂಭಿಸುವ ಯೋಚನೆಯಿದೆ.
ಮೂರು ಕೋಟಿ ರುಪಾಯಿ ಬಂಡವಾಳದ ಪ್ಲೇವಿನ್‌ನ ಈ ಹೊಸ ಹೆಜ್ಜೆಯನ್ನು ಪ್ರಚುರ ಪಡಿಸುತ್ತಿರುವವರು ರಿkುೕ ಟಿವಿಯ ಸುಭಾಶ್‌ಚಂದ್ರ. ಅಂದಹಾಗೆ, ಲಾಟರಿ ವಹಿವಾಟಿನಲ್ಲಿ ಬರುವ ನಿವ್ವಳ ಆದಾಯದಲ್ಲಿ ಪ್ರತಿಶತ 20ರಷ್ಟು ಹಣವನ್ನು ಮೂಲಭೂತ ಸೌಕರ್ಯ ಹಾಗೂ ಶೈಕ್ಷಣಿಕ ಯೋಜನೆಗಳಿಗೆ ಕಂಪನಿ ದೇಣಿಗೆ ಕೊಡಲಿದೆ. ಆನ್‌ಲೈನ್ ಲಾಟರಿಯಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕನಿಷ್ಠ 1 ಶತಕೋಟಿ ಹಣ ದಕ್ಕಲಿದೆ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಕಂಪನಿ ಹೇಳಿದೆ.
ಬರುವ ದಿನಗಳಲ್ಲಿ ಆನ್‌ಲೈನ್ ಲಾಟರಿ ಜನಪ್ರಿಯವಾಗುವ ಸಾಧ್ಯತೆಗಳು ನಿಚ್ಚಳವಾಗಿವೆ. ಕರ್ನಾಟಕದಲ್ಲಿಯೂ ಮೇ ತಿಂಗಳಿಂದ ಮೋದಿ ಗ್ರೂಪ್ ಹುಟ್ಟುಹಾಕಿರುವ ಕಂಪನಿ ಆನ್‌ಲೈನ್ ಲಾಟರಿ ಪ್ರಾರಂಭಿಸಲಿದೆ.
(ಎಎಫ್‌ಪಿ)
ವಾರ್ತಾ ಸಂಚಯ
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ


Click it and Unblock the Notifications
