• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರು ಕರಗ ಬಂತು ಆನ್‌ಲೈನ್‌ಗೆ !

By Staff
|

Karagaಕರಗ ಎಂದ ಕೂಡಲೇ ಕಣ್ಣಮುಂದೆ ಬರುವುದು- ಮಲ್ಲಿಗೆ ಹೂಗಳಿಂದ ಅಲಂಕೃತವಾದ ಕರಗ ಹೊತ್ತ ವೀರ ಕುಮಾರನ ಚಿತ್ರ. ಸುತ್ತಲೂ ಬಿಚ್ಚುಗತ್ತಿಯ ಭಟ(ಕ್ತ)ರು. ಕರಗಕ್ಕೆ ಮಲ್ಲಿಗೆ ಹೂಗಳ ಚೆಲ್ಲುತ್ತ ಜಯಘೋಷ ಉದ್ಘರಿಸುವ ಭಕ್ತವೃಂದ. ಕುಣಿತ, ಭಕ್ತಿಯ ಭಾವಾವೇಶ ಹಾಗೂ ಐತಿಹ್ಯ- ಇತಿಹಾಸ ಹೊಂದಿರುವ ಬೆಂಗಳೂರು ಕರಗದ್ದು ವಿಶ್ವ ಪ್ರಸಿದ್ಧಿ.
ಅಂಥ ಕರಗದ ಬಗೆಗಿನ ಸಮಗ್ರ ಮಾಹಿತಿಗಳು ಈಗ ಬೆರಳ ಕದಲಿಕೆಯಲ್ಲಿ ; ಅಂತರ್ಜಾಲದಲ್ಲಿ ಅಡಕ. http://www.karaga.org ನಲ್ಲಿ ಕರಗದ ಎಲ್ಲ ಮುಖಗಳು ಲಭ್ಯ.

ಕರಗ 9 ದಿನಗಳ ಹಬ್ಬ. ವಹ್ನಿಕುಲ ಕ್ಷತ್ರಿಯ ತಿಗಳ ಸಮುದಾಯದವರು ತಮ್ಮ ಆರಾಧ್ಯ ದೇವತೆಯಾದ ಆದಿಶಕ್ತಿ ದ್ರೌಪದಿಯನ್ನು ಆರಾಧಿಸುವ ಉತ್ಸವ. ಆದರೆ, ಕರಗ ಸಮುದಾಯದ ವ್ಯಾಪ್ತಿ ಮೀರಿ ಇಡೀ ಬೆಂಗಳೂರಿನ ಹಬ್ಬವೆನಿಸಿದೆ. ನಾಡಿನ ಪ್ರಮುಖ ಆಚರಣೆಗಳಲ್ಲೊಂದಾಗಿ ಗುರ್ತಿಸಿಕೊಂಡಿದ್ದು , ಸಾವಿರಾರು ಜನರನ್ನು ಸೆಳೆಯುತ್ತದೆ.

ಪ್ರತಿ ವರ್ಷದ ಚೈತ್ರ ಪೂರ್ಣಿಮೆಯಂದು ಕರಗ. ಕರಗವನ್ನು ಹೊರುವ ಅಗ್ನಿಕುಮಾರ, ದೇವಿ ದ್ರೌಪದಿಯನ್ನು ಪ್ರತಿನಿಧಿಸುವ ಉದ್ದೇಶದಿಂದ ಸ್ತ್ರೀ ವೇಷಧಾರಿಯಾಗಿರುತ್ತಾನೆ. ಹಳದಿ ಸೀರೆ, ಬಳೆ ಹಾಗೂ ಮಂಗಳಸೂತ್ರವನ್ನು ಧರಿಸಿ, ಕರಗ ಹೊತ್ತ ಅಗ್ನಿಕುಮಾರ ಧರ್ಮರಾಯ ದೇವಸ್ಥಾನದಿಂದ ಹೊರಬೀಳುವ ವೇಳೆಗೆ ಮಧ್ಯರಾತ್ರಿ. ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಭಕ್ತರಿಂದ ಪೂಜೆ ಸ್ವೀಕರಿಸಿ ಕರಗ ದೇವಸ್ಥಾನಕ್ಕೆ ವಾಪಸ್ಸಾಗುವ ಹೊತ್ತಿ ಗೆ ಬಾನಲ್ಲಿನ ಚುಕ್ಕಿ ಕರಗುತ್ತಿರುತ್ತದೆ.

ಬೆಂಗಳೂರಿನಲ್ಲಿ ಮಾತ್ರವಲ್ಲ - ಹೊಸಕೋಟೆ, ಶಾಂತಿನಗರ, ಆನೇಕಲ್‌, ಮಾಲೂರು, ಕೋಲಾರ, ವಿಜಯಪುರ, ದೇವನಹಳ್ಳಿ, ಯಲಹಂಕಗಳಲ್ಲೂ ಕರಗ ಉತ್ಸವದ ಆಚರಣೆ ನಡೆಯುತ್ತದೆ.

ಚೈತ್ರ ಹತ್ತಿರದಲ್ಲಿದೆ. ಅಂದರೆ ಕರಗ ಹೊಸಿತಿಲಲ್ಲಿದೆ ಅಂತಲೇ ಅರ್ಥ!

(ಇನ್ಫೋ ವಾರ್ತೆ)

ಕರಗ ಸಂಚಯ

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X