ಕಾರ್ಮಿಕ ರ ದಿನ ಮೇ.1ರಂದು ಬಸವಕಲ್ಯಾಣದಲ್ಲಿ ಕಲ್ಯಾಣ ಪರ್ವ ಆರಂಭ
ಬೀದರ್: ಬಸವಕಲ್ಯಾಣದಲ್ಲಿ ಮೇ 1ರಿಂದ ಮೂರು ದಿನಗಳ ಕಾಲ ಕಲ್ಯಾಣ ಪರ್ವ ಸಮಾವೇಶವನ್ನು ಆಯೋಜಿಸಲಾಗಿದೆ.
ಕೂಡಸ ಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಸೋಮವಾರ ಈ ವಿಷಯ ತಿಳಿಸಿದ್ದು, ಸುಮಾರು 3 ಲಕ್ಷ ಮಂದಿ ಶರಣರು ಈ ಕಲ್ಯಾಣ ಪರ್ವದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಮೈಸೂರು ಸರಕಾರವು 1968ರಲ್ಲಿ ಬಸವಣ್ಣನವರ ಅಷ್ಟಶತಮಾನೋತ್ಸವ ಎಂಬ ಬೃಹತ್ ಸಮಾರಂಭವನ್ನು ಏರ್ಪಡಿಸಿತ್ತು. ಅನಂತರ ನಡೆಯುವ ಅತೀ ದೊಡ್ಡ ಶರಣ ಮೇಳ ಈ ಕಲ್ಯಾಣ ಪರ್ವ ಆಗಲಿದೆ ಎಂದು ಮಾತೆ ಮಹಾದೇವಿ ಹೇಳಿದರು.
ಕಾಯಕವೇ ಕೈಲಾಸ ಎಂದು ಸಾರಿದ ಬಸವಣ್ಣನವರ ಹೆಸರಿನಲ್ಲಿ ನಡೆಯುವ ಸಮಾರಂಭವನ್ನು ಆರಂಭಿಸಲು ಕಾರ್ಮಿಕರ ದಿನವೆನಿಸಿದ ಮೇ 1ನೇ ತಾರೀಕನ್ನು ನಿಗದಿಪಡಿಸಲಾಗಿದೆ. ಇನ್ನು ಮುಂದೆ ಪ್ರತಿ ವರ್ಷವೂ ಮೇ 1ರಂದು ಕಲ್ಯಾಣ ಪರ್ವ ಎಂಬ ಹೆಸರಿನಲ್ಲಿ ಶರಣ ಮೇಳವನ್ನು ನಡೆಸಲಾಗುವುದು.
ಕಲ್ಯಾಣ ಪರ್ವದ ಶುಭ ಸಂದೇಶ ಸಾರಲು 6 ಐತಿಹಾಸಿಕ ಪುಣ್ಯ ಸ್ಥಳಗಳಿಂದ ಜ್ಯೋತಿ ಯಾತ್ರೆಗಳು ಈಗಾಗಲೇ ಹೊರಟಿವೆ. ಮೇಳದಲ್ಲಿ ಭಾಗವಹಿಸುವ ಎಲ್ಲಪ್ರತಿನಿಧಿಗಳಿಗೂ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...