• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟಿಟಿ ಕಣದಿಂದ ಮಾಜಿ ರಾಷ್ಟ್ರೀಯ ಚಾಂಪಿಯನ್‌ ಅರ್ಚನಾ ವಿಶ್ವನಾಥ್‌ ನಿವೃತ್ತಿ

By Staff
|

ಬೆಂಗಳೂರು : ಮಾಜಿ ರಾಷ್ಟ್ರೀಯ ಟೇಬಲ್‌ ಟೆನ್ನಿಸ್‌ ಚಾಂಪಿಯನ್‌ ಹಾಗೂ ಒಂದು ದಶಕಕ್ಕೂ ಹೆಚ್ಚು ಕಾಲ ಕರ್ನಾಟಕ ಟೇಬಲ್‌ ಟೆನ್ನಿಸ್‌ನಲ್ಲಿ ಅಧಿಪತ್ಯ ಸಾಧಿಸಿದ್ದ ಅರ್ಚನಾ ವಿಶ್ವನಾಥ್‌ ಸ್ಪರ್ಧಾತ್ಮಕ ಟೇಬಲ್‌ ಟೆನ್ನಿಸ್‌ನಿಂದ ತಾವು ನಿವೃತ್ತಿ ಹೊಂದುವುದಾಗಿ ಪ್ರಕಟಿಸಿದ್ದಾರೆ.

17 ದೀರ್ಘ ವರ್ಷಗಳ ಕಾಲ ಟೇಬಲ್‌ ಟೆನ್ನಿಸ್‌ ನನ್ನ ಜೀವನದ ಅವಿಭಾಜ್ಯ ಅಂಗವಾಗಿತ್ತು . ಪ್ರಸ್ತುತ ನಾನು ರಾಜ್ಯ ಮಟ್ಟದ ಅಥವಾ ರಾಷ್ಟ್ರೀಯ ಮಟ್ಟದ ಸ್ಪರ್ಧೆಯ ತುರುಸಿನ ಕಣದಿಂದ ನಿವೃತ್ತಿ ಹೊಂದುವುದಾಗಿ ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಅರ್ಚನಾ ವಿಶ್ವನಾಥ್‌ ಪ್ರಕಟಿಸಿದರು.

1994 ರಲ್ಲಿ ರಾಷ್ಟ್ರದ ಅಗ್ರಮಾನ್ಯ ಆಟಗಾರ್ತಿಯಾಗಿದ್ದ ಅರ್ಚನಾ, 1988 ರಲ್ಲಿ ಈಜಿಪ್ಟ್‌ನ ಕೈರೋದಲ್ಲಿ ನಡೆದ ಕಿರಿಯರ ವಿಶ್ವ ಚಾಂಪಿಯನ್‌ ಕೂಟ ಹಾಗೂ 1994, 96 ರ ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅರ್ಚನಾ ಅವರ ಕ್ರೀಡಾ ಸಾಧನೆಯನ್ನು ಗುರ್ತಿಸಿ ಕರ್ನಾಟಕ ಸರ್ಕಾರ ಏಕಲವ್ಯ ಪ್ರಶಸ್ತಿ ನೀಡಿ ಅವರನ್ನು ಗೌರವಿಸಿದೆ.

ದೀರ್ಘಕಾಲ ರಾಷ್ಟ್ರೀಯ ಮಟ್ಟದಲ್ಲಿ ಟೇಬಲ್‌ ಟೆನ್ನಿಸ್‌ ತಾರೆಯಾಗಿ ಮೆರೆದರೂ ಯಾವುದೇ ನೌಕರಿಯನ್ನು ಗಿಟ್ಟಿಸಿಕೊಳ್ಳುವಲ್ಲಿ ಅರ್ಚನಾ ಯಶಸ್ವಿಯಾಗಿರಲಿಲ್ಲ . ಇದನ್ನು ವಿಪರ್ಯಾಸ ಎಂದು ಕರೆಯುವುದೋ ಅಥವಾ ನನ್ನ ದುರದೃಷ್ಟ ಎಂದು ಕರೆಯವುದೋ.. ಎಂದು ಅರ್ಚನಾ ವಿಷಾದಿಸುತ್ತಾರೆ. ಅಂದಹಾಗೆ, ಪ್ರಸ್ತುತ ಜೈನ್‌ ಅಂತರರಾಷ್ಟ್ರೀಯ ವಸತಿ ಶಾಲೆಯಲ್ಲಿ ಕ್ರೀಡಾ ನಿರ್ದೇಶಕರಾಗಿ ಅರ್ಚನಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more