ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಪ್ಘಾನಿಸ್ತಾನ: ಧರ್ಮ ದುರಂತದ ಬಳಿಕ ಪ್ರಕೃತಿ ವಿಕೋಪ, ಸಾವಿರಾರು ಸಾವು

By Staff
|
Google Oneindia Kannada News

ಕಾಬೂಲ್‌: ಧರ್ಮ ವಿಕೋಪದ ದುರಂತದಿಂದ ಇನ್ನೂ ಹೊರಬರದ ಆಪ್ಘಾನಿಸ್ತಾನದಲ್ಲೀಗ ಪ್ರಕೃತಿ ವಿಕೋಪದ ತಾಂಡವ. ಉತ್ತರ ಆಪ್ಘಾನಿಸ್ತಾನದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಸುಮಾರು 5 ಸಾವಿರ ಮಂದಿ ಸಾವಿಗೀಡಾಗಿರುವ ಹಾಗೂ 10 ಸಾವಿರ ಮಂದಿ ನಿರ್ವಸಿತರಾಗಿರುವ ಭೀತಿಯನ್ನು ವಿಶ್ವಸಂಸ್ಥೆ ಹಾಗೂ ಆಪ್ಘನ್‌ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಮಾರ್ಚ್‌ 25 ರಂದು ಸ್ಥಳೀಯ ಕಾಲಮಾನ 19: 30 ರ ಸುಮಾರಿಗೆ ಉತ್ತರ ಕಾಬೂಲ್‌ಗೆ 109 ಮೈಲು ದೂರದ ನಹರಿನ್‌ ಪಟ್ಟಣದಲ್ಲಿ ಸಂಭವಿಸಿದ್ದು , ಭೂಕಂಪದ ತೀವ್ರತೆ ರಿಕ್ಟರ್‌ ಮಾಪಕದಲ್ಲಿ 6.0 ಕ್ಕಿಂತ ಹೆಚ್ಚಾಗಿತ್ತು .

ಆಪ್ಘನ್‌ ಅಧಿಕಾರಿಗಳು ತುರ್ತು ಅಂತರರಾಷ್ಟ್ರೀಯ ನೆರವಿಗೆ ಮನವಿ ಮಾಡಿದ್ದು , ಅಂತರರಾಷ್ಟ್ರೀಯ ಭದ್ರತಾ ಸಹಾಯ ಪಡೆಗಳು ಕಾಬೂಲ್‌ನಲ್ಲಿ ತಳವೂರಿವೆ. ಈ ನಡುವೆ ಸಾವು ನೋವಿನ ಸಂಖ್ಯೆ ಸತತವಾಗಿ ಏರುತ್ತಿದ್ದು , 1200 ರಿಂದ 4800 ರಷ್ಟು ಮಂದಿ ಸಾವಿಗೀಡಾಗಿರಬಹುದೆಂದು ಆಪ್ಘನ್‌ನ ಮಧ್ಯಂತರ ಸರ್ಕಾರದ ನಾಯಕ ಹಮೀದ್‌ ಕರಾರಿkು ತಿಳಿಸಿದ್ದಾರೆ. ನಹರಿನ್‌ ಸುತ್ತಮುತ್ತಲೂ 1800 ಕ್ಕೂ ಹೆಚ್ಚು ನತದೃಷ್ಟರು ಜೀವ ಕಳಕೊಂಡಿರುವುದಾಗಿ ನೀರು ಮತ್ತು ಸ್ವಾಭಾವಿಕ ಸಂಪನ್ಮೂಲಗಳ ಸಚಟಿವ ಹಜೀಜ್‌ ಮಂಗಳ್‌ ಹುಸೇನ್‌ ಪಾಕಿಸ್ತಾನ ಮೂಲದ ಅಪ್ಘನ್‌ ಇಸ್ಲಾಮಿಕ್‌ ಪ್ರೆಸ್‌ಗೆ ತಿಳಿಸಿದ್ದಾರೆ.

ಮಾರ್ಚ್‌ 26 ರಂದು ಭೂಕಂಪದ ಅಲೆಗಳು ಮರುಕಳಿಸುತ್ತಿದ್ದು , ಪ್ರತಿ ಎರಡು ಗಂಟೆಗೊಮ್ಮೆ ಭೂಕಂಪ ಸಂಭವಿಸುತ್ತಿದೆ ಎಂದು ವರದಿಗಳು ತಿಳಿಸಿವೆ. ಕಾಬೂಲ್‌ ಉತ್ತರಕ್ಕೆ 120 ಕಿಮೀ ದೂರದ ಹಿಂದೂಕುಷ್‌ ಪರ್ವತಗಳಲ್ಲಿ ಭೂಕಂಪದ ಕೇಂದ್ರ ಇತ್ತೆನ್ನಲಾಗಿದೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X