ಶಿವಮೊಗ್ಗ ನಗರಿಯಲ್ಲಿ ಮನೆಗಾವಲಿಗೆ ಹುಲಿ ಮರಿಗಳು!

ಹುಲಿ ಮರಿಗಳ ತಂದದ್ದು ಎಲ್ಲಿಂದ?
ತ್ಯಾವರೆಕೊಪ್ಪ ವನ್ಯ ಧಾಮದಿಂದ. ಒಂದು ಹುಲಿ 9 ಮರಿಗಳನ್ನು ಹಾಕುತ್ತದೆ. ಎಲ್ಲಾ ಮರಿಗಳ ಪಾಲನೆ ಧಾಮದ ಸಿಬ್ಬಂದಿಗೆ ಕಷ್ಟ. ಅದಕ್ಕೇ ಅವರು ಕಂಡುಕೊಂಡ ಮಾರ್ಗ- ಹುಲಿ ಮರಿಗಳನ್ನು ಸಾಕಲು ಜನರಿಗೆ ಕೊಡುವುದು. ಪತ್ರಿಕೆ ಎಂಬ ಹೆಸರಿನ ಸ್ಥಳೀಯ ದಿನ ಪತ್ರಿಕೆಯಲ್ಲಿ ಈ ಸುದ್ದಿ ಪ್ರಕಟವಾಗಿದೆ.
ಮುದ್ದು ಬೆಕ್ಕಿನಂತೆ ಹುಲಿ ಮರಿಗಳೂ ಸೊಗಸು. ಆಕಾರದಲ್ಲಿ ಕೊಂಚ ದೊಡ್ಡದಾಗಿವೆ. ಪ್ರೀತಿ ತೋರಿದರೆ ಅವು ನಮಗೆ ಕೆಡಕು ಮಾಡುವುದಿಲ್ಲ. ಇವಕ್ಕೆ ಹೆದರಿ ಕಳ್ಳಕಾಕರು ಹತ್ತಿರ ಸುಳಿಯುವುದಿಲ್ಲ. ಯಾರೋ ಎಲ್ಲಾ ದೋಚಿಕೊಂಡು ಹೋದಮೇಲೆ ಪೊಲೀಸ್ ಠಾಣೆಗೆ ದೂರು ಕೊಟ್ಟರೂ, ಎಷ್ಟೋ ಬಾರಿ ಪ್ರಯೋಜನವಾಗುವುದಿಲ್ಲ. ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳಲು ಹುಲಿ ಮರಿಗಳ ಸಾಕುವ ರೂಢಿ ಒಳ್ಳೆಯದು ಎನ್ನುತ್ತಾರೆ ಹುಲಿ ಮರಿ ಸಾಕುತ್ತಿರುವವರು.
ಒಮ್ಮೆ ಹುಲಿ ಮರಿಗಳು ರಕ್ತದ ರುಚಿ ಕಾಣಲಿ, ಅಪಾಯವನ್ನು ಮನೆಯಲ್ಲಿ ತಂದಿಟ್ಟುಕೊಂಡದ್ದು ಆಗ ಗೊತ್ತಾಗುತ್ತದೆ. ಹುಲಿ ಮರಿ ಸಾಕುವುದು ರಕ್ಷಣೆಯ ಒಳ್ಳೆ ಮಾರ್ಗ ಎಂದು ಹೇಳುವುದು ಮುಠ್ಠಾಳತನ ಎನ್ನುತ್ತಾರೆ ಸ್ಥಳೀಯ ಪೊಲೀಸ್ ವಕ್ತಾರ. (ಇನ್ಫೋ ವಾರ್ತೆ)












Click it and Unblock the Notifications