Get Updates
Get notified of breaking news, exclusive insights, and must-see stories!

ರಷ್ಯಾದಲ್ಲಿ ವಿಮಾನ ಅಪಘಾತ, 24 ಮಂದಿ ದುರ್ಮರಣ

ಮಾಸ್ಕೋ: ಉತ್ತರ ರಷ್ಯಾ ಹಾಗೂ ಮಾಸ್ಕೋದ ನಡುವೆ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಸ್ಫೋಟಗೊಂಡು ವಿಮಾನದಲ್ಲಿದ್ದ ಎಲ್ಲ 24 ಮಂದಿ ಸಾವನ್ನಪ್ಪಿದ್ದಾರೆ ಎಂದು ರಿಯಾ ನೊವೊಸ್ತಿ ಸುದ್ದಿ ಸಂಸ್ಥೆ ಪೊಲೀಸ್‌ ಮೂಲಗಳನ್ನುಲ್ಲೇಖಿಸಿ ವರದಿ ಮಾಡಿದೆ.

ಸೋಮವಾರ ರಾತ್ರಿ ರೇಡಾರ್‌ ಕಣ್ಣಿನಿಂದ ಮರೆಯಾದ ಇಲ್ಯುಶಿನ್‌ ಐಎಲ್‌-18 ವಿಮಾನ, ಉತ್ತರದ ಟ್ವೆರ್‌ ಪ್ರದೇಶದ ಕಲ್ಯಾಜಿನ್‌ ಹಳ್ಳಿಯಲ್ಲಿ ಕಂಡುಬಂದಿದೆ. 16 ಮಂದಿ ಪ್ರಯಾಣಿಕರು ಹಾಗೂ 6 ಮಂದಿ ಸಿಬ್ಬಂದಿಯನ್ನು ಅಪಘಾತಕ್ಕೊಳಗಾದ ವಿಮಾನ ಒಳಗೊಂಡಿತ್ತು . ವಿಮಾನದ ಪೈಲಟ್‌ಗಳು ಆಪಾಯದ ಬಗ್ಗೆ ಯಾವುದೇ ಮುನ್ಸೂಚನೆಯನ್ನು ನೀಡಿಲ್ಲ ಎಂದು ರಷ್ಯಾದ ಎಮರ್ಜೆನ್ಸಿ ಸಚಿವಾಲಯದ ಮೂಲಗಳು ತಿಳಿಸಿವೆ.

1957 ರಲ್ಲಿ ಹಾರಾಟ ಪ್ರಾರಂಭಿಸಿದ ನಾಲ್ಕು ಪ್ರೊಫೆಲ್ಲರ್‌ಗಳ ಇಲ್ಯುಶಿನ್‌ ಐಎಲ್‌-18 ವಿಮಾನ 100 ಆಸನಗಳ ಸಾಮರ್ಥ್ಯವನ್ನು ಹೊಂದಿತ್ತು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+