ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂತ್ರಸ್ತ ಭಾರತೀಯರಿಗೆ ಪರಿಹಾರ ನೀಡಲು ಒಪ್ಪಿದ ಕೆನಡಾ ಸರ್ಕಾರ

By Staff
|
Google Oneindia Kannada News

ಮಾಂಟ್ರಿಯಲ್‌ : ಲೈಂಗಿಕ ಶೋಷಣೆಗೊಳಗಾದ ಹಾಗೂ ಧಾರ್ಮಿಕ ವಸತಿ ಶಾಲೆಗಳಲ್ಲಿ ಕಳಪೆ ಚಿಕಿತ್ಸೆ ಪಡೆದಿರುವ ಸಾವಿರಾರು ಭಾರತೀಯರಿಗೆ ಪರಿಹಾರ ನೀಡಲು ಕೆನಡಿಯನ್‌ ಸರ್ಕಾರ ಮುಂದೆ ಬಂದಿದೆ.

ನಾವು ಭಾರತೀಯರೊಂದಿಗೆ ನೇರ ಒಪ್ಪಂದಕ್ಕೆ ಬರಲು ಮುಂದಾಗಿದ್ದೇವೆ. ಅವರು ಕೇಳಿರುವ ಮೊತ್ತದಲ್ಲಿ ಪ್ರತಿಶತ 70 ರಷ್ಟನ್ನು ನೀಡಲು ಸಿದ್ಧ ಎಂದು ಕೆನಡಾದ ಉಪ ಪ್ರಧಾನಿ ಹರ್ಬ್‌ ಗ್ರೇ ಹೇಳಿದ್ದಾರೆ. ಹರ್ಬ್‌ ಅವರ ಹೇಳಿಕೆಯನ್ನು ಸಿಬಿಸಿ ಟೆಲಿವಿಷನ್‌ ಸೋಮವಾರ ವರದಿ ಮಾಡಿದೆ.

ಲೈಂಗಿಕ ಶೋಷಣೆ ಹಾಗೂ ಶಾಲೆಗಳಲ್ಲಿ ಕಳಪೆ ಚಿಕಿತ್ಸೆ ಕುರಿತಂತೆ, ಸುಮಾರು 8500 ಭಾರತೀಯರು 1998 ರಲ್ಲಿ ಪರಿಹಾರ ಕೋರಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಇವರಲ್ಲಿ ಈಗಾಗಲೇ ಸುಮಾರು ಸಾವಿರ ಮಂದಿ ನ್ಯಾಯಾಲಯದ ಹೊರಗಡೆ ಸರ್ಕಾರದೊಂದಿಗೆ ಒಪ್ಪಂದಕ್ಕೆ ಬಂದಿದ್ದಾರೆ.

(ಏಜೆನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X