ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆ ಯಾತ್ರೆಗೆ ದಕ್ಷಿಣ ರೈಲ್ವೆಯಿಂದ ವಿಶೇಷರೈಲು ಸಂಚಾರ

By Staff
|
Google Oneindia Kannada News

ಬೆಂಗಳೂರು : ಸ್ವಾಮಿ ಅಯ್ಯಪ್ಪನ ದರ್ಶನಕ್ಕಾಗಿ ಶಬರಿಮಲೆಗೆ ತೆರಳುವ ಭಕ್ತಾದಿಗಳ ಅನುಕೂಲಕ್ಕಾಗಿ ಹಾಗೂ ಹಬ್ಬಗಳ ಕಾಲವಾದ ಚಳಿಗಾಲದಲ್ಲಿ ಸಾಮಾನ್ಯವಾಗಿ ಹೆಚ್ಚಾಗುವ ಪ್ರವಾಸಿಗರ ಒತ್ತಡವನ್ನು ಕಡಿಮೆ ಮಾಡಲು, ದಕ್ಷಿಣ ರೈಲ್ವೆಯು ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ ವಿಶೇಷ ರೈಲುಗಳ ಸಂಚಾರ ಆರಂಭಿಸಲಿದೆ.

  • ಬೆಂಗಳೂರು - ಕನ್ಯಾಕುಮಾರಿ ನಡುವೆ (15 ದಿನಕ್ಕೊಮ್ಮೆ) ನವೆಂಬರ್‌ 19ರಿಂದ ಜನವರಿ 16ರವರೆಗೆ ಪ್ರತಿ ಸೋಮವಾರ ಹಾಗೂ ಬುಧವಾರ ವಿಶೇಷ ರೈಲು ಸಂಚರಿಸಲಿದೆ. ನ.19ರಂದು ರಾತ್ರಿ 10ಕ್ಕೆ ಬೆಂಗಳೂರು ಬಿಡುವ ರೈಲು ಮಾರನೆ ದಿನ ಕನ್ಯಾಕುಮಾರಿ ತಲುಪುತ್ತದೆ. ಅಂದೇ ಅಲ್ಲಿಂದ ಬೆಂಗಳೂರಿನತ್ತ ರೈಲು ಹೊರಡಲಿದೆ.
  • ನವೆಂಬರ್‌ 3ರಿಂದ ಜನವರಿ 19ರವರೆಗೆ ಬೆಂಗಳೂರು - ಮದುರೈ ನಡುವೆ ವಾರಕ್ಕೊಮ್ಮೆ ವಿಶೇಷ ರೈಲು ಸಂಚರಿಸಲಿದ್ದು, ಶನಿವಾರ ಸಂಜೆ 7-15ಕ್ಕೆ ಬೆಂಗಳೂರು ಬಿಡುವ ರೈಲು ಭಾನುವಾರ ಬೆಳಗ್ಗೆ 7-05ಕ್ಕೆ ಮದುರೈ ತಲುಪಲಿದೆ. ಭಾನುವಾರ ರಾತ್ರಿ 9-45ಕ್ಕೆ ಮದುರೈನಿಂದ ಹೊರಡುವ ರೈಲು ಹೊಸೂರು, ಧರ್ಮಪುರಿ, ಸೇಲಂ, ಈರೋಡ್‌, ಕರೂರು ಮತ್ತು ದಿಂಡಿಗಲ್‌ ಮಾರ್ಗವಾಗಿ ಸೋಮವಾರ ಬೆಳಗ್ಗೆ 7.55ಕ್ಕೆ ಬೆಂಗಳೂರಿಗೆ ಮರಳಲಿದೆ.
  • ಪ್ರತಿದಿನ ಹರಿಹರ - ಹುಬ್ಬಳ್ಳಿ ನಡುವೆ ಅಕ್ಟೋಬರ್‌ 14ರಿಂದ ಡಿಸೆಂಬರ್‌ 31ರವರೆಗೆ ವಿಶೇಷ ರೈಲು ಸಂಚರಿಸಲಿದೆ. ಮಧ್ಯಾಹ್ನ 2ಗಂಟೆಗೆ ಹರಿಹರದಿಂದ ಹೊರಡುವ ರೈಲು ಸಂಜೆ 6-30ಕ್ಕೆ ಹುಬ್ಬಳ್ಳಿ ತಲುಪಲಿದೆ. ಅದೇ ದಿನ ಬೆಳಗ್ಗೆ 9-45ಕ್ಕೆ ಹುಬ್ಬಳ್ಳಿಯಿಂದ ಹೊರಡುವ ರೈಲು ಮಧ್ಯಾಹ್ನ 12-15ಕ್ಕೆ ಹರಿಹರ ತಲುಪಲಿದೆ.
  • ಅರಸೀಕೆರೆ - ಮೈಸೂರು ನಡುವೆ ಅಕ್ಟೋಬರ್‌ 14ರಿಂದ ಡಿಸೆಂಬರ್‌ 31ರವರೆಗೆ ಪ್ರತಿದಿನ ಸಂಚರಿಸುವ ವಿಶೇಷ ರೈಲು ಮಧ್ಯಾಹ್ನ 2.25ಕ್ಕೆ ಅರಸೀಕೆರೆಯಿಂದ ಹೊರಟು ಸಂಜೆ 5-30ಕ್ಕೆ ಮೈಸೂರು ತಲುಪಲಿದೆ. ಅದೇ ದಿನ ಬೆಳಗ್ಗೆ 10-15ಕ್ಕೆ ಮೈಸೂರಿನಿಂದ ಹೊರಟ ರೈಲು ಮಧ್ಯಾಹ್ನ 1.55ಕ್ಕೆ ಅರಸೀಕೆರೆಗೆ ಮರಳಲಿದೆ.
  • ಮಂಗಳೂರು - ತಿರುವನಂತಪುರ (ವಾರಕ್ಕೊಮ್ಮೆ) ನಡುವೆ ವಿಶೇಷ ರೈಲು ನವೆಂಬರ್‌ 16ರಿಂದ ಸಂಚರಿಸಲಿದೆ. ಶುಕ್ರವಾರ ರಾತ್ರಿ 10 ಗಂಟೆಗೆ ಮಂಗಳೂರು ಬಿಡುವ ರೈಲು ಮಾರನೆ ದಿನ ಮಧ್ಯಾಹ್ನ 12-40ಕ್ಕೆ ತಿರುವನಂತಪುರ ತಲುಪಲಿದೆ. ಶನಿವಾರ ಮಧ್ಯಾಹ್ನ 3-05ಕ್ಕೆ ತಿರುವನಂತಪುರದಿಂದ ಹೊರಟು ಮಾರನೆ ದಿನ ಬೆಳಗ್ಗೆ ಮಂಗಳೂರು ತಲುಪಲಿದೆ.
  • ಬೆಂಗಳೂರು - ಅಜ್ಮೀರ್‌ (ವಾರಕ್ಕೊಮ್ಮೆ) ನಡುವೆ ಅಕ್ಟೋಬರ್‌ 8ರಿಂದ ಜನವರಿ 14ರವರೆಗೆ ಸಂಚರಿಸುವ ವಿಶೇಷ ರೈಲು ಮಂಗಳವಾರ ಮಧ್ಯಾಹ್ನ 1.30ಕ್ಕೆ ಬೆಂಗಳೂರಿನಿಂದ ಹೊರಟು ಬುಧವಾರ ಮಧ್ಯಾಹ್ನ 2.30ಕ್ಕೆ ಅಜ್ಮೀರ್‌ ತಲುಪಲಿದೆ. ಅದೇ ದಿನ ರಾತ್ರಿ 9ಗಂಟೆಗೆ ಹೊರಡುವ ರೈಲು ಶುಕ್ರವಾರ ರಾತ್ರಿ 10-30ಕ್ಕೆ ಬೆಂಗಳೂರಿಗೆ ಬರಲಿದೆ.
  • ಯಶವಂತಪುರ -ಹೌರಾ (ವಾರಕ್ಕೊಮ್ಮೆ) ನಡುವೆ ಅಕ್ಟೋಬರ್‌ 14ರಿಂದ ಜನವರಿ 6ರವರೆಗೆ ಸಂಚರಿಸುವ ವಿಶೇಷ ರೈಲು ಭಾನುವಾರ ಮಧ್ಯಾಹ್ನ 3-45ಕ್ಕೆ ಯಶವಂತಪುರದಿಂದ ಹೊರಟು ಮಂಗಳವಾರ ಬೆಳಗ್ಗೆ 4-10ಕ್ಕೆ ಹೌರಾ ತಲುಪಲಿದೆ. ಅಂದೇ ಸಂಜೆ 7ಕ್ಕೆ ಅಲ್ಲಿಂದ ಹೊರಡುವ ರೈಲು ಗುರುವಾರ ಬೆಳಗ್ಗೆ 8 ಗಂಟೆಗೆ ಯಶವಂತಪುರಕ್ಕೆ ಮರಳಲಿದೆ ಎಂದು ದಕ್ಷಿಣ ರೈಲ್ವೆ ಪ್ರಕಟಣೆ ತಿಳಿಸಿದೆ.
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X