ಹಾವೇರಿ ನಗರದಲ್ಲಿ ಧಾರಾಕಾರ ಮಳೆ : 200 ಮನೆ ಜಲಾವೃತ
ಹಾವೇರಿ : ಹಾವೇರಿಯಲ್ಲಿ ಭಾನುವಾರ ಸಂಜೆ ಹಾಗೂ ರಾತ್ರಿ ಬಿದ್ದ ಧಾರಾಕಾರ ಮಳೆಯಿಂದಾಗಿ ಇಲ್ಲಿನ ಶಿವಾಜಿನಗರದ ಸುಮಾರು 200ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡವು. ಇದರಿಂದ ರೊಚ್ಚಿಗೆದ್ದ ನಾಗರಿಕರು, ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆತಡೆ ನಡೆಸಿ, ಶಾಶ್ವತ ಪರಿಹಾರ ಕಲ್ಪಿಸುವಂತೆ ಪುರಸಭೆಯನ್ನು ಒತ್ತಾಯಿಸಿದರು.
ಭಾನುವಾರ ಸುಮಾರು ಒಂದೂವರೆ ಗಂಟೆಗಳಿಗೂ ಹೆಚ್ಚುಕಾಲ ಧಾರಾಕಾರವಾಗಿ ಮಳೆ ಸುರಿದ ಪರಿಣಾಮವಾಗಿ ಪಿ.ಬಿ. ರಸ್ತೆಯ ಹಲವು ಅಂಗಡಿ, ಮನೆಗಳಿಗೆ ನೀರು ನುಗ್ಗಿತು. ಮೂರು ಅಂಗಡಿಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿಹೋದವು.
ಮಧುಬನ್ ಹೊಟೆಲ್‌ನ ಬೆಂಚು,ಕುರ್ಚಿ, ಫ್ರಿಜ್, ಷೋಕೇಸ್ ಮೊದಲಾದ ವಸ್ತುಗಳು ಹಾನಿಗಳೊಗಾದರೆ, ಪಕ್ಕದ ಸಿಮೆಂಟ್ ಗೋಡಾನ್‌ನಲ್ಲಿದ್ದ ಸೀಮೆಂಟ್ ನೀರುಪಾಲಾಯಿತು. ಇದರಿಂದ ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ ಎನ್ನಲಾಗಿದೆ.
ನಗರದ ತಗ್ಗು ಪ್ರದೇಶದ 200ಕ್ಕೂ ಹೆಚ್ಚು ಮನೆಗಳು ಭಾರಿ ಮಳೆಯಿಂದ ಜಲಾವೃತಗೊಂಡಿದ್ದವು. ಪುರಜನರು, ತಮ್ಮ ಮನೆ, ಮಳಿಗೆಗಳಿಗೆ ನುಗ್ಗಿದ ನೀರನ್ನು ಹೊರಹಾಕಲು ರಾತ್ರಿಯಿಡೀ ಹೆಣಗಾಡಿದರು. ನಗರದ ಎಲ್ಲ ಚರಂಡಿಗಳಲ್ಲೂ ಮಣ್ಣು ತುಂಬಿಕೊಂಡಿರುವುದೇ ಈ ಉಪಟಳಕ್ಕೆ ಕಾರಣ ಎಂದು ಆರೋಪಿಸಿದ ನಾಗರಿಕರು, ಪುರಸಭೆಯ ನಿರ್ಲಕ್ಷ್ಯ ಖಂಡಿಸಿ, ಪ್ರತಿಭಟನೆ ನಡೆಸಿದರು.
(ಇನ್‌ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications