ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಕಷ್ಟದ ಸಮಯದಲ್ಲಿ ಜೊತೆಗೆ ನಿಂತ ಮುಷರ್ರಫ್‌ಗೆ ಬುಷ್‌ ಧನ್ಯವಾದ

By Staff
|
Google Oneindia Kannada News

ಇಸ್ಲಮಾಬಾದ್‌: ಭಯೋತ್ಪಾದಕತೆಯನ್ನು ಹತ್ತಿಕ್ಕುವ ಅಂತರರಾಷ್ಟ್ರೀಯ ಆಂದೋಲನಕ್ಕೆ ಸಂಪೂರ್ಣ ಬೆಂಬಲ ಘೋಷಿಸಿರುವ ಪಾಕಿಸ್ತಾನದ ಅಧ್ಯಕ್ಷ ಜನರಲ್‌ ಪರ್ವೇಜ್‌ ಮುಷರ್ರಫ್‌ ಅವರನ್ನು ಅಮೆರಿಕದ ಅಧ್ಯಕ್ಷ ಬುಷ್‌ ಅಭಿನಂದಿಸಿದ್ದಾರೆ.

ತಾಲಿಬಾನ್‌ ವಿರುದ್ಧ ದಾಳಿ ನಡೆಸಲಿಕ್ಕಾಗಿ ಪಾಕಿಸ್ತಾನದಲ್ಲಿ ಅಮೆರಿಕದ ಸೇನಾ ನೆಲೆಗಳನ್ನು ಸ್ಥಾಪಿಸಲು ಮುಷರ್ರಫ್‌ ಅವರ ಒಪ್ಪಿಗೆ ಪ್ರಕಟವಾಗುತ್ತಿದ್ದಂತೆಯೇ, ದೂರವಾಣಿ ಮೂಲಕ ಮುಷರ್ರಫ್‌ ಅವರನ್ನು ಸಂಪರ್ಕಿಸಿದ ಬುಷ್‌ ಅಭಿನಂದನೆಗಳನ್ನು ಸಲ್ಲಿಸಿದರು. ಸಂಕಷ್ಟದ ಸಮಯದಲ್ಲಿ ಅಮೆರಿಕದ ಜೊತೆ ನಿಲ್ಲುತ್ತಿರುವುದಕ್ಕಾಗಿ ಬುಷ್‌ ಹೃತ್ಪೂರ್ವಕ ಧನ್ಯವಾದಗಳನ್ನು ಮುಷರ್ರಫ್‌ಗೆ ಅರ್ಪಿಸಿದರು.

ಈ ಮುನ್ನ ಸಭೆ ಸೇರಿದ್ದ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಮಿತಿ ಹಾಗೂ ಸಂಪುಟ ಸಭೆ ಭಯೋತ್ಪಾದಕತೆಯ ವಿರುದ್ಧ ಹೋರಾಡಲು ಅಮೆರಿಕೆಗೆ ಸಂಪೂರ್ಣ ಸಹಕಾರ ನೀಡುವ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿತು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X