Get Updates
Get notified of breaking news, exclusive insights, and must-see stories!

ಹೆಗಡೆ-75: ಕಾರ್ಯಕ್ರಮಕ್ಕೆ ಕೃಷ್ಣ ಸೇರಿದಂತೆ ರಾಜಕಾರಣಿಗಳ ಹಿಂಡು

ಬೆಂಗಳೂರು : ಹಿರಿಯ ರಾಜಕಾರಣಿ ಹಾಗೂ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ 75 ನೇ ಹುಟ್ಟುಹಬ್ಬ ಆಚರಣೆ (ಆ.29)ಯ ವೇದಿಕೆ ಸಿದ್ಧವಾಗಿದ್ದು, ಕಾರ್ಯಕ್ರಮಕ್ಕೆ ಆಗಮಿಸಲು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ , ಮಾಜಿ ಪ್ರಧಾನಿ ಚಂದ್ರಶೇಖರ್‌, ಕೇಂದ್ರ ಸಚಿವರಾದ ವೆಂಕಯ್ಯನಾಯ್ಡು ಮತ್ತು ಸುಷ್ಮಾ ಸ್ವರಾಜ್‌, ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಫರೂಕ್‌ ಅಬ್ದುಲ್ಲಾ ಹಾಗೂ ಎನ್‌ಸಿಪಿ ನಾಯಕ ಶರದ್‌ ಪವಾರ್‌ ಸಮ್ಮತಿಸಿದ್ದಾರೆ.

ಹೆಗಡೆಯವರ ಒಂದಾನೊಂದು ಕಾಲದ ಸಂಗಾತಿ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ . ಎನ್‌ಡಿಎ ಸಂಚಾಲಕ ಜಾರ್ಜ್‌ ಫರ್ನಾಂಡಿಸ್‌ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಹುಟ್ಟುಹಬ್ಬದ ಸಂಘಟಕರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರಗಳನ್ನು ನೀಡಿದರು.

ಡಯಾಲಿಸಿಸ್‌ಗೆ ಒಳಗಾಗುತ್ತಿರುವ ಮಾಜಿ ಪ್ರಧಾನಿ ವಿ.ಪಿ.ಸಿಂಗ್‌ ಅವರು ವೈದ್ಯರು ಅವಕಾಶ ಮಾಡಿಕೊಟ್ಟಲ್ಲಿ ಹೆಗಡೆಯವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಫರ್ನಾಂಡಿಸ್‌ ಅವರಿಗೆ ಆಹ್ವಾನ ಕಳಿಸದಿರುವ ಬಗ್ಗೆ ಯಾವುದೇ ಕಾರಣ ನೀಡಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಯುಕ್ತ ಜನತಾದಳದ ಪ್ರಧಾನ ಕಾರ್ಯದರ್ಶಿ ಬಸವರಾಜ ರಾಯರೆಡ್ಡಿ ನಿರಾಕರಿಸಿದರು. ವಾಜಪೇಯಿ ಸಂಪುಟದಲ್ಲಿ ಹೆಗಡೆ ಸ್ಥಾನ ವಂಚಿತರಾಗಲು ಜಾರ್ಜ್‌ ಕಾರಣ ಎನ್ನುವ ಹಳೆಯ ಜಗಳ ಆಹ್ವಾನ ಪತ್ರ ಕಳಿಸದಿರಲು ಕಾರಣವೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ರಾಯರೆಡ್ಡಿ ಉತ್ತರಿಸಲಿಲ್ಲ .

ಹೆಗಡೆಯವರ ಹಳೆಯ ಸ್ನೇಹಿತರನ್ನು ಕಲೆಹಾಕುವ ವೇದಿಕೆಯನ್ನು ನಾವು ರೂಪಿಸುತ್ತಿದ್ದೇವೆ. ಈ ಪ್ರಯತ್ನದಲ್ಲಿ ಯಾವುದೇ ರಾಜಕಾರಣವಿಲ್ಲ . ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರೂ ಭಾಗವಹಿಸುತ್ತಾರೆ ಎಂದು ರಾಯರೆಡ್ಡಿ ಹೇಳಿದರು.

(ಪಿಟಿಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+