Get Updates
Get notified of breaking news, exclusive insights, and must-see stories!

Janhvi Kapoor: ಅಶ್ಲೀಲ ವೆಬ್‌ಸೈಟ್‌ನಲ್ಲಿ ನನ್ನ ಫೋಟೋ ನೋಡಿದ್ದೆ: ಹದಿಹರೆಯದ ಕಹಿ ಘಟನೆ ಬಿಚ್ಚಿಟ್ಟ ನಟಿ ಜಾನ್ವಿ ಕಪೂರ್

ಬಾಲಿವುಡ್ ನಟಿ ಜಾನ್ವಿ ಕಪೂರ್ ಇತ್ತೀಚಿನ ಸಂದರ್ಶನವೊಂದರಲ್ಲಿ ತಮಗೆ ಎದುರಾದ ಅತ್ಯಂತ ಭೀಕರ ಮತ್ತು ಮುಜುಗರದ ಘಟನೆಯೊಂದನ್ನು ನೆನೆದಿದ್ದಾರೆ. ತಮ್ಮ ಹದಿಹರೆಯದ ಪ್ರಾಯದಲ್ಲೇ ಅಶ್ಲೀಲ ವೆಬ್‌ಸೈಟ್‌ನಲ್ಲಿ ತಮ್ಮದೇ ಆದ 'ಮಾರ್ಫ್' (ತಿರುಚಿದ) ಚಿತ್ರಗಳನ್ನು ನೋಡಿ ಆಘಾತಕ್ಕೊಳಗಾಗಿದ್ದಾಗಿ ಅವರು ತಿಳಿಸಿದ್ದಾರೆ.

ಶಾಲೆಯಲ್ಲಿ ಬಯಲಾದ ಸತ್ಯ

ರಾಜ್ ಶಮಾನಿ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಜಾನ್ವಿ, ಶಾಲಾ ದಿನಗಳ ಆ ಕಹಿ ಘಟನೆಯನ್ನು ವಿವರಿಸಿದ್ದಾರೆ. "ನನಗೆ ಆಗ ಕೇವಲ 15 ವರ್ಷ. ನಮ್ಮ ಶಾಲೆಯಲ್ಲಿ ಐಟಿ (IT) ಕ್ಲಾಸ್ ನಡೆಯುತ್ತಿತ್ತು. ಆಗ ಕೆಲವು ಹುಡುಗರು ತಮಾಷೆಗಾಗಿ ಅಶ್ಲೀಲ ವೆಬ್‌ಸೈಟ್‌ಗಳನ್ನು ನೋಡುತ್ತಿದ್ದರು. ಆ ಸಮಯದಲ್ಲಿ ಆ ಸೈಟ್‌ನಲ್ಲಿ ನನ್ನದೇ ಫೋಟೋ ಇರುವುದನ್ನು ನಾನು ನೋಡಿದೆ. ಅದು ಬಹುಶಃ ಈಗಿನ ಡೀಪ್‌ಫೇಕ್ ತಂತ್ರಜ್ಞಾನದಂತೆಯೇ ಇತ್ತು. ಶಾಲಾ ಹಂತದಲ್ಲೇ ಅಂತಹ ಅನುಭವ ಆಗಿದ್ದು ನನಗೆ ತುಂಬಾ ವಿಚಿತ್ರ ಮತ್ತು ನೋವು ತಂದಿತ್ತು ಎಂದು ಜಾನ್ವಿ ಹೇಳಿದ್ದಾರೆ.

Janhvi Kapoor

ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿರುವ ಇಂತಹ ಸೈಬರ್ ಕಿರುಕುಳದ ಬಗ್ಗೆ ಜಾನ್ವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಒಂದು ಹಂತದಲ್ಲಿ ನಾನು ಸೆಲೆಬ್ರಿಟಿ ಆಗಿರುವುದಕ್ಕೆ ನಾವು ತೆರಬೇಕಾದ ಬೆಲೆ ಇದು ಅಂದುಕೊಂಡೆ. ಇಂದಿನ ಸೋಶಿಯಲ್ ಮೀಡಿಯಾ ಜಗತ್ತಿನಲ್ಲಿ ನೈತಿಕತೆ ಎಂಬುದು ಮರೆಯಾಗುತ್ತಿದೆ" ಎಂದು ಅವರು ವಿಷಾದಿಸಿದ್ದಾರೆ.

ತಮ್ಮ ಎಐ ಜನರೇಟೆಡ್ ಚಿತ್ರಗಳು ಈಗಲೂ ಅಂತರ್ಜಾಲದಲ್ಲಿ ಹರಿದಾಡುತ್ತಿವೆ ಎಂದು ತಿಳಿಸಿದ ಜಾನ್ವಿ, ಇಂದಿಗೂ ಇಂತಹ ವಿಷಯಗಳು ತಮ್ಮನ್ನು ಮಾನಸಿಕವಾಗಿ ಕುಗ್ಗಿಸುತ್ತವೆ ಎಂದು ಒಪ್ಪಿಕೊಂಡಿದ್ದಾರೆ. ಎಷ್ಟು ತರ್ಕಬದ್ಧವಾಗಿ ಆಲೋಚಿಸಿದರೂ, ಒಬ್ಬ ಹೆಣ್ಣುಮಗಳಾಗಿ ಇಂತಹ ವಿಕೃತ ಮನಸ್ಥಿತಿಯ ಕೆಲಸಗಳು ತೀವ್ರವಾಗಿ ಬಾಧಿಸುತ್ತವೆ ಎಂದು ಅವರು ಹೇಳಿದ್ದಾರೆ.

ಜಾನ್ವಿ ಕಪೂರ್ ಅವರ ಈ ಹೇಳಿಕೆಯು ಸಿನಿಮಾ ತಾರೆಯರು, ಅದರಲ್ಲೂ ವಿಶೇಷವಾಗಿ ಮಹಿಳಾ ನಟಿಯರು ಎದುರಿಸುತ್ತಿರುವ ಡಿಜಿಟಲ್ ಕಿರುಕುಳದ ಗಂಭೀರತೆಯನ್ನು ಎತ್ತಿ ತೋರಿಸಿದೆ. ಈ ಹಿಂದೆ ರಶ್ಮಿಕಾ ಮಂದಣ್ಣ ಮತ್ತು ಕತ್ರಿನಾ ಕೈಫ್ ಅವರಂತಹ ನಟಿಯರೂ ಸಹ ಇಂತಹ ಡೀಪ್‌ಫೇಕ್ ವೀಡಿಯೊಗಳಿಗೆ ಬಲಿಯಾಗಿದ್ದರು. ಇದೀಗ ಜಾನ್ವಿ ಕೂಡ ಆ ಕೆಟ್ಟ ಅನುಭವ ಎದುರಿಸಿದ್ದನ್ನು ಹೇಳಿಕೊಂಡಿದ್ದಾರೆ.

ನಾನು ಅಂತಹ ಬಟ್ಟೆ ಧರಿಸಿಯೇ ಇಲ್ಲ

ಜಾನ್ವಿ ಕಪೂರ್ ಇತ್ತೀಚೆಗೆ ಕೃತಕ ಬುದ್ಧಿಮತ್ತೆ (AI) ಮೂಲಕ ಸೃಷ್ಟಿಸಲಾದ ತಮ್ಮ ನಕಲಿ ಚಿತ್ರಗಳ ಬಗ್ಗೆಯೂ ಆತಂಕ ವ್ಯಕ್ತಪಡಿಸಿದ್ದಾರೆ. ಇಂತಹ ಚಿತ್ರಗಳು ತಮ್ಮ ವೃತ್ತಿಜೀವನ ಮತ್ತು ವ್ಯಕ್ತಿತ್ವದ ಮೇಲೆ ಬೀರುತ್ತಿರುವ ಕೆಟ್ಟ ಪರಿಣಾಮಗಳ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದ್ದಾರೆ. ಇಂಟರ್ನೆಟ್‌ನಲ್ಲಿ ಹರಿದಾಡುತ್ತಿರುವ ನನ್ನ ಅನೇಕ ಚಿತ್ರಗಳು ಸಂಪೂರ್ಣವಾಗಿ ಎಐ ಸೃಷ್ಟಿತವಾಗಿವೆ. ಕೆಲವು ಅಧಿಕೃತ ಸುದ್ದಿ ಪುಟಗಳೂ ಸಹ ಇವುಗಳನ್ನು ಹಂಚಿಕೊಳ್ಳುತ್ತಿವೆ. ಆದರೆ ವಾಸ್ತವದಲ್ಲಿ ನಾನು ಅಂತಹ ಬಟ್ಟೆಗಳನ್ನು ಎಂದಿಗೂ ಧರಿಸಿಲ್ಲ ಅಥವಾ ಆ ರೀತಿಯ ಫೋಟೋಶೂಟ್ ಮಾಡಿಸಿಕೊಂಡಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

Janhvi Kapoor

ಇಂತಹ ನಕಲಿ ಚಿತ್ರಗಳು ಸಿನಿಮಾ ರಂಗದಲ್ಲಿ ಕೆಲಸ ಮಾಡುವಾಗ ಹೇಗೆ ಮುಜುಗರ ತರುತ್ತವೆ ಎಂಬುದನ್ನು ಅವರು ವಿವರಿಸಿದ್ದಾರೆ. ಈ ಚಿತ್ರಗಳನ್ನು ನಾನೇ ಪೋಸ್ಟ್ ಮಾಡಿದ್ದೇನೆ ಎಂದು ಜನರು ಭಾವಿಸುತ್ತಾರೆ, ಇದು ನನ್ನ ಬಗ್ಗೆ ತಪ್ಪು ಕಲ್ಪನೆ ಮೂಡಿಸುತ್ತದೆ. ಒಂದು ವೇಳೆ ನಾನು ಯಾವುದಾದರೂ ಸಿನಿಮಾದಲ್ಲಿ ಒಂದು ನಿರ್ದಿಷ್ಟ ಬಟ್ಟೆ ಧರಿಸಲು ಮುಜುಗರ ಎಂದು ನಿರ್ದೇಶಕರಿಗೆ ಹೇಳಿದರೆ, ಅವರು ಈ ಎಐ ಫೋಟೋಗಳನ್ನು ತೋರಿಸಿ 'ನೀವು ಈ ಹಿಂದೆ ಇಂತಹ ಬಟ್ಟೆ ಧರಿಸಿದ್ದೀರಲ್ಲ' ಎಂದು ಕೇಳುವ ಸಾಧ್ಯತೆಯೂ ಇರುತ್ತದೆ. ಅವರು ಕೇಳದಿದ್ದರೂ, ನನ್ನ ಮನಸ್ಸಿನಲ್ಲಿ ಅಂತಹ ಆತಂಕ ಮೂಡುತ್ತದೆ" ಎಂದು ಜಾನ್ವಿ ಬೇಸರ ವ್ಯಕ್ತಪಡಿಸಿದ್ದಾರೆ.

ದೂರು ನೀಡುವ ಧ್ವನಿ ನನಗಿಲ್ಲ

ಇಷ್ಟೆಲ್ಲಾ ಸಮಸ್ಯೆಯಾಗುತ್ತಿದ್ದರೂ ಜಾನ್ವಿ ಏಕೆ ದೂರು ನೀಡುತ್ತಿಲ್ಲ ಎಂಬ ಪ್ರಶ್ನೆಗೆ ಅವರು ಮಾರ್ಮಿಕವಾಗಿ ಉತ್ತರಿಸಿದ್ದಾರೆ. "ನನಗೆ ದೂರು ನೀಡುವಷ್ಟು ದೊಡ್ಡ ಧ್ವನಿ ಇಲ್ಲ ಎಂದು ಅನಿಸುತ್ತದೆ. ಜನರ ಮನಸ್ಥಿತಿ ಹೇಗಿದೆಯೆಂದರೆ, 'ನಿನಗೆ ಜೀವನದಲ್ಲಿ ಇಷ್ಟೆಲ್ಲಾ ಸಿಕ್ಕಿದೆ, ಸ್ವಲ್ಪ ಸಹಿಸಿಕೊ' ಎಂಬ ಧೋರಣೆ ಅವರಲ್ಲಿದೆ. ನಾನು ದೂರು ನೀಡಿದರೆ ಅದು ಉಲ್ಟಾ ನನ್ನ ಮೇಲೆಯೇ ತಿರುಗಿಬೀಳಬಹುದು ಎಂಬ ಭಯವಿದೆ" ಎಂದಿದ್ದಾರೆ. ಕೇವಲ ಜಾನ್ವಿ ಮಾತ್ರವಲ್ಲದೆ, ಗ್ಲಾಮರ್ ಜಗತ್ತಿನ ಹಲವಾರು ಮಹಿಳೆಯರು ಇತ್ತೀಚೆಗೆ ಈ 'ಡೀಪ್‌ಫೇಕ್' ಹಾವಳಿಯ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ತಂತ್ರಜ್ಞಾನದ ಈ ವಿಕೃತ ಬಳಕೆ ನಟಿಯರ ಖಾಸಗಿತನ ಮತ್ತು ವೃತ್ತಿ ಬದುಕಿಗೆ ದೊಡ್ಡ ಕುತ್ತಾಗಿ ಪರಿಣಮಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+