High Speed Rail: ಬೆಂಗಳೂರು ಸೇರಿ 3 ಹೈಸ್ಪೀಡ್ ರೈಲು ಕಾರಿಡಾರ್ ಡಿಪಿಆರ್ 2027ಕ್ಕೆ ಪೂರ್ಣ, ವಿವರ

ನವದೆಹಲಿ: ದೇಶದಲ್ಲಿ ವಂದೇ ಭಾರತ್, ಸ್ಲೀಪರ್ ವಂದೇ ಭಾರತ್ ರೈಲುಗಳು ಮತ್ತು ಅಮೃತ್ ಭಾರತ್ ರೈಲುಗಳು ಕಾರ್ಯಾಚರಣೆಗೆ ಚುರುಕು ನೀಡಲಾಗಿದೆ. ಇದರ ಬೆನ್ನಲ್ಲೆ ರೈಲ್ವೆ ಇಲಾಖೆಯು ಉದ್ದೇಶಿತ 07ಹೈಸ್ಪೀಡ್ ರೈಲು ಕಾರಿಡರ್‌ಗಳ (HSR) ಪೈಕಿ ಮೂರು ಮಾರ್ಗದ ಕಾರಿಡಾರ್ ಯೋಜನೆಗಳಿಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಪೂರ್ಣಗೊಳಿಸಲು 2027ರ ಮಾರ್ಚ್ ಗಡುವು ನೀಡಿದೆ. ಅವು ಯಾವ ಮೂರು ಮಾರ್ಗ, ಎಲ್ಲಿಂದ ಎಲ್ಲಿಗೆ ಸಂಪರ್ಕ ಪೂರ್ಣ ವಿವರ ಇಲ್ಲಿದೆ.

ದೇಶದ ಮೊದಲ ಬುಲೆಟ್ ರೈಲು ಮುಂಬೈ ಮತ್ತು ಅಹಮದಾಬಾದ್ ನಡುವೆ ಸಂಚಾರ ಮಾಡಲಿದೆ. ಇದರ ನಡುವೆ ಕಳೆದ ಫೆಬ್ರವರಿ 1ರಂದು ಕೇಂದ್ರ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 07 ಹೈಸ್ಪೀಡ್ ರೈಲು ಕಾರಿಡಾರ್‌ ನಿರ್ಮಾಣ ಯೋಜನೆ ಘೋಷಿಸಿದರು. ಇದರಲ್ಲಿ ಬೆಂಗಳೂರಿನಿಂದ ಹೈದರಾಬಾದ್ ಮತ್ತು ಚೆನ್ನೈಗೆ ಎರಡು ಕಾರಿಡಾರ್‌ಗಳು ಸೇರಿವೆ.

Railways Ministry

3 ಬುಲೆಟ್ ರೈಲು ಅಥವಾ ಹೈಸ್ಪೀಡ್ ರೈಲು ಕಾರಿಡಾರ್‌ಗಳ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವ ಕೆಲಸಗಳು ಈಗಾಗಲೇ ಆರಂಭವಾಗಿವೆ. ಆ ಕೆಲವು ಮುಂದಿನ ಒಂದು ವರ್ಷದಲ್ಲಿ (2027 ಮಾರ್ಚ್‌ಗೆ) ಪೂರ್ಣಗೊಳಿಸಲು ರೈಲ್ವೆ ಸಚಿವಾಲಯ ಗುರಿ ಹಾಕಿಕೊಂಡಿದೆ.

ಆ ಮೂರು ಎಚ್‌ಎಸ್‌ಆರ್ ಮಾರ್ಗಗಳ ಯಾವುವು?

1. ಹೈದರಾಬಾದ್-ಚೆನ್ನೈ ಹೈಸ್ಪೀಡ್ ರೈಲು ಕಾರಿಡಾರ್

2. ಹೈದರಾಬಾದ್-ಬೆಂಗಳೂರು ಹೈಸ್ಪೀಡ್ ರೈಲು ಕಾರಿಡಾರ್

3. ಪಾಟ್ನಾ-ಸಿಲಿಗುರಿ (ವಾರಣಾಸಿ-ಸಿಲಿಗುರಿ ಕಾರಿಡಾರ್‌ನ ಭಾಗ) ಹೈಸ್ಪೀಡ್ ರೈಲು ಕಾರಿಡಾರ್

ಸದರಿ ಮೇಲಿನ ಮೂರು ಕಾರಿಡಾರ್ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ರೈಲ್ವೆ ಸಚಿವಾಲಯ ನಿರ್ಧರಿಸಿದೆ. ಇನ್ನೊಂದು ವರ್ಷದಲ್ಲಿ ಸಿದ್ಧವಾಗುವ ಡಿಪಿಆರ್‍‌ಗಳಿಗೆ ಅನುಮೋದನೆ ದೊರೆಯುತ್ತಿದ್ದಂತೆ ಯೋಜನೆ ಅನುಷ್ಠಾನ ಕಾರ್ಯ ಆರಂಭವಾಗುತ್ತವೆ. ಇದೆಲ್ಲವನ್ನು ನ್ಯಾಷನಲ್ ಹೈ ಸ್ಪೀಡ್ ರೈಲು ಕಾರ್ಪೊರೇಷನ್ ಕಂಪನಿಯು ನಿರ್ವಹಿಸಲಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ವೇಗವಾಗಿ ಬೆಳೆಯುತ್ತಿರುವ ಮೆಟ್ರೋ ಪಾಲಿಟನ್ ಸಿಟಿಗಳ ಮಧ್ಯೆ ಈ ಬುಲೆಟ್ ರೈಲುಗಳು ಸಂಪರ್ಕ ಸಾಧಿಸಲಿವೆ. ಅದಕ್ಕಾಗಿ ಮೂಲಸೌಕರ್ಯ ಒದಗಿಸುವ ಈ ಕಾರಿಡಾರ್ ಯೋಜನೆಗಳು ಹೆಚ್ಚು ಮಹತ್ವ ಪಡೆಯುತ್ತವೆ. ವೇಗದ ಮತ್ತು ಸುರಕ್ಷಿತ ರೈಲು ಸಾರಿಗೆಗೆ ಬೇಡಿಕೆ ಇದೆ. ಭವಿಷ್ಯದ ಅಗತ್ಯತೆಗಳನ್ನು ಗಮನಿಸಿ, ಪ್ರಯಾಣಿಕರಿಗೆ ತ್ವರಿತ ಸಾರಿಗೆ ಸೇವೆ ಲಭ್ಯವಾಗುವಂತೆ ಮಾಡುವ ಉದ್ದೇಶ ಕೇಂದ್ರ ಸರ್ಕಾರ ಹೊಂದಿದೆ.

ಸಂಚಾರ ಸಮಯ ಎಷ್ಟು ಉಳಿಯುತ್ತದೆ?

* ಹೈದರಾಬಾದ್-ಚೆನ್ನೈ ಕಾರಿಡಾರ್ ನಿರ್ಮಾಣವಾದರೆ ಪ್ರಯಾಣಿಕರಿಗೆ ಸಂಚಾರ ಸಮಯ ಉಳಿತಾಯವಾಗಲಿದೆ. ಏಕೆಂದರೆ 626 ಕಿ.ಮೀ.ನಿಂದ 818 ಕಿ.ಮೀ. ದೂರದ ಈ ಮಾರ್ಗದಲ್ಲಿ ಬುಲೆಟ್ ರೈಲು ಕ್ರಮಿಸಲು ಕೇವಲ 2 ಗಂಟೆ 55 ನಿಮಿಷ ತೆಗೆದುಕೊಳ್ಳುತ್ತದೆ.

* ಹೈದರಾಬಾದ್-ಬೆಂಗಳೂರು ಸಹ ದಕ್ಷಿಣ ಭಾರತದ ಪ್ರಮುಖ ನಗರಗಳಾಗಿವೆ. ಈ ಎರಡು ನಗರಗಳ ಮಧ್ಯೆ 570 ರಿಂದ 600 ಕಿ.ಮೀ. ಅಂತರವಿದೆ. ಬುಲೆಟ್‌ ರೈಲುಗಳು ಭವಿಷ್ಯದಲ್ಲಿ ಇಷ್ಟು ದೂರ ಸಾಗಲು ಕೇವಲ 1 ಗಂಟೆ 13 ನಿಮಿಷ ತೆಗೆದುಕೊಳ್ಳುತ್ತದೆ. ಬೆಳಗ್ಗೆ ಬೆಂಗಳೂರಿನಿಂದ ಹೊರಟು ಹೈದರಾಬಾದ್‌ನಲ್ಲಿ ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ಬರಬಹುದು. ಅಷ್ಟರ ಮಟ್ಟಿಗಿನ ಉತ್ತಮ ಸಾರಿಗೆ ಸೇವೆ ಲಭ್ಯವಾಗುತ್ತದೆ. ಈ ಮಾರ್ಗದ ಅಪಾರ ಪ್ರಯಾಣಿಕರಿಗೆ ಈ ಯೋಜನೆ ಸಾಕಷ್ಟು ಪ್ರಯೋಜನ ಒದಗಿಸುತ್ತದೆ.

* ಪಾಟ್ನಾ-ಸಿಲಿಗುರಿ (ವಾರಣಾಸಿ-ಸಿಲಿಗುರಿ ಕಾರಿಡಾರ್‌ನ ಭಾಗ) ಉದ್ದೇಶಿತ ಕಾರಿಡಾರ್ 450 ರಿಂದ 470 ಕಿಲೋ ಮೀಟರ್ ಉದ್ದದ ಮಾರ್ಗದಲ್ಲಿ ನಿರ್ಮಾಣವಾಗುತ್ತಿದೆ. ಇಷ್ಟು ದೂರು ಕ್ರಮಿಸಲು ಬುಲೆಟ್ ರೈಲಿಗೆ1 ಗಂಟೆ 13 ನಿಮಿಷ ಸಾಕಾಗುತ್ತದೆ. ಸ

ಸದರಿ ಈ ಮೂರು ಮಾರ್ಗ ಒಳಗೊಂಡಂತೆ ಒಟ್ಟು ಏಳು ಮಾರ್ಗಗಳನ್ನು ಕ್ರಮೇಣ ಅನುಷ್ಠಾನಕ್ಕೆ ತರಲಾಗುತ್ತದೆ. ಸದ್ಯ ರೈಲ್ವೆ ಸಚಿವಾಲಯ ಸದರಿ ಮೂರು ಮಾರ್ಗಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಡಿಎಪಿಆರ್ ತಯಾರಿಕೆಗೆ ವೇಗ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+