Get Updates
Get notified of breaking news, exclusive insights, and must-see stories!

ಬರ ಪರಿಹಾರ ವೀಕ್ಷಣೆ : ರಾಯಚೂರು ಜಿಲ್ಲೆ ಗ್ರಾಮಗಳಲ್ಲಿ ಎಸ್‌.ಎಂ.ಕೃಷ್ಣ

ರಾಯಚೂರು : ಜಿಲ್ಲೆಯ ಯರಗೇರಾ, ತಮ್ಟಾಪುರ, ಲಿಂಗನಕಾನದೊಡ್ಡಿ, ಜಬಲದಿನ್ನಿ ಗಣಮೂರು ಮತ್ತಿತರ ಗ್ರಾಮಗಳಿಗೆ ಮಂಗಳವಾರ ಭೇಟಿ ನೀಡಿದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಬರ ಪರಿಹಾರ ಕಾಮಗಾರಿಯ ಪ್ರಗತಿಯನ್ನು ವೀಕ್ಷಿಸಿದರು.

ಸರ್ಕಾರ ನೀಡುತ್ತಿರುವ ಪರಿಹಾರ ಸರಿಯಾಗಿ ದೊರೆಯುತ್ತಿದೆಯೆ, ಕೂಲಿ ಸಿಗುತ್ತಿದೆಯೇ ಎನ್ನುವುದನ್ನು ಸ್ವತಃ ಕೂಲಿ ಕಾರ್ಮಿಕರನ್ನು ಮಾತನಾಡಿಸುವ ಮೂಲಕ ಮುಖ್ಯಮಂತ್ರಿಗಳು ಖಚಿತಪಡಿಸಿಕೊಂಡರು. ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಕೆರೆಗಳ ಹೂಳು ತೆಗೆಯುವ ಕಾಮಗಾರಿಗಳನ್ನೂ ಅವರು ವೀಕ್ಷಿಸಿದರು.

ಇದೇ ಸಂದರ್ಭದಲ್ಲಿ , ಪರಿಹಾರ ಕಾಮಗಾರಿಗಳನ್ನು ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿ ಜಿ.ಕುಮಾರನಾಯಕ್‌ ವಿವರಿಸಿದರು. ಸರ್ಕಾರ ನಿಗದಿಪಡಿಸಿರುವಂತೆ 45.25 ರುಪಾಯಿಗಳ ಕೂಲಿಯನ್ನು ಕಾರ್ಮಿಕರಿಗೆ ನೀಡಲಾಗುತ್ತಿದೆ. ಸುಮಾರು 3 ಸಾವಿರ ಕೂಲಿ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಧರ್ಮಸಿಂಗ್‌, ಪೌರಾಡಳಿತ ರಾಜ್ಯ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಶಾಸಕ ಸೈಯದ್‌ ಯಾಸೀನ್‌, ಸಂಸದ ವೆಂಕಟೇಶ ನಾಯಕ್‌, ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಎನ್‌.ಎಸ್‌.ಬೋಸರಾಜ್‌ ಮತ್ತಿತರರು ಮುಖ್ಯಮಂತ್ರಿಗಳ ಭೇಟಿಯ ಸಂದರ್ಭದಲ್ಲಿ ಹಾಜರಿದ್ದರು.

ಯರಗೇರಾ ಗ್ರಾಮದಲ್ಲಿ ಮುಖ್ಯಮಂತ್ರಿಗಳಿಗೆ ಘೕರಾವ್‌

ಬರ ಪರಿಹಾರ ಕಾಮಗಾರಿಗಳನ್ನು ವೀಕ್ಷಿಸಲು ರಾಯಚೂರು ತಾಲ್ಲೂಕಿನ ಯರಗೇರಾ ಗ್ರಾಮಕ್ಕೆ ಮುಖ್ಯಮಂತ್ರಿ ಕೃಷ್ಣ ಅವರು ಆಗಮಿಸಿದಾಗ, ಉದ್ರಿಕ್ತ ರೈತರು ಹಾಗೂ ಗ್ರಾಮಸ್ಥರು ಘೕರಾವ್‌ ಮಾಡಿರುವ ಘಟನೆ ವರದಿಯಾಗಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+