Get Updates
Get notified of breaking news, exclusive insights, and must-see stories!

ಆಗಸ್ಟ್‌ 19ರ ಉದ್ದೇಶಿತ ಪೆಟ್ರೋಲ್‌ ಬಂಕ್‌ ಮುಷ್ಕರ ರದ್ದು

ನವದೆಹಲಿ : ತಮ್ಮ ಹಲವು ಬೇಡಿಕೆಗಳ ಈಡೇರಿಕೆಗಾಗಿ ಆಗಸ್ಟ್‌ 19ರ ಮಧ್ಯರಾತ್ರಿಯಿಂದ ರಾಷ್ಟ್ರಾದ್ಯಂತ ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು ಅಖಿಲ ಭಾರತ ಪೆಟ್ರೋಲಿಯಂ ಉತ್ಪನ್ನಗಳ ವ್ಯಾಪಾರಿಗಳ ಒಕ್ಕೂಟ ಕೈಬಿಟ್ಟಿದೆ. ಒಕ್ಕೂಟ ಹಾಗೂ ಸರಕಾರದ ನಡುವೆ ನಡೆದ ಮಾತುಕತೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.

ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಕಮಿಷನ್‌ ಹೆಚ್ಚಿಸುವುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು 19ರ ರಾತ್ರಿಯಿಂದ ಮುಷ್ಕರ ನಡೆಸಲು ಉದ್ದೇಶಿಸಿದ್ದ ಒಕ್ಕೂಟವು ಮುಷ್ಕರದ ನಿರ್ಧಾರ ಹಿಂದಕ್ಕೆ ಪಡೆದಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ರಾಂ ನಾಯಕ್‌ ಲೋಕಸಭೆಯಲ್ಲಿ ಶುಕ್ರವಾರ ಪ್ರಕಟಿಸಿದರು.

ಸ್ವಯಂ ಪ್ರೇರಿತರಾಗಿ ಹೇಳಿಕೆ ನೀಡಿದ ಸಚಿವರು, ವ್ಯಾಪಾರಿಗಳ ಒಕ್ಕೂಟ ಹಾಗೂ ಪೆಟ್ರೋಲಿಯಂ ಕಂಪನಿಗಳೊಂದಿಗೆ ಮಾತುಕತೆ ನಡೆಸಿರುವುದಾಗಿಯೂ ತಿಳಿಸಿದರು. ಇನ್ನು ಮುಂದೆ ದೇಶದ ಯಾವುದೇ ಭಾಗದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಸರಬರಾಜಿಗೆ ಹಾಗೂ ಲಭ್ಯತೆಗೆ ಅಡಚಣೆಯುಂಟಾಗದಂತೆ ಸಾಂದರ್ಭಿಕ ಯೋಜನೆಯಾಂದನ್ನು ರೂಪಿಸಲಾಗಿದೆ ಎಂದೂ ಅವರು ತಿಳಿಸಿದರು.

ಪೆಟ್ರೋಲಿಯಂ ಉತ್ಪನ್ನಗಳ ಮಾರಾಟಗಾರರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಆದಷ್ಟು ಬೇಗ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿರುವುದಾಗಿಯೂ ಅವರು ಲೋಕಸಭೆಗೆ ತಿಳಿಸಿದರು.
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+