ಕತ್ತುಕೊಯ್ದು ಮಾವ-ಸೊಸೆ ಹತ್ಯೆ:ದಂಡುಪಾಳ್ಯ ಗುಂಪಿನ ಕೈವಾಡ?
ಬೆಂಗಳೂರು : 90 ವರ್ಷದ ವೃದ್ಧ ಹಾಗೂ ಅವರ 40 ವರ್ಷದ ಸೊಸೆಯನ್ನು ನಾಗರಬಾವಿ ಮುಖ್ಯರಸ್ತೆಯಲ್ಲಿನ ಬಾಪೂಜಿ ಬಡಾವಣೆಯ, ಜನ ನಿಬಿಡ ಸರಸ್ವತಿ ಜಂಕ್ಷನ್‌ನ ಮಹಡಿ ಮನೆಯಾಂದರಲ್ಲಿ ಗುರುವಾರ ಹಾಡುಹಗಲೇ ಕತ್ತು ಕೊಯ್ದು ಕೊಲೆ ಮಾಡಲಾಗಿದೆ. ಮೃತರನ್ನು ರಾಜ್ಯ ಖಜಾನೆ ಇಲಾಖೆಯ ನಿವೃತ್ತ ಅಧಿಕಾರಿ ಶಂಕರಯ್ಯ ಹಾಗೂ ಪದ್ಮಜಾ ಎಂದು ಗುರ್ತಿಸಲಾಗಿದೆ.
ಗುರುವಾರದ ಹತ್ಯೆ ಪ್ರಕರಣವನ್ನು ದಂಡುಪಾಳ್ಯದ ಹಂತಕರ ಕೆಲಸವೆಂದು ಪೊಲೀಸರು ಶಂಕಿಸಿದ್ದಾರೆ. ಜುಲೈ 26 ರಂದು ನಗರದ ಸುಭಾಷ್ ನಗರದಲ್ಲಿ ನಿವೃತ್ತ ವಿಜ್ಞಾನಿ ಜಿ.ಎನ್.ಚಂದ್ರಶೇಖರಯ್ಯ ಅವರನ್ನು ಇದೇ ರೀತಿ ಹತ್ಯೆ ಮಾಡಲಾಗಿತ್ತು . ಭೀಕರವಾಗಿ ಕತ್ತು ಕತ್ತರಿಸಿ ಹತ್ಯೆ ಮಾಡುವುದು ದಂಡುಪಾಳ್ಯ ಗ್ಯಾಂಗಿನ ಕೆಲಸ ಎನ್ನಲಾಗಿದೆ.
ಪದ್ಮಜಾ ಅವರ ಓಲೆಯನ್ನು ಹೊರತು ಪಡಿಸಿದರೆ ಹಂತಕರು ಇತರ ಯಾವುದೇ ಬೆಲೆ ಬಾಳುವ ವಸ್ತುಗಳನ್ನಾಗಲೀ, ನಗದನ್ನಾಗಲೀ ಮುಟ್ಟಿಲ್ಲ . ಮನೆಯಲ್ಲಿನ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು , ಚಿಲ್ಲರೆ ಹಣದ ಚಿಕ್ಕ ಡಬ್ಬಿ ಸ್ನಾನದ ಕೊಠಡಿಯಲ್ಲಿ ಬಿದ್ದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಗೆ ಕಾರಣ ತಿಳಿದುಬಂದಿಲ್ಲ .
ಎಂದಿನಂತೆ ಇಬ್ಬರು ಮಕ್ಕಳಾದ ಸುಷ್ಮಾ (11) ಹಾಗೂ ಸ್ನೇಹಾಳನ್ನು (7) ಸಮೀಪದ ಶಾಲೆಗೆ ಬಿಟ್ಟು ಮನೆಗೆ ವಾಪಸ್ಸಾದ ಪದ್ಮಜಾ ಅವರು 11 ಗಂಟೆ ಸುಮಾರಿಗೆ ಮಾರುಕಟ್ಟೆಗೆ ಹೋಗಿದ್ದರು. ತರಕಾರಿ ಕೊಂಡು ಮನೆಗೆ ವಾಪಸ್ಸಾದ ನಂತರ ಪದ್ಮಜಾ ಪುನಃ ಮನೆಯಿಂದ ಹೊರಗೆ ಹೋಗಿಲ್ಲ . ಸಂಜೆ ಶಾಲೆಯಿಂದ ಕರೆ ತರಲು ಪದ್ಮಜಾ ಶಾಲೆಗೆ ಬರದೆ ಹೋದದ್ದರಿಂದ, ಮಕ್ಕಳು ಮನೆಗೆ ಬಂದಾಗ ಮನೆಯ ಬಾಗಿಲು ತೆರೆದಿತ್ತು , ತಾತ ಹಾಗೂ ಅಮ್ಮ ಕೊಲೆಯಾಗಿದ್ದರು.
ಪದ್ಮಜಾ ಅವರು ತರಕಾರಿ ತರಲು ಹೋದಾಗ ಹಂತಕರು ಮಾರುಕಟ್ಟೆಯಿಂದಲೇ ಅವರನ್ನು ಹಿಂಬಾಲಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆ ನಡೆದ ಸ್ಥಳದ ಪಕ್ಕದ ಮನೆಯಲ್ಲಿ ಹುಟ್ಟುಹಬ್ಬದ ಪಾರ್ಟಿ ನಡೆಯುತ್ತಿದ್ದು, ಅಲ್ಲಿ ನೆರೆದಿದ್ದ ಜನರಿಗೆ ಈ ಬರ್ಬರ ಹತ್ಯೆಯ ಸುಳಿವು ಸಿಕ್ಕಿಲ್ಲ .
ತನಿಖಾ ತಂಡ ರಚನೆನಗರದಲ್ಲಿ ಇಂಥ ಪ್ರಕರಣಗಳು ಪದೇ ಪದೇ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ತನಿಖೆಗಾಗಿ ವಿಶೇಷ ಪೊಲೀಸ್ ಪಡೆಯಾಂದನ್ನು ರಚಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಟಿ. ಮಡಿಯಾಳ್ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications