2001 ರಿಂದ 2005 :ಭಾರತ ಇಂಟರ್ನೆಟ್ ಮಾರುಕಟ್ಟೆಗೆ ಶುಕ್ರದೆಶೆ
ವಾಷಿಂಗ್ಟನ್ : ಮುಂದಿನ 5 ವರ್ಷಗಳಲ್ಲಿ ಇಂಟರ್ನೆಟ್ ಮಾರುಕಟ್ಟೆಯಲ್ಲಿ ಭಾರತದ ಅಭಿವೃದ್ಧಿಯ ದರ ಏಷ್ಯಾ ಪೆಸಿಫಿಕ್ ಪ್ರಾದೇಶಿಕ ವಲಯದಲ್ಲಿ ಸಾಕಷ್ಟು ಹೆಚ್ಚಲಿದೆ ಎಂದು ‘ಗಾರ್ಟ್ನರ್ ಡೇಟಾಕ್ವೆಸ್ಟ್ ’ ಎಂಬ ಅಂತರರಾಷ್ಟ್ರೀಯ ಮಾರುಕಟ್ಟೆ ಸಂಶೋಧನಾ ಸಂಸ್ಥೆ ತಿಳಿಸಿದೆ.
ಸಂಸ್ಥೆಯ ಲೆಕ್ಕಾಚಾರದ ವಿವರಗಳು ಇಂತಿವೆ....
- 2001ರಿಂದ 2005ರ ಅವಧಿಯಲ್ಲಿ ಭಾರತದಲ್ಲಿ ಪ್ರತಿ ವರ್ಷ ಸರಾಸರಿ 44 ಪ್ರತಿಶತ ಇಂಟರ್ನೆಟ್ ಗ್ರಾಹಕರು ಹುಟ್ಟಿಕೊಳ್ಳಲಿದ್ದಾರೆ. ಈ ಅವಧಿಯಲ್ಲಿ 21.3 ದಶಲಕ್ಷ ಭಾರತೀಯರು ಅಂತರ್ಜಾಲಿಗಳಾಗಿರುತ್ತಾರೆ.
- ಏಷ್ಯಾ ಪೆಸಿಫಿಕ್ ವಲಯದಲ್ಲಿ ಭಾರತ, ಇನ್ನು ಕೆಲವೇ ವರ್ಷಗಳಲ್ಲಿ ಚೀನಾ, ಜಪಾನ್ ಹಾಗೂ ದಕ್ಷಿಣ ಕೊರಿಯಾದ ನಂತರದ, ಅಂದರೆ 4ನೇ ಸ್ಥಾನ ಪಡೆಯಲಿದೆ.
- ಚೀನಾ, ಜಪಾನ್ ಹಾಗೂ ಭಾರತ ರಾಷ್ಟ್ರಗಳಿಂದ ಕೂಡಿದ ಏಷ್ಯಾ ಪೆಸಿಫಿಕ್ ಇಂಟರ್ನೆಟ್ ಮಾರುಕಟ್ಟೆ 2003ರ ಹೊತ್ತಿಗೆ ಅಮೆರಿಕೆಯ ಮಾರುಕಟ್ಟೆಯನ್ನೂ ಹಿಂದಿಕ್ಕಲಿದೆ. ಆ ಹೊತ್ತಿಗೆ ಏಷ್ಯಾ ಪೆಸಿಫಿಕ್ ವಲಯದಲ್ಲಿ 183.3 ದಶಲಕ್ಷ ಅಂತರ್ಜಾಲಿಗಳು ಇರಲಿದ್ದು, ಅಮೆರಿಕೆಯಲ್ಲಿ 162.8 ದಶಲಕ್ಷ ಗ್ರಾಹಕರು ಮಾತ್ರ ಇರಲಿದ್ದಾರೆ.
- 2000ನೇ ಇಸವಿಯಲ್ಲಿ ಏಷ್ಯಾ ಪೆಸಿಫಿಕ್ ವಲಯದಲ್ಲಿ 47.4 ದಶಲಕ್ಷ ಇಂಟರ್ನೆಟ್ ಗ್ರಾಹಕರಿದ್ದರು. 2005ರ ಹೊತ್ತಿಗೆ ಈ ಸಂಖ್ಯೆ 248 ದಶಲಕ್ಷ ಮುಟ್ಟಲಿದೆ !
- 2005ರ ಹೊತ್ತಿಗೆ ಏಷ್ಯಾ ಪೆಸಿಫಿಕ್ ವಲಯದ ಮಾರುಕಟ್ಟೆ ಮೌಲ್ಯ 17.2 ಶತಕೋಟಿ ಡಾಲರ್ ಆಗಲಿದೆ.
(ಯುಎನ್ಐ)
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications