ಇ-ಮೇಲ್ ತಂದ ಕಂಕಣ ಕೊರಳಿಗೆ ಉರುಳಾದ ದುರಂತ ಕಥೆಯಿದು..
ಬೆಂಗಳೂರು : ಇ-ಮೇಲ್ ಮೂಲಕ ಶ್ರೀಲಂಕಾದ ನಿವಾಸಿಯನ್ನು ಪ್ರೀತಿಸಿ ಮದುವೆಯಾಗಿದ್ದ ನಗರದ ಬಾಣಸವಾಡಿಯ ಅರವಿಂದ ನಗರದ ಕೆಎಸ್ಎಫ್ಸಿ ಬಡಾವಣೆಯ ಕವಿತಾ (23) ಎನ್ನುವ ಯುವತಿ ವರದಕ್ಷಿಣೆ ಕಿರುಕುಳಕ್ಕೆ ಬಲಿಯಾಗಿದ್ದಾರೆ.
ಕವಿತಾ ಹಾಗೂ ಶ್ರೀಲಂಕಾದ ಗಣೇಶ್ ಮುರುಗನ್ ಎನ್ನುವವರ ನಡುವಣ ಇ-ಮೇಲ್ ಸ್ನೇಹ, ಪ್ರೇಮವಾಗಿ ಬದಲಾಗಿ, ಜೂನ್ ತಿಂಗಳಲ್ಲಿ ಇಬ್ಬರೂ ಮದುವೆಯಾಗಿದ್ದರು. ಮದುವೆಯಾದ ನಂತರ ದಂಪತಿಗಳು ಕೆಲಕಾಲ ಶ್ರೀಲಂಕಾ ಹಾಗೂ ಲಂಡನ್ನಲ್ಲಿ ವಾಸವಾಗಿದ್ದರು. ಲಂಡನ್ನಲ್ಲಿ ಇರುವಾಗಲೇ ವರದಕ್ಷಿಣೆ ತರುವಂತೆ ಗಣೇಶ್ ಕವಿತಾಗೆ ಕಿರುಕುಳ ನೀಡಲಾರಂಭಿಸಿದ.
ವರದಕ್ಷಿಣೆ ತರುವಂತೆ ಗಣೇಶ್ ಮುರುಗನ್ ಒತ್ತಾಯದ ಮೇರೆಗೆ ತಿಂಗಳ ಹಿಂದೆ ತವರಿಗೆ ಬಂದ ಕವಿತಾ ಆನಂತರ ಗಂಡನನ್ನು ಸಂಪರ್ಕಿಸಲು ಪ್ರಯತ್ನ ನಡೆಸಿದ್ದಾರೆ. ಆದರೆ, ಇ-ಮೇಲ್ಗಳಿಗೆ ಪ್ರತಿಕ್ರಿಯೆ ಬರದಿದ್ದಾಗ ತೀವ್ರ ನಿರಾಶೆಗೊಂಡಿದ್ದ ಕವಿತಾ, ಕೊನೆಗೆ ವರದಕ್ಷಿಣೆ ಕಿರುಕುಳ- ಜಿಗುಪ್ಸೆಯಿಂದಾಗಿ ನೇಣುಹಾಕಿಕೊಂಡಿದ್ದಾರೆ.
ಪ್ರಕರಣದ ಬಗ್ಗೆ ಕವಿತಾ ಸಂಬಂಧಿಕರು ಬಾಣಸವಾಡಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications