ಕರ್ನಾಟಕದಲ್ಲಿ 13 ಜಲ್ದಿ ಚುಕ್ತಾ ಕೋರ್ಟುಗಳಿಗೆ ಚಾಲನೆ
ಬೆಂಗಳೂರು : ಕಳೆದ ಏಪ್ರಿಲ್ 1ರಿಂದ ಈವರೆಗೆ 500 ಜಲ್ದಿ ಚುಕ್ತಾ ಕೋರ್ಟುಗಳನ್ನು ದೇಶಾದ್ಯಂತ ಸ್ಥಾಪಿಸಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಅರುಣ್ ಜೈಟ್ಲಿ ತಿಳಿಸಿದ್ದಾರೆ.
ಕರ್ನಾಟಕದಲ್ಲಿ 13 ಜಲ್ದಿ ಚುಕ್ತಾ ಕೋರ್ಟುಗಳ ಕಲಾಪಗಳಿಗೆ ಚಾಲನೆ ನೀಡಿ, ಶನಿವಾರ ಅವರು ಮಾತಾಡುತ್ತಿದ್ದರು. ಕೊಳೆಯುತ್ತಿರುವ ಕ್ರಿಮಿನಲ್ ಪ್ರಕರಣಗಳ ಶೀಘ್ರ ವಿಲೇವಾರಿಗೆ ಕಳೆದ ಏಪ್ರಿಲ್‌ನಲ್ಲಿ ಫಾಸ್ಟ್ ಟ್ರ್ಯಾಕ್ (ಜಲ್ದಿ ಚುಕ್ತಾ ) ಕೋರ್ಟುಗಳ ಸ್ಥಾಪನೆ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಇದರನ್ವಯ ಪ್ರತಿ ಜಿಲ್ಲೆಗೆ 5ರಂತೆ ಒಟ್ಟು 1734 ಶೀಘ್ರ ವಿಲೇವಾರಿ ಕೋರ್ಟುಗಳನ್ನು ಸ್ಥಾಪಿಸುವ ಪ್ರಸ್ತಾವನೆಯಿದೆ ಎಂದರು.
ದೇಶದ ಅಧೀನ ನ್ಯಾಯಾಲಗಳಲ್ಲಿ 2 ಕೋಟಿಗೂ ಹೆಚ್ಚು ಪ್ರಕರಣಗಳು ವಿಲೇವಾರಿಯಾಗದೆ ಉಳಿದಿವೆ. ಹೈಕೋರ್ಟಿನಲ್ಲೇ 34 ಲಕ್ಷ ಪ್ರಕರಣಗಳು ಕೊಳೆಯುತ್ತಿವೆ. ನ್ಯಾಯ ಇಷ್ಟು ವಿಳಂಬವಾಗಿ ದೊರೆತರೆ ಹೇಗೆ? ಈ ಕಾರಣಕ್ಕೇ ಜಲ್ದಿ ಚುಕ್ತಾ ಕೋರ್ಟುಗಳ ಸ್ಥಾಪನೆಗೆ ಸರ್ಕಾರ ಕೈ ಹಾಕಿದೆ. ಈ ಯೋಜನೆ ಪೂರ್ಣವಾದ ನಂತರ ನ್ಯಾಯಾಲಯ ಪ್ರಕರಣಗಳ ವಿಲೇವಾರಿ ಕ್ಷಿಪ್ರವಾಗಿ ನಡೆಯಲಿದೆ ಎಂದು ಜೈಟ್ಲಿ ಹೇಳಿದರು.
ಬೊಕ್ಕಸಕ್ಕೂ ಬೋನಸ್ : ಇತ್ಯರ್ಥವಾಗದ ಪ್ರಕರಣಗಳಿಗೆ ಸಂಬಂಧಿಸಿದ 1.68 ಲಕ್ಷ ಆರೋಪಿಗಳಿದ್ದಾರೆ. ಇವರಿಗಾಗಿ ರಾಜ್ಯ ಸರ್ಕಾರಗಳು ಪ್ರತಿ ವರ್ಷ 380 ಕೋಟಿ ರುಪಾಯಿ ಖರ್ಚು ಮಾಡುತ್ತಿವೆ. ಶೀಘ್ರ ವಿಲೇವಾರಿ ಕೋರ್ಟುಗಳ ಸ್ಥಾಪನೆಗೆ ಇನ್ನು 5 ವರ್ಷಗಳಲ್ಲಿ ಕೇಂದ್ರ ಸರ್ಕಾರ 500 ಕೋಟಿ ರುಪಾಯಿ ಮಾತ್ರ ಖರ್ಚು ಮಾಡಲಿದೆ. ಸರ್ಕಾರಗಳ ಬೊಕ್ಕಸಕ್ಕೂ ಈ ಯೋಜನೆ ಎಷ್ಟು ಮಹತ್ವದ್ದು ಎಂಬುದು ಇದರಿಂದ ಗೊತ್ತಾಗುತ್ತದೆ. ಕರ್ನಾಟಕದಲ್ಲಿ ಇಂಥಾ 93 ಕೋರ್ಟುಗಳನ್ನು ಸ್ಥಾಪಿಸುವ ಗುರಿಯಿದೆ ಎಂದರು.
ರಾಜ್ಯ ಹೈಕೋರ್ಟು ಎಷ್ಟು ಜಲ್ದಿ ಚುಕ್ತಾ ಕೋರ್ಟುಗಳು ಬೇಕೆನ್ನುತ್ತದೋ ಅಷ್ಟನ್ನೂ ಸ್ಥಾಪಿಸಲು ರಾಜ್ಯ ಸರ್ಕಾರ ಸಿದ್ಧ ಎಂದು ಶುಕ್ರವಾರದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಕೃಷ್ಣ ತಿಳಿಸಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಡಿ.ಬಿ.ಚಂದ್ರೇಗೌಡ ತಿಳಿಸಿದರು.
(ಪಿಟಿಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications