Get Updates
Get notified of breaking news, exclusive insights, and must-see stories!

ರಾಜ್ಯದ ಆರ್ಥಿಕ ಸ್ಥಿತಿ ಸುಧಾರಣೆಗೆ ಕಠಿಣ ಕ್ರಮಅನಿವಾರ್ಯ : ಕೃಷ್ಣ

ಬೆಂಗಳೂರು : ರಾಜ್ಯದ ಹಣಕಾಸು ಪರಿಸ್ಥಿತಿಯನ್ನು ಬಲಪಡಿಸಲು ಮುಂದಿನ ಮೂರ್ನಾಲ್ಕು ವರ್ಷಗಳ ಕಾಲ ಕಠಿಣ ಕ್ರಮಗಳನ್ನು ಕೈಗೊಳ್ಳದೇ ವಿಧಿಯೇ ಇಲ್ಲ ಎಂದು ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ವಿಧಾನಸಭೆಯಲ್ಲಿ ಪ್ರಕಟಿಸಿದ್ದಾರೆ.

ರಾಜ್ಯ ಸರಕಾರದ ಹಣಕಾಸು ಪರಿಸ್ಥಿತಿ ಕೇಂದ್ರ ಸರಕಾರದ ಹಣಕಾಸು ಸ್ಥಿತಿಗಿಂತ ಹೆಚ್ಚು ಭಿನ್ನವಾಗೇನೂ ಇಲ್ಲ. ಸಮಾಧಾನಕರವಾಗಿಯೂ ಇಲ್ಲ. ಈ ಸಂದರ್ಭದಲ್ಲಿ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ವಾಸ್ತವವಾಗಿ ಈ ವರ್ಷವೇ ಈ ನಿರ್ಧಾರ ಕೈಗೊಳ್ಳಬೇಕಿತ್ತು. ಆದರೆ, ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸಾಧ್ಯವಾಗಿಲ್ಲ , ಕಳೆದ ವರ್ಷ ಬೆಲೆ ಕುಸಿತ ಇದಕ್ಕೆ ಅಡ್ಡಿಯಾಯಿತು ಎಂದು ಅವರು ಹೇಳಿದರು.

ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಗೋಶಾಲೆಗಳಿಗೆ ಉಚಿತ ಮೇವು ಒದಗಿಸುವ ಬಗ್ಗೆ ಸರಕಾರ ಪರಿಶೀಲಿಸುತ್ತಿದೆ. ವಾರಾಹಿ ಯೋಜನೆಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲಾಗುವುದು, ಸಣ್ಣ ಕೈಗಾರಿಕೆಗಳಿಗೆ ನೀಡಬೇಕಿರುವ (ಬಾಕಿ ಇರುವ) ಸಬ್ಸಿಡಿಯನ್ನು ಹಣಕಾಸು ನಿಗಮದ ಬಾಂಡ್‌ ಮೂಲಕ ಸಂಗ್ರಹಿಸುವ ಹಣ ನೋಡಿಕೊಂಡು, ಹಂತಹಂತವಾಗಿ ಬಿಡುಗಡೆ ಮಾಡಲಾಗುವುದು ಎಂದು ಪೂರಕ ಅಂದಾಜು ಕುರಿತ ಚರ್ಚೆಯಲ್ಲಿ ತಿಳಿಸಿದರು.

ಅನುದಾನ : ಬೆಂಗಳೂರು ಮಹಾನಗರ ಪಾಲಿಕೆಗೆ ನೀಡುವ ರೀತಿಯಲ್ಲೇ, ಹುಬ್ಭಳ್ಳಿ - ಧಾರವಾಡ ಸೇರಿದಂತೆ ರಾಜ್ಯದ ಇತರ ನಗರ ಪಾಲಿಕೆಗಳು ಹಾಗೂ ಪುರಸಭೆಗಳಿಗೆ ಅನುದಾನ ನೀಡಲು ಸರಕಾರ ಯೋಚಿಸುತ್ತಿದೆ ಎಂದರು. ಆದರೆ, ಆರ್ಥಿಕ ಸಂಪನ್ಮೂಲವನ್ನು ಇದು ಅವಲಂಬಿಸಿದೆ ಎಂದರು.

ವರದಿ ಅನುಷ್ಠಾನ : ಪ್ರಾದೇಶಿಕ ತಾರತಮ್ಯ ನಿವಾರಿಸಲು, ಡಾ. ಡಿ.ಎಂ. ನಂಜುಂಡಪ್ಪ ಸಮಿತಿ ನೀಡಿರುವ ಶಿಫಾರಸುಗಳನ್ನು ಹಂತಹಂತವಾಗಿ ಜಾರಿಗೆ ತರಲಾಗುವುದು ಎಂದು ಕೃಷ್ಣ ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+