Get Updates
Get notified of breaking news, exclusive insights, and must-see stories!

ಜೋಕೆ ! ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದರೆ 500 ರು.ದಂಡ

No Smoking in the public placesಬೆಂಗಳೂರು : ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸುವ ಹಾಗೂ ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸುವ ಆರೋಗ್ಯ ರಕ್ಷಣೆ ವಿಧೇಯಕ 2001ಕ್ಕೆ ವಿಧಾನಪರಿಷತ್ತು ಶುಕ್ರವಾರ ತನ್ನ ಅಂಗೀಕಾರ ನೀಡಿತು.

ಈ ಹೊಸ ಕಾಯಿದೆಯಿಂದಾಗಿ ಸಾರ್ವಜನಿಕರು ಭೇಟಿ ನೀಡುವ ಸರಕಾರಿ ಕಚೇರಿ, ಆಸ್ಪತ್ರೆ, ಮನರಂಜನಾ ಕೇಂದ್ರ, ಆರಾಧನಾ ಸ್ಥಳ, ಗ್ರಂಥಾಲಯಗಳಲ್ಲಿ ಧೂಮಪಾನ ಮಾಡುವಂತಿಲ್ಲ. ಈ ಕಾಯಿದೆ ಉಲ್ಲಂಘಿಸಿ ಧೂಮಪಾನ ಮಾಡಿ ಮೊದಲ ಬಾರಿ ಸಿಕ್ಕಿಬಿದ್ದವರಿಗೆ 100 ರು. ದಂಡ, 2ನೇ ಬಾರಿ ಸಿಕ್ಕಿಬಿದ್ದರೆ 200 ಹಾಗೂ ಆನಂತರ 500 ರುಪಾಯಿ ದಂಡ ವಿಧಿಸಬಹುದಾಗಿದೆ. ಜತೆಗೆ 3 ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಲೂ ಕಾನೂನಿನಡಿ ಅವಕಾಶ ಕಲ್ಪಿಸಲಾಗಿದೆ.

ಈ ವಿಷಯವನ್ನು ಆರೋಗ್ಯ ಸಚಿವ ಡಾ. ಎ.ಬಿ. ಮಾಲಕರೆಡ್ಡಿ ಅವರು ಶುಕ್ರವಾರ ವಿಧಾನ ಪರಿಷತ್ತಿನಲ್ಲಿ ಪ್ರಕಟಿಸಿದರು. ಈ ವಿಷಯದ ಬಗ್ಗೆ ಸುಮಾರು ಎರಡೂವರೆ ಗಂಟೆಗಳಿಗೂ ಹೆಚ್ಚು ಕಾಲ ಚರ್ಚೆ ನಡೆಯಿತು. ಆನಂತರ ಧ್ವನಿಮತದ ಮೂಲಕ ವಿಧೇಯಕವನ್ನು ಅಂಗೀಕರಿಸಲಾಯಿತು.

ಈ ಕಾಯಿದೆಯಡಿ ಸಾರ್ವಜನಿಕ ವಾಹನಗಳಲ್ಲಿ ಧೂಮಪಾನ ಮಾಡುವುದನ್ನೂ ನಿಷೇಧಿಸಲಾಗಿದೆ. ಸಾರ್ವಜನಿಕ ಸ್ಥಳ ಎಂದು ಪಟ್ಟಿ ಮಾಡಲಾಗಿರುವ ಸ್ಥಳದಲ್ಲಿ ಬೀಡಿ, ಸಿಗರೇಟು ಮಾರಾಟ ಮಾಡುವುದನ್ನು ಮತ್ತು ಜಾಹೀರಾತು ಪ್ರಕಟಿಸುವುದನ್ನೂ ನಿರ್ಬಂಧಿಸಲಾಗಿದೆ. ಈ ಪಟ್ಟಿಯಲ್ಲಿ ರೈಲು ನಿಲ್ದಾಣ, ಬಸ್‌ ನಿಲ್ದಾಣಗಳನ್ನೂ ಸೇರಿಸುವಂತೆ ಪ್ರತಿಪಕ್ಷ ನಾಯಕ ಕೆ.ಎಚ್‌. ಶ್ರೀನಿವಾಸ್‌ ಒತ್ತಾಯಿಸಿದರು.

ಇದಕ್ಕೂ ಮುನ್ನ ವಿಶ್ವ ಪರಿಸರ ದಿನದಂದು ರಾಜ್ಯ ಸರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಿರುವುದಾಗಿ ಪ್ರಕಟಿಸಿತ್ತು. ನಿಷೇಧವನ್ನು ಉಲ್ಲಂಘಿಸಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು, ಕಾನೂನಿಗೆ ಹೆಚ್ಚು ಬಲ ನೀಡುವ ಇಲ್ಲವೇ ಹೊಸ ಕಾಯಿದೆಯನ್ನೇ ಮಾಡುವುದಾಗಿ ಅಂದು ಕೃಷ್ಣ ಪ್ರಕಟಿಸಿದ್ದರು.

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+