ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ವರ್ಷವೂ ಸಾಫ್ಟ್‌ವೇರ್‌ ರಫ್ತು ಗುರಿ ಸಾಧನೆ : ನಾಸ್ಕಾಮ್‌ ಅಧ್ಯಕ್ಷ

By Staff
|
Google Oneindia Kannada News

ಬೆಂಗಳೂರು : ಪ್ರಸಕ್ತ ವರ್ಷದಲ್ಲಿ 400 ಶತ ಕೋಟಿ ರುಪಾಯಿಗಳ ಸಾಫ್ಟ್‌ವೇರ್‌ ರಫ್ತು ಗುರಿ ಸಾಧನೆ ಆಗಲಿದೆ ಎಂಬ ವಿಶ್ವಾಸವನ್ನು ನ್ಯಾಷನಲ್‌ ಅಸೋಸಿಯೇಷನ್‌ ಆಫ್‌ ಸಾಫ್ಟ್‌ವೇರ್‌ ಅಂಡ್‌ ಸರ್ವೀಸ್‌ ಕಂಪನೀಸ್‌ (ನಾಸ್ಕಾಮ್‌) ನೂತನ ಅಧ್ಯಕ್ಷ ಫಿರೋಜ್‌ ವಂದೇರ್‌ವಾಲ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಇ- ಬಿಜ್‌ ಇಂಡಿಯಾ ಸಮಾವೇಶದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಕಳೆದ ಮೂರು ತಿಂಗಳಿನ ಅವಧಿಗೆ ಹೋಲಿಸಿದರೆ, ಈ ವರ್ಷದ ಮೊದಲ ಮೂರು ತಿಂಗಳು ಆಶಾದಾಯಕವಾಗಿದೆ. ಅಂದಾಜಿನ ಪ್ರಕಾರ ರಫ್ತು ವಹಿವಾಟು ಪ್ರತಿಶತ 6ರಿಂದ 12ರಷ್ಟು ಬೆಳವಣಿಗೆ ಸಾಧಿಸಿದೆ. ಈ ರಫ್ತು ಪ್ರಮಾಣ 8,500 ಕೋಟಿ ರು.ಗಳಿಂದ 90 ಶತಕೋಟಿ ಬಿಲಿಯನ್‌ ರುಪಾಯಿಗಳ ನಡುವೆ ಇದೆ ಎಂದು ಹೇಳಿದರು.

ಸಾಫ್ಟ್‌ವೇರ್‌ ರಫ್ತಿನಲ್ಲಿ ಸತತ ನಾಲ್ಕನೇ ವರ್ಷವೂ ಶೇಕಡ 35ರಷ್ಟು ಒಟ್ಟು ಅಭಿವೃದ್ಧಿ ಪ್ರಮಾಣ ದಾಖಲಿಸಲಾಗುವುದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಅವರು, 2008ನೇ ಇಸವಿಯಾಳಗೆ ದೇಶವು 50 ಬಿಲಿಯನ್‌ ಡಾಲರ್‌ ರಫ್ತು ಗುರಿ ತಲುಪಲು ದಾಪುಗಾಲಿಟ್ಟಿದೆ ಎಂದರು.

ಐ.ಟಿ. ಕ್ಷೇತ್ರದಲ್ಲಿ ಯುರೋಪ್‌ ಮತ್ತು ಅಮೆರಿಕದಲ್ಲಿ ಉಂಟಾಗಿರುವ ಆರ್ಥಿಕ ಹಿನ್ನೆಡೆಯ ಪರಿಣಾಮ ಕೆಲವು ಮಧ್ಯಮ ಹಾಗೂ ಸಣ್ಣ ಸಾಫ್ಟ್‌ವೇರ್‌ ಉದ್ದಿಮೆಗಳ ಮೇಲೆ ಉಂಟಾಗಿದೆ. ಆದರೆ, ಬೃಹತ್‌ ಕಂಪನಿಗಳು ದೊಡ್ಡ ಡೀಲ್‌ಗಳಿಗೆ ಸಹಿ ಮಾಡುತ್ತಲೇ ಇದ್ದಾರೆ ಎಂದು ಅವರು ಹೇಳಿದರು.

ನೆರವು : ಈ ಹಿನ್ನೆಲೆಯಲ್ಲಿ ನಾಸ್ಕಾಮ್‌ ಸಣ್ಣ ಮತ್ತು ಮಧ್ಯಮ ಸಾಫ್ಟ್‌ವೇರ್‌ ಉದ್ದಿಮೆಗಳಿಗೆ ನೆರವಾಗುವ ಪ್ರಯತ್ನ ನಡೆಸುತ್ತಿದೆ. ಯುರೋಪ್‌ನ ಮಾಹಿತಿ ತಂತ್ರಜ್ಞಾನ ವಿಭಾಗವು ಯುರೋಪ್‌ ಹಾಗೂ ಭಾರತದ ಸಣ್ಣ ಮತ್ತು ಮಧ್ಯಮ ಸಾಫ್ಟ್‌ವೇರ್‌ ಉದ್ದೇಮೆಗಳಲ್ಲಿ ಹಣ ತೊಡಗಿಸಲು ಮುಂದಾಗಿದೆ ಎಂದರು.

ಪ್ರಶ್ನೆಯಾಂದಕ್ಕೆ ಉತ್ತರ ನೀಡುತ್ತಿದ್ದ ಅವರು, ಐ.ಟಿ. ಕ್ಷೇತ್ರದ ಯಾವುದೇ ಬೃಹತ್‌ ಉದ್ದಿಮೆಗಳು ಐ.ಟಿ. ತಂತ್ರಜ್ಞರ ಸಂಖ್ಯೆಯನ್ನು ಕಡಿತಗೊಳಿಸುತ್ತಿರುವ ಕಾರಣ ಸಾವಿರಾರು ಸಂಖ್ಯೆಯಲ್ಲಿ ತಂತ್ರಜ್ಞರು ಭಾರತಕ್ಕೆ ಮರಳುತ್ತಿದ್ದಾರೆ ಎಂಬುದನ್ನು ಅಲ್ಲಗಳೆದರು.

ಅಂಕಿ ಅಂಶಗಳ ರೀತ್ಯ ಅಮೆರಿಕೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎರಡು ಲಕ್ಷ ತಂತ್ರಜ್ಞರ ಪೈಕಿ 1,500 ಸಾಫ್ಟ್‌ವೇರ್‌ ಎಂಜಿನಿಯರ್‌ಗಳಿಗೆ ಮಾತ್ರ ತೊಂದರೆಯಾಗಿದೆ. ಇವರೂ ಕೂಡ ಬೇರೆ ಕಂಪನಿಗಳಲ್ಲಿ ಕೆಲಸ ಸಂಪಾದಿಸಬಹುದಾಗಿದೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X