ಉಸ್ತಾದ್ ಝಾಕಿರ್ ಹುಸೇನ್ರಿಂದ ತಬಲಾಗೆ ಗುಡ್ಬೈ?
ನವದೆಹಲಿ : ತಬಲಾ ಮಾಂತ್ರಿಕ ನಲವತ್ತನಾಲ್ಕು ವರ್ಷಗಳ ಉಸ್ತಾದ್ ಝಾಕಿರ್ ಹುಸೇನ್ ಶಾಸ್ತ್ರೀಯ ಸಂಗೀತ ಕ್ಷೇತ್ರದಿಂದ ವಿರಮಿಸುವ ದಾರಿಯಲ್ಲಿದ್ದಾರಾ? ಸಮೀಪವರ್ತಿಗಳು ಹೌದೆನ್ನುತ್ತಾರೆ.
ಮಿತಿ ಮೀರಿದ ವಾಣಿಜ್ಯೀಕರಣಕ್ಕೊಳಗಾಗುತ್ತಿರುವ ಸಂಗೀತ ಕ್ಷೇತ್ರ ಝಾಕಿರ್ ಅವರನ್ನು ಹತಾಶರಾಗಿಸಿದೆಯಂತೆ. ತಬಲಾ ವಾದನ ಕೈ ಬಿಡಲು ಮತ್ತೊಂದು ಕಾರಣ ಉಸ್ತಾದರ ಬೆರಳುಗಳ ನೋವು. ಈ ವಿಷಯವನ್ನು ಉಸ್ತಾದರ ಸಮೀಪದ ಮೂಲಗಳನ್ನು ಉಲ್ಲೇಖಿಸಿ ಪಿ.ಟಿ.ಐ. ಸುದ್ದಿಸಂಸ್ಥೆ ವರದಿ ಮಾಡಿದೆ.
ಜುಲೈ ತಿಂಗಳ ಕೊನೆಯ ಭಾಗದಲ್ಲಿ ತಬಲಾಗೆ ಗುಡ್ಬೈ ಹೇಳುವ ವಿಷಯವನ್ನು ಝಾಕಿರ್ ಹುಸೇನ್ ಅವರು ಖುದ್ದಾಗಿ ಪ್ರಕಟಿಸುವರು ಎಂದು ಮೂಲಗಳು ತಿಳಿಸಿವೆ. ಅದರೆ, ಉಸ್ತಾದ್ರ ಮ್ಯಾನೇಜರ್ ಸನ್ನಿಧಿ ಪಟೇಲ್ ಅವರನ್ನು ಸಂಪರ್ಕಿಸಿದಾಗ, ಅವರು ಝಾಕಿರ್ ಅವರ ನಿವೃತ್ತಿಯನ್ನು ಖಚಿತಪಡಿಸಲೂ ಇಲ್ಲ ನಿರಾಕರಿಸಲೂ ಇಲ್ಲ ಎಂದು ಪಿ.ಟಿ.ಐ. ಹೇಳಿದೆ.
ಪ್ರಸಿದ್ಧ ತಬಲಾವಾದಕ ಅಲ್ಲಾ ರಖಾ ಅವರ ಪುತ್ರರಾದ ಝಾಕಿರ್ ಹುಸೇನ್, 12 ನೇ ವಯಸ್ಸಿನಲ್ಲಿಯೇ ತಮ್ಮ ಪ್ರಥಮ ತಬಲಾ ಕಚೇರಿ ನೀಡಿದ್ದರು. ಜಗತ್ತಿನಾದ್ಯಂತ ಲಕ್ಷಗಟ್ಟಲೆ ಅಭಿಮಾನಿಗಳನ್ನು ಹೊಂದಿರುವ ಝಾಕಿರ್ ಅವರ ತಬಲಾ ಹಾಗೂ ರವಿಶಂಕರ್ ಅವರ ಸಿತಾರ್ ಜುಗಲ್ಬಂದಿ ಸಂಗೀತ ಶ್ರೇಷ್ಠತೆಗೆ ಮತ್ತೊಂದು ಹೆಸರು.
ಝಾಕಿರ್ ಹುಸೇನ್ ಅವರು ಪ್ರಸ್ತುತ ತಮ್ಮ ಕುಟುಂಬದೊಂದಿಗೆ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿದ್ದಾರೆ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications