ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ ಬೀದಿ ನಾಯಿಗಳಿಗೊಂದು ಆಶ್ರಯ ತಾಣ

By Staff
|
Google Oneindia Kannada News

ಬೆಂಗಳೂರು : ಇಲ್ಲಿನ ಒಂದು ಲಕ್ಷಕ್ಕೂ ಹೆಚ್ಚು ಬೀದಿನಾಯಿಗಳಿಗೆ ನಗರದ ಹೊರವಲಯದಲ್ಲಿ 7 ಎಕರೆ ಜಾಗೆ ಖರೀದಿಸಿ, ಅಲ್ಲಿ ಆಶ್ರಯ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ತಿಳಿಸಿದ್ದಾರೆ.

ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಎಚ್‌.ಎಂ.ರೇವಣ್ಣ ಅವರ ಪ್ರಶ್ನೆಗೆ ಕೃಷ್ಣ ಉತ್ತರಿಸುತ್ತಿದ್ದರು. ಬೀದಿನಾಯಿಗಳನ್ನು ನಗರದ ಹೊರವಲಯಕ್ಕೆ ವರ್ಗಾಯಿಸುವ ಕೆಲಸವನ್ನು ಬೆಂಗಳೂರು ಮಹಾನಗರ ಪಾಲಿಕೆಗೆ ವಹಿಸಲಾಗಿದೆ ಎಂದು ಹೇಳಿದರು.

ಬೀದಿನಾಯಿಗಳ ಕಾಟದ ವಿರುದ್ಧದ ಕಾರ್ಯವನ್ನು ಪ್ರತಿಭಟಿಸುವ ಪ್ರಾಣಿ ದಯಾ ಸಂಘದವರು ಜನರ ಸಮಸ್ಯೆಗಳ ಬಗ್ಗೆ ಯಾಕೆ ಮಾತಾಡುತ್ತಿಲ್ಲ ? ವಾಯುವಿಹಾರಕ್ಕೆಂದು ಓಡಾಡುವವರಿಗೆ, ದ್ವಿಚಕ್ರ ವಾಹನ ಸಂಚಾರಿಗಳಿಗೆ ಬೀದಿ ನಾಯಿಗಳು ಕೊಡುತ್ತಿರುವ ತೊಂದರೆ ಅಷ್ಟಿಷ್ಟಲ್ಲ ಎಂದು ರೇವಣ್ಣ ಹಾಗೂ ಬಿಜೆಪಿಯ ಸುರೇಶ್‌ ಕುಮಾರ್‌ ದನಿಯೆತ್ತಿದರು.

ಈ ವಿಷಯ ಸರ್ಕಾರದ ಗಮನಕ್ಕೆ ಬಂದಿದೆ. ಮಹಾನಗರ ಪಾಲಿಕೆಯು ಬೀದಿ ನಾಯಿಗಳ ಕಾಟ ನಿಯಂತ್ರಿಸುವ ಕೆಲಸವನ್ನು ಸ್ವಯಂ ಸೇವಾ ಸಂಸ್ಥೆಗಳಿಗೆ ವಹಿಸಿದೆ. ಬೀದಿನಾಯಿಗಳನ್ನು ಹಿಡಿಯಲು ಕೇವಲ 6 ವಾಹನಗಳಿದ್ದು, ಅವುಗಳಲ್ಲೇ ಕೆಲಸವನ್ನು ಚುರುಕುಗೊಳಿಸಬೇಕಾಗಿದೆ. ನಾಯಿಗಳಿಗೆ ಚುಚ್ಚುಮದ್ದು, ಸಂತಾನ ಹರಣ ಚಿಕಿತ್ಸೆ ನೀಡಲಾಗುತ್ತಿದೆ. ರೇಬಿಸ್‌ ಮತ್ತಿತರ ಕಾಯಿಲೆಗೆ ತುತ್ತಾಗಿರುವ ನಾಯಿಗಳನ್ನು ಚಿರನಿದ್ರೆಗೆ ಒಳಪಡಿಸಲಾಗುವುದು. ಈ ಕಾರ್ಯ ಸುಗಮವಾಗಲೆಂದು ನಾಯಿ ಹಿಡಿಯುವ ವಾಹನಗಳ ಚಾಲಕರಿಗೆ ವೈರ್‌ಲೆಸ್‌ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಕೃಷ್ಣ ಉತ್ತರ ಕೊಟ್ಟರು.

(ಇನ್ಫೋ ವಾರ್ತೆ)

What do you think about this article?

ವಾರ್ತಾ ಸಂಚಯ
ನಿಮ್ಮ ಅಚ್ಚುಮೆಚ್ಚಿನ ನಾಯಿ ಇತರರಿಗೆ ಕಚ್ಚೀತು ಜೋಕೆ !

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X