ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನು ಮಾಯವೋ ! ಉಡುಪಿಯಲ್ಲಿ ನಡೆಯಲಿದೆ ಗಿಲಿಗಿಲಿ-2001

By Staff
|
Google Oneindia Kannada News

ಉಡುಪಿ : ‘ಗಿಲಿ ಗಿಲಿ - 2001’ ಅಂತರರಾಷ್ಟ್ರೀಯ ಜಾದೂಗಾರರ ಸಮ್ಮೇಳನದ ಆತಿಥ್ಯವನ್ನು ಈ ಬಾರಿ ಉಡುಪಿ ಜಿಲ್ಲೆ ವಹಿಸಲಿದೆ.

ನವೆಂಬರ್‌ 23 ಮತ್ತು 25ರಂದು ಎರಡು ದಿನಗಳ ಜಾಗತಿಕ ಮಟ್ಟದ ಜಾದೂಗಾರರ ಸಮ್ಮೇಳನ ನಡೆಯಲಿದೆ ಎಂದು ‘ಶಂಕರ್ಸ್‌ ವರ್ಲ್ಡ್‌ ಮ್ಯಾಜಿಕ್‌’ನ ಸಂಘಟಕ ಶಂಕರ್‌ ಮಂಗಳವಾರ ತಿಳಿಸಿದ್ದಾರೆ. ಅಮೆರಿಕಾದ ಫ್ರಾನ್ಸ್‌ ಹರಾರಿ, ಕೆನಡಾದ ಡೀನ್‌ ಗುನಾರ್‌ಸನ್‌, ಮೋಂಟಾನಾದ ಡಾನ್‌ ಮತ್ತು ಮೇರಿ ಲಾಫ್ಲಿನ್‌, ಲಾಸ್‌ ವೇಗಸ್‌ನ ಮೈಖೆಲ್‌ ಸ್ಟ್ರಾಡ್‌, ಚಿಕಾಗೋದ ಶ್ರೀಯಾಶ್‌ ಈ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ಜಗತ್ತಿನ ಪ್ರಸಿದ್ಧ ಜಾದೂಗಾರರೂ ಸೇರಿದಂತೆ ಸುಮಾರು ಒಂದು ಸಾವಿರ ಮಂದಿ ಜಾದೂಗಾರರು ಈ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸ್ವಪ್ನಲೋಕ ಸೃಷ್ಟಿಸುವಲ್ಲಿ ಎತ್ತಿದ ಕೈ ಎನಿಸಿದ ಫ್ರಾನ್ಸ್‌ ಹರಾರಿ, ಕೆನಡಿ ಸ್ಪೇಸ್‌ ಸೆಂಟರ್‌ನಲ್ಲಿ ಸ್ಪೇಸ್‌ ಶಟ್ಲ್‌ನ್ನು ಮಾಯಮಾಡಿ ವೀಕ್ಷಕರನ್ನು ಬೆರಗುಗೊಳಿಸಿದವರು. ಆಗ್ರಾದ ತಾಜ್‌ಮಹಲನ್ನು ಮಾಯಗೊಳಿಸಿದ ಖ್ಯಾತಿಯೂ ಅವರದೇ.

ಅಂತರರಾಷ್ಟ್ರೀಯ ಖ್ಯಾತಿಯ ಜಾದೂಗಾರರ ಪರಿಚಯಗೋಷ್ಠಿಯನ್ನು ಡಾನ್‌ ಮತ್ತು ಮೇರಿ ಅವರು ನಡೆಸಿಕೊಡಲಿದ್ದಾರೆ. ಜಗತ್ತಿನ ಪ್ರಖ್ಯಾತ ಎಸ್ಕೇಪ್‌ ಆರ್ಟಿಸ್ಟ್‌ ಎನಿಸಿಕೊಂಡಿರುವ ಡೀನ್‌ ಗುನಮಾರ್‌ಸನ್‌ ನವೆಂಬರ್‌ನಲ್ಲಿ ನಡೆವ ಸಮ್ಮೇಳನದಲ್ಲಿ ಪ್ರದರ್ಶನ ನೀಡುವರು. ಕೇರಳದ ಪಿ.ಎಂ. ಮಿತ್ರ, ಗುಜರಾತ್‌ನ ಲಲಾಂತ್‌ ವಾಡಿ ಸೇರಿದಂತೆ ಪ್ರಸಿದ್ಧ ಭಾರತೀಯ ಜಾದೂಗಾರರು ಸಮ್ಮೇಳನದಲ್ಲಿ ಪ್ರದರ್ಶನ ನೀಡಲಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X