ವಿದೇಶದಲ್ಲಿ ವ್ಯಾಸಂಗ ಮಾಡಲು 15 ಲಕ್ಷ ರು. ಶೈಕ್ಷಣಿಕ ಸಾಲ
ಮಂಗಳೂರು: ದೇಶ ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳ ನೆರವಿಗಾಗಿ ಕಾರ್ಪೊರೇಷನ್ ಬ್ಯಾಂಕ್ ಹೊಸ ಶೈಕ್ಷಣಿಕ ಸಾಲ ಯೋಜನೆಯನ್ನು ಪ್ರಕಟಿಸಿದೆ. ‘ಕಾರ್ಪೋ ವಿದ್ಯಾ’ ಎಂಬ ಹೆಸರಿನ ಈ ಯೋಜನೆಯಡಿ ಭಾರತದೊಳಗೆ ಶಿಕ್ಷಣ ಪಡೆಯುವವರಿಗೆ 7.5 ಲಕ್ಷ ರುಪಾಯಿ ಹಾಗೂ ವಿದೇಶಗಳಲ್ಲಿ ಶಿಕ್ಷಣ ಪಡೆಯುವವರಿಗೆ 15 ಲಕ್ಷ ರುಪಾಯಿಗಳವರೆಗೆ ಸಾಲ ನೀಡಲಾಗುವುದು.
ಈ ವಿಷಯವನ್ನು ಬ್ಯಾಂಕಿನ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಚೆರಿಯನ್ ವರ್ಗೀಸ್ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಈ ಯೋಜನೆ ತತ್‌ಕ್ಷಣದಿಂದಲೇ ಜಾರಿಗೆ ಬಂದಿದೆ ಎಂದೂ ಅವರು ಹೇಳಿದರು.
ಭಾರತದಲ್ಲಿ ತಾಂತ್ರಿಕ ಮತ್ತು ವೃತ್ತಿಪರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುವವರು, ವಿದೇಶೀ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆಯುವವರು ಈ ಸೌಲಭ್ಯದ ಲಾಭ ಪಡೆಯಬಹುದು ಎಂದು ಅವರು ಹೇಳಿದರು. 4 ಲಕ್ಷ ರುಪಾಯಿಗಳವರೆಗಿನ ಶೈಕ್ಷಣಿಕ ಸಾಲಕ್ಕೆ ಭದ್ರತೆಯ ಅಗತ್ಯ ಇಲ್ಲ ಎಂದ ಅವರು, ಈ ಸಾಲಕ್ಕೆ 12.5ರಷ್ಟು ಬಡ್ಡಿ ವಿಧಿಸಲಾಗುವುದು ಎಂದು ತಿಳಿಸಿದರು.
ವಿದ್ಯಾಭ್ಯಾಸ ಮುಗಿದ ಒಂದು ವರ್ಷದ ಒಳಗಾಗಿ ಸಾಲ ಮರುಪಾವತಿಯ ಕಂತು ಆರಂಭವಾಗುತ್ತದೆ ಎಂದ ಅವರು, ಬ್ಯಾಂಕ್ ವಿಶೇಷ ಕೃಷಿ ಸಾಲ ಯೋಜನೆಯಡಿ ಕಳೆದ ಸಾಲಿನಲ್ಲಿ ನಿಗದಿಗೊಳಿಸಿದ್ದ 335 ಕೋಟಿ ರುಪಾಯಿಗಳಿಗಿಂತ ಶೇಕಡಾ 25ರಷ್ಟು ಹೆಚ್ಚು ಸಾಲ ನೀಡಿದೆ. 26,267 ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸಲಾಗಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ 10 ಗ್ರಾಮಗಳನ್ನು ದತ್ತು ಸ್ವೀಕರಿಸಿ ಮಾದರಿ ಗ್ರಾಮಗಳಾಗಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಬ್ಯಾಂಕ್ 3079 ಸ್ವಸಹಾಯ ಗುಂಪುಗಳನ್ನು ಈಗಾಗಲೇ ರಚಿಸಿದೆ. ಚಿಕ್ಕಮಗಳೂರಿನಲ್ಲಿ ಸ್ವ ಉದ್ಯೋಗ ತರಬೇತಿ ಕೇಂದ್ರ ಆರಂಭಿಸಿ, ಚಿಕ್ಕಮಗಳೂರು ಹಾಗೂ ಕೊಡಗಿನ 2588 ಜನರಿಗೆ ಸ್ವಉದ್ಯೋಗ ತರಬೇತಿ ನೀಡಲಾಗಿದೆ ಎಂದು ಚೆರಿಯನ್ ಹೇಳಿದರು.
ಬ್ಯಾಂಕಿನ ಆರ್ಥಿಕ ಅಭಿವೃದ್ಧಿ ಪ್ರತಿಷ್ಠಾನದಿಂದ ಸಾಗರ ತಾಲೂಕಿನ ಹಂದಿಗೋಡಿನಲ್ಲಿ ಆರೋಗ್ಯ ಶಿಬಿರಕ್ಕೆ 2 ಲಕ್ಷ ರುಪಾಯಿ ಧನಸಹಾಯ ಮಾಡಲಾಗಿದೆ. ದೇಶದ ವಿವಿಧೆಡೆ ಕುಡಿಯುವ ನೀರು, ಶಾಲಾ ಕಟ್ಟಡ ದುರಸ್ತಿಗೆ 23 ಲಕ್ಷ ರುಪಾಯಿ ಒದಗಿಸಲಾಗಿದೆ ಎಂದು ಅವರು ಹೇಳಿದರು.
ನಿರಾಕರಣೆ : ಸಾರ್ವಜನಿಕ ರಂಗದ ಪ್ರಮುಖ ಮತ್ತು ಲಾಭಗಳಿಕೆಯ ಬ್ಯಾಂಕ್‌ಗಳಲ್ಲಿ ಒಂದಾದ ಕಾರ್ಪೊರೇಷನ್ ಬ್ಯಾಂಕನ್ನು ಬೇರಾವುದೇ ಬ್ಯಾಂಕ್ ಜತೆ ವಿಲೀನ ಗೊಳಿಸುವ ಪ್ರಸ್ತಾಪ ಇಲ್ಲವೇ ಇಲ್ಲ ಎಂದೂ ಚೆರಿಯನ್ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಈ ಸಂಬಂಧ ಎದ್ದಿರುವ ಸುದ್ದಿಗಳೆಲ್ಲವೂ ವದಂತಿ ಎಂದು ಅವರು ಹೇಳಿದರು. ಈ ವರ್ಷ 250 ಎಟಿಎಂ ಕೌಂಟರ್ ತೆರೆಯಲಾಗುವುದು ಎಂದೂ ಅವರು ತಿಳಿಸಿದರು.-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications