ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಸ್ಟಾ ರ್‌’ನ ಇನ್ನೊಂದು ಕೊಡುಗೆ: ಕಿರುತೆರೆಗೆ ಸೋನಾಲಿ ಬೇಂದ್ರೆ

By Super
|
Google Oneindia Kannada News

Sonali Bendre
ಮುಂಬಯಿ : ಬಿಗ್‌ಬೀ ನಿರೂಪಿಸುತ್ತಿರುವ ಕೆಬಿಸಿ ಯಶಸ್ಸಾಗಿದ್ದೇ ಆಗಿದ್ದು, ಕಿರುತೆರೆ ಕಳೆಗಟ್ಟಿದೆ. ಅದರಲ್ಲೂ ಸ್ಟಾರ್‌ ಟಿವಿ ಹೆಜ್ಜೆ ಹೆಜ್ಜೆಗೂ ಬುದ್ಧಿ ಖರ್ಚು ಮಾಡುತ್ತಿದೆ. ಈ ಬಾರಿ ಬಡನಡು ಸುಂದರಿ ಸೋನಾಲಿ ಬೇಂದ್ರೆ ಅದರ ಕೊಡುಗೆ.

ಮನಿಷಾ ಕೊಯಿರಾಲ, ಅನುಪಮ್‌ ಖೇರ್‌ ಈ ನಿಟ್ಟಿನಲ್ಲಿ ವಿಫಲ ಪ್ರಯತ್ನ ನಡೆಸಿದರೂ, ಗೋವಿಂದ ಸಕ್ಸಸ್‌ ಆಗಿದ್ದಾರೆ. 'ಜೀತೋ ಛಪ್ಪಡ್‌ ಫಾಡ್ಕೆ" ಹಿಂಡುಗಟ್ಟಲೆ ಅಭಿಮಾನಿಗಳ ಕಂಡುಕೊಂಡಿದೆ. ಈಗ 'ಕ್ಯಾ ಮಸ್ತಿ ಕ್ಯಾ ಧೂಮ್‌". ನಿರೂಪಣೆ- ಹಮ್ಮಾ ಹಮ್ಮಾ ಸುಂದರಿ ಸೋನಾಲಿ.

ಕೈತುಂಬಾ ಚಿತ್ರಗಳಿಲ್ಲದಿದ್ದರೂ, ಯಶಸ್ವಿ ನಟಿ ಅಲ್ಲದಿದ್ದರೂ ಸೋನಾಲಿ ನಿರುದ್ಯೋಗಿ ಅಂತೂ ಆಗಲೇ ಇಲ್ಲ. ಅದಕ್ಕೆ ಕಾರಣ ಅವರಿಗೆ ಭಗವಂತ ಕೊಟ್ಟಿರುವ ಚೆಲುವು, ಒನಪು. 'ಲವ್‌ ಕೇ ಲಿಯಾ ಕುಛ್‌ ಭಿ ಕರೆ" ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ಸೋನಾಲಿ ಸ್ವಲ್ಪ ಫ್ರೀ ಆಗಿದ್ದಾರಂತೆ. ಅದಕ್ಕೇ ಸ್ಟಾರ್‌ ಟಿವಿ ಗಾಳ ನೇರ ಈ ಚೆಲುವೆಗೆ.

ಥ್ರಿಲ್‌ ಆಗದಿರಿ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು 8ರಿಂದ 18 ವರ್ಷದವರಿಗೆ ಮಾತ್ರ ಅವಕಾಶ. ಬೇಜಾರಾಗಬೇಡಿ. ಪ್ರತಿ ಶುಕ್ರವಾರ ರಾತ್ರಿ ಟಿವಿ ಮುಂದೆ ಕೂರಿ. ಸೋನಾಲಿ ನೋಡಿ.

English summary
Sonali Bendre to enter small screen
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X