Get Updates
Get notified of breaking news, exclusive insights, and must-see stories!

ಪಾಕಿಸ್ತಾನದಲ್ಲಿ ನಾನು ಹಾಡುವುದಿಲ್ಲ : ಲತಾಮಂಗೇಶ್ಕರ್‌ ಸ್ಪಷ್ಟನೆ

ಲಂಡನ್‌ : ಪಾಕಿಸ್ತಾನದಲ್ಲಿ ತಾವು ಹಾಡುವುದೂ ಇಲ್ಲ ಕಾರ್ಯಕ್ರಮ ನೀಡುವುದೂ ಇಲ್ಲ ಎಂದು ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್‌ ಸ್ಪಷ್ಟಪಡಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ ಸಹಾಯಾರ್ಥ ಪಾಕಿಸ್ತಾನದಲ್ಲಿ ತಾವು ಸಂಗೀತ ಕಾರ್ಯಕ್ರಮ ನೀಡುವುದಾಗಿ ಮಾಧ್ಯಮಗಳಲ್ಲಿ ಬಂದಿರುವ ಸುದ್ದಿಯನ್ನು ಅವರು ನಿರಾಕರಿಸಿದ್ದಾರೆ.

ಇದೊಂದು ಗಾಳಿಪಟ. ಏಕೆ ಹೀಗೆ ಸುದ್ದಿ ಹಬ್ಬಿಸಿದರೋ ಗೊತ್ತಿಲ್ಲ. ನನಗೂ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗೂ ಏನು ಸಂಬಂಧ ಎಂದು ಲತಾ ಪ್ರಶ್ನಿಸಿದ್ದಾರೆ. ಲತಾ ಮಂಗೇಶ್ಕರ್‌ ಪಾಕಿಸ್ತಾನದಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಾರೆ ಎಂಬ ಸುದ್ದಿಯಿಂದ ಪಾಕಿಸ್ತಾನಿ ಸಂಗೀತ ಪ್ರೇಮಿಗಳು ಫುಲಕಗೊಂಡಿದ್ದರು. ಅಂತೆಯೇ ಭಾರತದ ಸಂಗೀತಾಭಿಮಾನಿಗಳು ಬೇಸರವನ್ನೂ ವ್ಯಕ್ತಪಡಿಸಿದ್ದರು.

ಸ್ಪಷ್ಟ ನಿರಾಕರಣೆಯ ಮೂಲಕ ಈ ಎಲ್ಲ ಊಹಾಪೋಹಗಳಿಗೆ ಲತಾ ಮಂಗೇಶ್ಕರ್‌ ತೆರೆ ಎಳೆದಿದ್ದಾರೆ. ಪ್ರಸ್ತುತ ಯುರೋಪ್‌ ಪ್ರವಾಸದಲ್ಲಿರುವ ಲತಾ ಜುಲೈ ಮೊದಲ ವಾರದಲ್ಲಿ ಭಾರತಕ್ಕೆ ಮರಳಿದೊಡನೆ ಅವರ ಕಾರ್ಯಕ್ರಮದ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ ಮಾರ್ಕೆಟಿಂಗ್‌ ಡೈರೆಕ್ಟರ್‌ ಜಹೀದ್‌ ಬಶೀರ್‌ ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+