ಏಡ್ಸ್ ತಡೆಗಟ್ಟುವಲ್ಲಿ ಬಂಡೆಗಲ್ಲಾಗಿರುವ ಬೋಗಸ್ ವೈದ್ಯರು
ಗುವಾಹಟಿ : ದೇಶದಲ್ಲಿ ಏಡ್ಸನ್ನು ಆರಂಭಿಕ ಹಂತದಲ್ಲೇ ಕಂಡು ಹಿಡಿಯಲು ಇರುವ ದೊಡ್ಡ ತೊಡಕು ಬೋಗಸ್ ವೈದ್ಯರು. ಏಡ್ಸ್ ಕಾರ್ಯಕರ್ತರು ಶುಕ್ರವಾರ ಈ ವಿಷಯ ಸ್ಪಷ್ಟಪಡಿಸಿದ್ದಾರೆ.
ಏಡ್ಸ್ ಹೊಂದಿರುವ ಬಹುತೇಕ ಲೈಂಗಿಕ ಕಾರ್ಯಕರ್ತರು ಮೊದಲು ಹೋಗುವುದು ಅಳಲೆಕಾಯಿ ಪಂಡಿತರ ಬಳಿಗೆ ಅಥವಾ ಯಬಡೇಶಿ ವೈದ್ಯರಲ್ಲಿಗೆ. ದೇಶದ ಪೂರ್ವ ಹಾಗೂ ಉತ್ತರ ಭಾಗದ ಏಳು ರಾಜ್ಯಗಳಲ್ಲಿ ಕನಿಷ್ಠ 50 ಸಾವಿರ ಮಂದಿಗೆ ಎಚ್‌ಐವಿ ಸೋಂಕಿದೆ. ಹೆರಾಯಿನ್ ಉತ್ಪಾದಿಸುವ ಥೈಲ್ಯಾಂಡ್-ಲಾಓಸ್- ಮಯನ್ಮಾರ್‌ನ ಗೋಲ್ಡನ್ ಟ್ರಯಾಂಗಲ್‌ನ ಗಡಿಯಲ್ಲಿರುವ ರಾಜ್ಯಗಳ ಸುಮಾರು 25 ಸಾವಿರ ಮಂದಿಗೆ ಮಾದಕ ದ್ರವ್ಯವನ್ನು ತೆಗೆದುಕೊಳ್ಳಲು ಬಳಸುವ ಚುಚ್ಚುಮದ್ದಿನಿಂದಾಗಿ ಏಡ್ಸ್ ಸೋಂಕು ತಗುಲಿದೆ ಎನ್ನುತ್ತಾರೆ ಅಸ್ಸಾಂನ ಏಡ್ಸ್ ತಡೆಗಟ್ಟುವಿಕೆ ಸಮಾಜದ ಅಧ್ಯಕ್ಷ ಎಸ್.ಐ.ಅಹ್ಮದ್.
ಏಡ್ಸ್ ಹೊಂದಿರುವ ಲಾರಿ ಚಾಲಕರ ಸಂಖ್ಯೆ ಏರಿದೆ : ಕರೆವೆಣ್ಣುಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಲಾರಿ ಚಾಲಕರಿಗೂ ಲೈಂಗಿಕ ಸಂಪರ್ಕದಿಂದ ಎಚ್‌ಐವಿ ಸೋಂಕು ಹರಡುವುದು ಹೆಚ್ಚಾಗಿದೆ. ಆದರೆ ಅವರು ವೈದ್ಯರಲ್ಲಿಗೆ ಹೋಗಲು ಸಂಕೋಚ ಅಡ್ಡಿಯಾಗುತ್ತಿದೆ. ಹೀಗಾಗಿ ಅವರು ಯಾವುದೋ ಬುರ್ನಾಸು ಪಂಡಿತನ ಬಳಿಗೆ ಹೋಗಿ, ಕತೆ ಹೇಳಿಕೊಂಡು, ಅವ ಕೊಡುವ ಚೂರ್ಣ ಜಗಿದು ಸುಮ್ಮನಾಗಿಬಿಡುತ್ತಾರೆ. ಇದು ಸರಿಯಲ್ಲ ಎಂಬುದು ಗವಾಹಟಿಯ ಪ್ರಸಿದ್ಧ ಏಡ್ಸ್ ಕೌನ್ಸಿಲರ್ ಚಿರಂಜೀಬ್ ಕಕೋಟಿ ಅಭಿಪ್ರಾಯ.
ಭಾರತದಲ್ಲಿ 3.5 ದಶಲಕ್ಷ ಮಂದಿ ಎಚ್‌ಐವಿ ಪಾಸಿಟಿವ್ ಹೊಂದಿದ್ದಾರೆ ಎಂದು ಸರ್ಕಾರದ ಅಧಿಕೃತ ವರದಿ ಹೇಳುತ್ತಿದೆ. ಆದರೆ ಈ ಪೈಕಿ ವೃತ್ತಿಪರ ವೈದ್ಯರಲ್ಲಿಗೆ ಧಾವಿಸುವ ಮಂದಿ ಬೆರಳೆಣಿಕೆಯಷ್ಟು. ಉಳಿದವರು ಬೋಗಸ್ ಡಾಕ್ಟರಿಗೆ ಫೀಸು ತೆತ್ತಿ, ಜೀವಕ್ಕೂ ಸಂಚಕಾರ ತಂದುಕೊಳ್ಳುತ್ತಿದ್ದಾರೆ. ಸರ್ಕಾರ ಈ ಬೋಗಸ್ ಡಾಕ್ಟರ ಎತ್ತಂಗಡಿ ಮಾಡಲು ಏನಾದರೂ ಮಾಡಲೇಬೇಕಾದ ಕಾಲ ಕಳೆದಾಗಿದೆ. ಏನೂ ಮಾಡಿಲ್ಲ ಅನ್ನುವುದೇ ದುರಂತ.
(ಎಎಫ್‌ಪಿ)
ಮುಖಪುಟ / ಇವತ್ತು... ಈ ಹೊತ್ತು...-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications