ಬ್ಯಾಂಕ್ ಸಾಲದ ಮೇಲಿನ 252 ಕೋಟಿ ರು. ಸುಸ್ತಿ ಬಡ್ಡಿ ಮನ್ನಾ
ಬೆಂಗಳೂರು : ರೈತರು, ರಾಜ್ಯದ ವಿವಿಧ ಪ್ರಾಥಮಿಕ ಕೃಷಿ ಹಾಗೂ ಭೂ ಬ್ಯಾಂಕ್ನಿಂದ ಪಡೆದಿರುವ ದೀರ್ಘಾವಧಿ ಸಾಲವನ್ನು ಇನ್ನು ಒಂದು ತಿಂಗಳ ಅವಧಿಯಾಳಗೆ - ಒಂದೇ ಕಂತಿನಲ್ಲಿ ಮರುಪಾವತಿಸಿದರೆ ಸುಸ್ತಿ ಬಡ್ಡಿ ಮನ್ನಾ ಮಾಡುವುದಾಗಿ ರಾಜ್ಯ ಸರಕಾರ ಪ್ರಕಟಿಸಿದೆ.
ರಾಜ್ಯದ ಮೂರು ಲಕ್ಷಕ್ಕೂ ಹೆಚ್ಚು ರೈತರು, ವಿವಿಧ ಸಹಕಾರಿ ಕೃಷಿ ಬ್ಯಾಂಕ್ಗಳಿಂದ ಪಡೆದಿರುವ 1,031 ಕೋಟಿ ರುಪಾಯಿ ಸಾಲವನ್ನು ಮರು ಪಾವತಿ ಮಾಡಲು ಸರಕಾರ ಒಂದು ತಿಂಗಳ ಕಾಲಾವಕಾಶ ನೀಡಿದೆ. ಈ ಸಂಬಂಧ 252 ಕೋಟಿ ರುಪಾಯಿಗಳ ಭಾರಿ ಮೊತ್ತದ ಸುಸ್ತಿ ಬಡ್ಡಿಯನ್ನು ಮನ್ನಾ ಮಾಡುವುದಾಗಿಯೂ ಸರಕಾರ ಘೋಷಿಸಿದೆ.
ನಬಾರ್ಡ್ ಜಾರಿಗೆ ತಂದಿರುವ ಒಂದೇ ಕಂತಿನ ಸಾಲ ತೀರುವಳಿ ಯೋಜನೆ ಅನ್ವಯ ಸರಕಾರ ಈ ಮಹತ್ವದ ನಿರ್ಧಾರ ಪ್ರಕಟಿಸಿದೆ. ಮೂರು ಲಕ್ಷ ರೈತರಿಗೆ ನೆರವಾಗಲು ಈ ಯೋಜನೆ ಪ್ರಕಟಿಸಲಾಗಿದೆ. ರೈತರು ಇದರ ಲಾಭ ಪಡೆದರೆ, ಸುಲಭವಾಗಿ ಋಣಮುಕ್ತರಾಗಬಹುದು ಎಂದೂ ಸರಕಾರ ಪ್ರಕಟಿಸಿದೆ.
ಈ ವಿಷಯವನ್ನು ರಾಜ್ಯದ ಸಹಕಾರಿ ಸಚಿವ ಡಿ.ಕೆ. ಶಿವಕುಮಾರ್ ಪ್ರಕಟಿಸಿದ್ದಾರೆ. 5 ಲಕ್ಷ ರುಪಾಯಿಗಳವರೆಗೆ ದೀರ್ಘಾವಧಿ ಸಾಲ ಪಡೆದಿರುವ ರೈತರಿಗೆ ಈ ಯೋಜನೆಯ ಲಾಭ ದೊರೆಯಲಿದೆ. ಇವರು ಸರಳ ಬಡ್ಡಿಯ ಲೆಕ್ಕಾಚಾರದಲ್ಲಿ ತಮ್ಮ ಸಾಲ ಮರುಪಾವತಿ ಮಾಡಬಹುದು ಎಂದೂ ಅವರು ತಿಳಿಸಿದರು.
(ಯು.ಎನ್.ಐ)
ಮುಖಪುಟ / ಇವತ್ತು... ಈ ಹೊತ್ತು...-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications