Get Updates
Get notified of breaking news, exclusive insights, and must-see stories!

ಆರ್‌ಟಿಓ ಕಚೇರಿಯಲ್ಲಿ ದಲ್ಲಾಳಿಗಳ ಪ್ರವೇಶ ನಿಷಿದ್ಧ : ಸಚಿವ

ಬೆಂಗಳೂರು : ಬೆಂಗಳೂರಿನ ಆರ್‌.ಟಿ.ಓ. ಕಚೇರಿಗಳಲ್ಲಿ ವಾಹನ ಚಾಲನೆ ಪರವಾನಗಿ ಪಡೆಯುವಲ್ಲಿ ಆಗುತ್ತಿರುವ ವಿಳಂಬ ತಪ್ಪಿಸಲು ಎರಡೂವರೆ ಕೋಟಿ ರುಪಾಯಿ ವೆಚ್ಚದಲ್ಲಿ ಸಂಪೂರ್ಣ ಕಂಪ್ಯೂಟರೀಕರಣ ಕಾರ್ಯ ಕೈಗೊಳ್ಳಲು ಹಾಗೂ ದಲ್ಲಾಳಿಗಳ ಹಾವಳಿ ತಪ್ಪಿಸಲು ರಾಜ್ಯ ಸರಕಾರ ನಿರ್ಧರಿಸಿದೆ.

ಸಂಪೂರ್ಣ ಗಣಕೀಕೃತಗೊಂಡಿರುವ ಯಶವಂತಪುರ ಕಚೇರಿಗೆ ಭೇಟಿ ನೀಡಿದ್ದ ಸಾರಿಗೆ ಸಚಿವ ಸಿ.ಆರ್‌. ಸಗೀರ್‌ ಅಹ್ಮದ್‌ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಈ ವಿಷಯ ತಿಳಿಸಿದರು. ವಾಹನ ಚಾಲನೆ ಪರವಾನಗಿ ನೀಡುವ ಕಚೇರಿ ಹಾಗೂ ಆವರಣದಲ್ಲಿ ಮಧ್ಯವರ್ತಿಗಳ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಮಧ್ಯವರ್ತಿಗಳಿಗೆ ಇಲ್ಲವೇ ಅಧಿಕಾರಿಗಳಿಗೆ 500 ರುಪಾಯಿ ಲಂಚ ನೀಡುವ ಬದಲು 1 ರುಪಾಯಿ ಖರ್ಚು ಮಾಡಿ, ಸಾರಿಗೆ ಆಯುಕ್ತರಿಗಾಗಲೀ ಅಥವಾ ತಮಗಾಗಲೀ ನೇರವಾಗಿ ಪತ್ರಬರೆಯುವಂತೆ ನಾಗರಿಕರಿಗೆ ಕರೆ ನೀಡಿದರು. ಕಂಪ್ಯೂಟರ್‌ನಲ್ಲಿ ಸುಮಾರು 16 ಲಕ್ಷ ನೊಂದಣಿ ಸಂಖ್ಯೆಗಳ ಮಾಹಿತಿ ದಾಖಲಿಸಲಾಗುವುದು ಎಂದೂ ಹೇಳಿದರು.

ದಲ್ಲಾಳಿಗಳ ಜತೆ ಕೈಜೋಡಿಸುವ, ಸಾರ್ವಜನಿಕರೊಂದಿಗೆ ಸಭ್ಯವಾಗಿ ವರ್ತಿಸದ ಹಾಗೂ ಅನಗತ್ಯ ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಸಾರಿಗೆ ಆಯುಕ್ತ ಟಿ. ತಿಮ್ಮೇಗೌಡ, ಜಂಟಿ ಆಯುಕ್ತ ಶ್ಯಾಂಭಟ್‌ ಹಾಗೂ ಅಯ್ಯಪ್ಪ ಅವರು ಹಾಜರಿದ್ದರು.

ಭ್ರಷ್ಟಾತಿಭ್ರಷ್ಟ ಇಲಾಖೆ ಆರ್‌.ಟಿ.ಓ : ಸಾರಿಗೆ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವುದು ಈಗ ಗುಟ್ಟಾಗೇನೂ ಉಳಿದಿಲ್ಲ. ಡ್ರೆೃವಿಂಗ್‌ ಲೈಸೆನ್ಸ್‌ ಮಾಡಿಸಲು ಪಟ್ಟಿರುವ ಪಾಡು ಅನುಭವಿಸಿದವರಿಗೇ ಗೊತ್ತು. ಎಷ್ಟೇ ಚೆನ್ನಾಗಿ ವಾಹನ ಓಡಿಸಲು ಬಂದರೂ ಲಂಚ ಕೊಡದೆ ಲೈಸೆನ್ಸ್‌ ಸಿಗಲ್ಲ ಅನ್ನುವ ತತ್ವ ಅರ್ಥವಾದ ಕೂಡಲೇ ಪರವಾನಗಿ ಕೈಗೆ ಸಿಕ್ಕಂತೆಯೇ.

ಆರ್‌ಟಿಓ ಗಳಲ್ಲಂತೂ ಎಲ್‌ಎಲ್‌ (ಲರ್ನಿಂಗ್‌ ಲೈಸೆನ್ಸ್‌)ಗೆ ಇಷ್ಟು, ಡಿ.ಎಲ್‌ (ಡ್ರೆೃವಿಂಗ್‌ ಲೈಸೆನ್ಸ್‌)ಗೆ ಇಷ್ಟು ಎಂಬ ಲಂಚದ ರೇಟೇ ಇದೆ. ಇದೆಲ್ಲಕ್ಕಿಂತ ಮಿಗಿಲಾಗಿ ಆರ್‌.ಟಿ.ಓ.ಗೆ ನೀವು ಹೋಗುತ್ತಿದ್ದಂತೆ ಜಿಗಣೆಗಳಂತೆ ಮುತ್ತುವ ಬ್ರೋಕರ್‌ಗಳೇ ಆರ್‌ಟಿಓ ಯಜಮಾನರಂತೆ ವರ್ತಿಸುವುದೂ ಉಂಟು.

ಈ ದಲ್ಲಾಳಿಗಳು ಆರ್‌ಟಿಓ ಅಧಿಕಾರಿಗಳಿಗಿಂತ ಹೆಚ್ಚು ಮೋಟಾರು ವಾಹನ ಕಾಯಿದೆಯನ್ನು ಅರೆದು ಕುಡಿದಿದ್ದಾರೆ. 6 ಫೋಟೋ, ಎಲ್‌.ಐ.ಸಿ. ಪಾಲಿಸಿ, ಪಡಿತರ ಚೀಟಿ, ರೆವಿನ್ಯೂ ಸ್ಟಾಂಪ್‌ ಎಂದು ದೊಡ್ಡ ಪಟ್ಟಿಯನ್ನೇ ನೀಡುವ ಅವರು, ಹಣ ಕೊಟ್ಟೊಡನೆಯೇ ವಾಹನ ಓಡಿಸಲು ಬರಲಿ, ಬಾರದಿರಲಿ ಲೈಸೆನ್ಸ್‌ ಕೊಡಿಸುವಷ್ಟು ಸಮರ್ಥರು.

ಆರ್‌.ಟಿ.ಓ. ಕಚೇರಿಯಲ್ಲಿನ ಬಹುರೂಪಿ ಭ್ರಷ್ಟಾಚಾರ ಮಾಧ್ಯಮಗಳಲ್ಲಿ ಇತ್ತೀಚೆಗೆ ದೊಡ್ಡ ಸುದ್ದಿಯೇ ಅಗಿತ್ತು. ಕೂಡಲೇ ಎಚ್ಚೆತ್ತ ಸಾರಿಗೆ ಸಚಿವರು ಸಾರಿಗೆ ಕಚೇರಿ ಆವರಣಕ್ಕೆ ಮಧ್ಯವರ್ತಿಗಳ ಪ್ರವೇಷ ನಿಷೇಧಿಸಲಾಗಿದೆ ಎಂದು ಬುಧವಾರ ಅಪ್ಪಣೆ ಕೊಡಿಸಿದ್ದಾರೆ. ಲೈಸೆನ್ಸ್‌ ನೀಡಿಕೆಯಲ್ಲಿ ವಿಳಂಬವಾದರೆ, ಲಂಚ ನೀಡುವ ಬದಲು ತಮಗಾಗಲೀ, ಸಾರಿಗೆ ಆಯುಕ್ತರಿಗಾಗಲೀ ಪತ್ರ ಬರೆಯಿರಿ ಎಂದೂ ಕೋರಿದ್ದಾರೆ. ಇನ್ನಾದರೂ ಆರ್‌.ಟಿ.ಓ.ದಲ್ಲಿ ಹಣ ತಿನ್ನುವ ಹೆಗ್ಗಣಗಳ ಕಾಟ ತಪ್ಪುತ್ತದೆಯೇ ನೋಡೋಣ!

(ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+