ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಾದ್ಯಂತ ಛಾಯಾಚಿತ್ರಗ್ರಾಹಕರು- ಉದ್ಯಮದ ಯಶಸ್ವಿ ಬಂದ್‌ !

By Staff
|
Google Oneindia Kannada News

ಬೆಂಗಳೂರು : ಛಾಯಾಗ್ರಾಹಕ ವೃತ್ತಿಗೆ ಮಾರಕವಾಗಿರುವ ಕೇಂದ್ರ ಸರ್ಕಾರದ ಶೇ.5 ಸೇವಾಶುಲ್ಕ ಹೇರಿಕೆಯನ್ನು ವಿರೋಧಿಸಿ ಕರ್ನಾಟಕ ರಾಜ್ಯ ಛಾಯಾಚಿತ್ರಗ್ರಾಹಕರ ಸಂಘ ಕರೆ ನೀಡಿದ್ದ ಬಂದ್‌ ಸಂಪೂರ್ಣ ಯಶಸ್ವಿಯಾಗಿದ್ದು , ಸಾವಿರಾರು ಛಾಯಾಚಿತ್ರಗ್ರಾಹಕರು ಬೆಂಗಳೂರಿನಲ್ಲಿ ಭಾರೀ ಪ್ರತಿಭಟನೆ ಮೆರವಣಿಗೆ ನಡೆಸಿದರು.

ಕಬ್ಬನ್‌ ರಸ್ತೆಯಿಂದ ಮುಖ್ಯಮಂತ್ರಿಗಳ ನಿವಾಸದವರೆಗೆ ನಡೆದ ಪ್ರತಿಭಟನೆ ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ತಮ್ಮ ಕ್ಯಾಮರಾಗಳೊಂದಿಗೆ ಬಂದಿದ್ದ ಸಾವಿರಾರು ಛಾಯಾಚಿತ್ರಗ್ರಾಹಕರು ಭಾಗವಹಿಸಿದ್ದರು. ಮೈಸೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯದ ಎಲ್ಲ ಪ್ರಮುಖ ನಗರ, ಪಟ್ಟಣ ಪ್ರದೇಶಗಳಲ್ಲಿ ಬಂದ್‌ಗೆ ಸಂಪೂರ್ಣ ಪ್ರತಿಕ್ರಿಯೆ ವ್ಯಕ್ತವಾಗಿತ್ತು . ಜೂನ್‌ 21 ರಂದು ಕರೆ ನೀಡಿದ್ದ ಅಖಿಲ ಭಾರತ ಛಾಯಾಚಿತ್ರ ರಂಗದ ಬಂದ್‌ಗೆ ಪೂರಕವಾಗಿ ರಾಜ್ಯದಲ್ಲೂ ಬಂದ್‌- ಪ್ರತಿಭಟನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು .

ಹೊಟ್ಟೆ ಮೇಲೆ ಬರೆ ಎಳೆಯುತ್ತಿರುವ ತೆರಿಗೆ ಪದ್ಧತಿ
ಕೇಂದ್ರ ಸರ್ಕಾರ ಹೇರಿರುವ ಶೇ. 5 ರ ಸೇವಾಶುಲ್ಕ ಹಾಗೂ ರಾಜ್ಯ ಸರ್ಕಾರ ಹೇರಿರುವ ಪ್ರತಿಶತ 17 ರ ತೆರಿಗೆಯನ್ನು ವಿರೋಧಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು . ಛಾಯಾಚಿತ್ರ ಉದ್ದಿಮೆಗೆ ಸಂಬಂಧಿಸಿದ ಎಲ್ಲಾ ಸ್ಟುಡಿಯೋಗಳ ಮಾಲಿಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿತರಕರು ಹಾಗೂ ವ್ಯಾಪಾರಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಫೋಟೋಗ್ರಫಿ ಉದ್ಯಮ ತೀರಾ ಸಂಕಷ್ಟದಲ್ಲಿದೆ ಎನ್ನುತ್ತಾರೆ ಉದ್ಯಮದ ಒಳ ಹೊರಗನ್ನು ಬಲ್ಲ ಮಂದಿ. ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ಪ್ರತಿನಿಧಿಗಳು ವಸ್ತು ಸ್ಥಿತಿಯನ್ನು ಬಿಚ್ಚಿಡುವುದು ಹೀಗೆ-

  • ರಾಜ್ಯದಲ್ಲಿ ಸುಮಾರು 5 ಲಕ್ಷ ಮಂದಿ ಫೋಟೋಗ್ರಫಿ ಉದ್ಯಮವನ್ನು ನಂಬಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಕೆಲವರು ನಾಲ್ಕೈದು ಸಾವಿರ ರುಪಾಯಿ ಮಾಸಿಕ ಆದಾಯ ಗಳಿಸುತ್ತಿದ್ದರೆ, ಅನೇಕರಿಗೆ ವ್ಯಾಪಾರವೇ ಇಲ್ಲ . ಇಂಥಹ ಪರಿಸ್ಥಿತಿಯಲ್ಲಿ ಸೇವಾ ಶುಲ್ಕವನ್ನು ನೀಡುವುದು ಹೇಗೆ ?
  • ಮಾರಾಟ ಶುಲ್ಕ ಇಲ್ಲದ ಕಡೆ ಸೇವಾ ಶುಲ್ಕವನ್ನು ಜಾರಿಗೆ ತರುವುದು ಸರಿ. ಆದರೆ- ಫೋಟೋ ಫಿಲ್ಮ್‌ , ಫೋಟೋ ಪೇಪರ್‌, ರಾಸಾಯನಿಕಗಳು ಸೇರಿದಂತೆ ಪ್ರತಿಯಾಂದಕ್ಕೂ ತೆರಿಗೆ ತೆರುತ್ತಿರುವ ಉದ್ಯಮ ಹೆಚ್ಚುವರಿಯಾಗಿ ಸೇವಾ ಶುಲ್ಕವನ್ನು ಭರಿಸುವುದು ಅಸಾಧ್ಯ.
  • ನೆರೆಯ ತಮಿಳುನಾಡಿಗೆ ಹೋಲಿಸಿದರೆ ಮಾರಾಟ ಶುಲ್ಕದಲ್ಲಿ ವ್ಯತ್ಯಾಸವಿದೆ. ತಮಿಳುನಾಡಿನಲ್ಲಿರುವ ತೆರಿಗೆ ಪದ್ಧತಿಯನ್ನೇ ರಾಜ್ಯದಲ್ಲೂ ಅನುಸರಿಸಬೇಕು.
  • ವಿದ್ಯುತ್‌ ಶುಲ್ಕ ಉದ್ಯಮಕ್ಕೆ ಹೊರೆಯಾಗಿ ಪರಿಣಮಿಸಿದೆ. ವಿದ್ಯುತ್‌ ಸರಬರಾಜು ಕೂಡ ಉತ್ತಮ ಮಟ್ಟದಲ್ಲಿಲ್ಲ . ಇಂಥ ಸಂದರ್ಭದಲ್ಲಿ ಯುಪಿಎಸ್‌, ಜನರೇಟರ್‌ಗಳನ್ನು ಬಳಸುವುದರಿಂದ ಪ್ರತಿ ಯೂನಿಟ್‌ ವಿದ್ಯುತ್‌ಗೆ 5.5 ರು. ವೆಚ್ಚವಾಗುವುದರಿಂದ, ಅದು ಕೂಡ ದುಬಾರಿಯೇ.
  • ಫೋಟೋಗ್ರಫಿಯನ್ನು ಒಂದು ಉದ್ಯಮವೆಂದು ರಾಜ್ಯ ಸರ್ಕಾರ ಪರಿಗಣಿಸಬೇಕು.
(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X