Get Updates
Get notified of breaking news, exclusive insights, and must-see stories!

ರಾಜ್‌ ಪ್ರಕರಣದ ಪುಸ್ತಕ : ದಿನಕರ್‌ಗೆ ಸರ್ಕಾರದ ನೋಟಿಸ್‌

C.Dinakar is writing a book on Dr Rajs releaseಬೆಂಗಳೂರು : ರಾಜ್‌ ಅಪಹರಣ ಪ್ರಕರಣದ ಬಗ್ಗೆ ಪುಸ್ತಕ ಬರೆಯುತ್ತಿರುವ ರಾಜ್ಯದ ಮಾಜಿ ಪೊಲೀಸ್‌ ಮಹಾ ನಿರ್ದೇಶಕ ಸಿ. ದಿನಕರ್‌ ಅವರಿಗೆ ರಾಜ್ಯ ಸರ್ಕಾರ ನೋಟಿಸ್‌ ನೀಡಿದ್ದು , ಅದನ್ನು ಕಡೆಗಣಿಸಿರುವುದಾಗಿ ದಿನಕರ್‌ ತಿಳಿಸಿದ್ದಾರೆ.

ದಿನಕರ್‌ ಬರೆಯುತ್ತಿರುವ ಪುಸ್ತಕ, ಕಾಡುಗಳ್ಳನಿಂದ ವರನಟ ರಾಜ್‌ಕುಮಾರ್‌ ಅಪಹರಣ ಹಾಗೂ ಬಿಡುಗಡೆ ಪ್ರಕರಣದ ಗೋಪ್ಯತೆ- ಸತ್ಯಾಸತ್ಯತೆಯನ್ನು ಜನರ ಮುಂದಿಡುತ್ತದೆ ಎಂದು ನಂಬಲಾಗಿದ್ದು , ಪುಸ್ತಕ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸುತ್ತದೆ ಎಂದು ಭಾವಿಸಲಾಗಿದೆ. ರಾಜ್‌ ಅಪಹರಣ ಪ್ರಕರಣದ ಬಗೆಗೆ ಸಾಕಷ್ಟು ವಿಷಯಗಳನ್ನು ಸರ್ಕಾರ ಮುಚ್ಚಿಟ್ಟಿದೆ ಎನ್ನುವ ವ್ಯಾಪಕ ಭಾವನೆ ಜನಮನದಲ್ಲಿರುವುದನ್ನು ಗಮನಿಸಬಹುದು.

ಪುರುಸೊತ್ತಿಲ್ಲ , ನನಗೆ ಇತರೆ ಕೆಲಸಗಳಿವೆ
ನನಗೆ ನನ್ನದೇ ಆದ ಕೆಲಸಗಳಿವೆ. ಬಹಳಷ್ಟು ಮಂದಿ ಪತ್ರ ಬರೆಯುತ್ತಾರೆ. ಅದನ್ನು ಗಂಭೀರವಾಗಿ ಪರಿಗಣಿಸಲಾಗಲೀ, ತಲೆ ಕೆಡಿಸಿಕೊಳ್ಳಲಾಗಲೀ ತಮಗೆ ಪುರುಸೊತ್ತಿಲ್ಲ ಎಂದು ರಾಜ್ಯ ಸರ್ಕಾರದ ನೋಟಿಸ್‌ಗೆ ದಿನಕರ್‌ ಪ್ರತಿಕ್ರಿಯಿಸಿದ್ದಾರೆ. ಸರ್ಕಾರದ ನೀತಿ- ನಿಯಮಗಳನ್ನು ಅಥವಾ ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಕೈಗೊಂಡ ಕ್ರಮವನ್ನು ಬಹಿರಂಗಪಡಿಸುವುದು ಅಧಿಕಾರಿಗಳ ರಹಸ್ಯ ಕಾಯ್ದೆಯನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ನೋಟಿಸ್‌ನಲ್ಲಿ ದಿನಕರ್‌ ಅವರನ್ನು ಎಚ್ಚರಿಸಲಾಗಿದೆ.

ಪುಸ್ತಕವನ್ನು ಪ್ರಕಟಿಸುವ ಮುನ್ನ ಅದನ್ನು ರಾಜ್ಯ ಸರ್ಕಾರದ ಗಮನಕ್ಕೆ ತರುವಂತೆಯೂ ನೋಟಿಸ್‌ ಸೂಚಿಸಿದೆ. ಆದರೆ, ನೋಟಿಸನ್ನು ಕಡೆಗಣಿಸುವುದಾಗಿ ಸ್ಪಷ್ಟಪಡಿಸಿರುವ ದಿನಕರ್‌- ಪುಸ್ತಕ ರಚನೆಯಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳುವುದಾಗಿ ಹೇಳಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+