Get Updates
Get notified of breaking news, exclusive insights, and must-see stories!

ಚಿತ್ರದುರ್ಗದ ಅಳಿದುಳಿದ ಕಲ್ಲಿನ ಕೋಟೆಯ ರಕ್ಷಣೆಗೆ ಸರ್ಕಾರ

ಚಿತ್ರದುರ್ಗ : ಪಟ್ಟಣದ ಚಿನ್ಮೂಲಾದ್ರಿ ಸುತ್ತಮುತ್ತಲಿನ ಸುಮಾರು 300 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಮೂರು ಶತಮಾನಗಳಿಗೂ ಹಳೆಯ ಕೋಟೆಯ ರಕ್ಷಣೆಗೆ ಸರಕಾರ ಮುಂದಾಗಿದೆ.

ನಾಯಕ ಪಾಳೇಗಾರರ ಆಡಳಿತಕ್ಕೊಳಪಟ್ಟಿದ್ದಾಗ ಇಲ್ಲಿ ಇನ್ನಷ್ಟು ಕೋಟೆಗಳನ್ನು ನಿರ್ಮಿಸಲಾಗಿತ್ತು. ಆದರೆ ಆ ಅವಶೇಷಗಳು ಅನಾಥವಾಗಿರುವುದನ್ನು ಗಮನಿಸಿದ ಕೆಲವರು ಅಲ್ಲಿ ತಮ್ಮ ಉದ್ಯಮದ ಮಳಿಗೆಗಳನ್ನು, ಮನೆಗಳನ್ನು ಕಟ್ಟಲು ಮುಂದಾಗಿರುವುದನ್ನು ಪ್ರಸ್ತುತ ಜಿಲ್ಲಾಡಳಿತ ಗಮನಿಸಿದೆ.

ಚಿತ್ರದುರ್ಗದ ಜಿಲ್ಲಾಧಿಕಾರಿ ಎಸ್‌.ಜಿ. ಹೆಗಡೆ ಪುರಾತತ್ವ ವಿಭಾಗದ ಜೊತೆಗೆ ಮಾತುಕತೆ ನಡೆಸಿ ಕೋಟೆಗಳ ಅಳಿದುಳಿದ ಭಾಗಗಳನ್ನು ರಕ್ಷಿಸಲು ನಿರ್ಧರಿಸಿದೆ. ಈ ಪ್ರದೇಶವನ್ನು ಆಕ್ರಮಿಸುವವರ ಕುರಿತು ಮತ್ತು ಕೋಟೆ ಪ್ರದೇಶದ ರಕ್ಷಣೆಯ ಕುರಿತು ತಕ್ಷಣವೇ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ತಹಸೀಲ್ದಾರರಿಗೆ ಆದೇಶಿಸಲಾಗಿದೆ.

ಭಾರತೀಯ ಪ್ರವಾಸ ನಕ್ಷೆಯಲ್ಲಿ ಚಿತ್ರದುರ್ಗದ ಕೋಟೆಯ ಹೆಸರಿದ್ದು, ಬೆಂಗಳೂರು ಮೂಲಕ ಹಂಪೆಗೆ ಹೋಗುವ ವಿದೇಶೀ ಪ್ರವಾಸಿಗಳು ಹೆಚ್ಚಾಗಿ ಮಾರ್ಗಮಧ್ಯದಲ್ಲಿ ತಂಗುವ ಪ್ರದೇಶ ಇದಾಗಿದೆ. ಐತಿಹಾಸಿಕ ಕೋಟೆಯಲ್ಲದೆ ಬೃಹನ್ಮಠ ಚಂದ್ರವಲ್ಲಿ ಮುರುಘಾಮಠ ಮತ್ತು ಅಶೋಕ ಸಿದ್ದಾಪುರದಲ್ಲಿರುವ ರಾಜಾ ಅಶೋಕನ ಶಾಸನ ಕೂಡ ಪ್ರವಾಸಿಗರನ್ನು ಆಕರ್ಷಿಸಲಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+