Get Updates
Get notified of breaking news, exclusive insights, and must-see stories!

‘ಮುಂಬಯಿ- ಬಾಂಬೆ ಡೈಯಿಂಗ್‌’ ಶತಮಾನದ ಸಂಬಂಧ ಇನ್ನೆಷ್ಟು ದಿನ?

ಮುಂಬಯಿ : ಮಹಾನಗರ ಹಾಗೂ ಬಾಂಬೆ ಡೈಯಿಂಗ್‌ ಸಂಸ್ಥೆ ನಡುವಣ ಶತಮಾನದ ಸಂಬಂಧ ಸದ್ಯದಲ್ಲಿಯೇ ಕೊನೆಯಾಗಲಿದೆಯೇ ? ಪ್ರಸ್ತುತದ ವರದಿಗಳು ಮುಂಬಯಿಯ ನಂಟನ್ನು ಬಾಂಬೆ ಡೈಯಿಂಗ್‌ ಕಳಚಿಕೊಳ್ಳುವ ದಿನ ದೂರವಿಲ್ಲ ಎನ್ನುತ್ತವೆ.

ತನ್ನ ಘಟಕ, ನೌಕರರು ಎಲ್ಲವನ್ನೂ ಮುಂಬಯಿಯಿಂದ ಇತರ ಯಾವುದಾದರೂ ಸ್ಥಳಕ್ಕೆ ಸ್ಥಳಾಂತರಿಸಲು ಬಾಂಬೆ ಡೈಯಿಂಗ್‌ ಆಡಳಿತಾಧಿಕಾರಿಗಳು ಚಿಂತಿಸುತ್ತಿದ್ದು , ಈ ಯೋಜನೆ ಕಾರ್ಯಗತವಾದಲ್ಲಿ ಶತಮಾನದ ನಂಟು ಇತಿಹಾಸಕ್ಕೆ ಸಲ್ಲುವುದರಲ್ಲಿ ಅನುಮಾನವಿಲ್ಲ . ಪ್ರಸ್ತುತ ಬಾಂಬೆ ಡೈಯಿಂಗ್‌ಗೆ ಹೊಸ ಸ್ಥಳವನ್ನು ಹುಡುಕುವಲ್ಲಿ ಸಂಸ್ಥೆಯ ಅಧಿಕಾರಿಗಳು ವ್ಯಸ್ತರಾಗಿದ್ದಾರಂತೆ. ಸಮಾಧಾನದ ಸಂಗತಿಯೆಂದರೆ ಹೊಸ ಸ್ಥಳದ ಅನ್ವೇಷಣೆ ಮಹಾರಾಷ್ಟ್ರದಲ್ಲೇ ನಡೆದಿದೆ.

ತಾನು ನಡೆಸುತ್ತಿರುವ ಉದ್ದಿಮೆಗೆ ಮುಂಬಯಿಯಲ್ಲಿ ಭವಿಷ್ಯವಿಲ್ಲ ಎನ್ನುವ ಅನುಮಾನದಿಂದ ಸ್ಥಳ ಬದಲಿಸಲು ಸಂಸ್ಥೆ ಮುಂದಾಗಿದೆ. ಅಲ್ಲದೆ ನೌಕರರ ಸಂಖ್ಯೆಯನ್ನು ಸ್ವಯಂ ನಿವೃತ್ತಿ ಯೋಜನೆಯ ಮೂಲಕ ಪ್ರತಿಶತ 50 ರಷ್ಟು ಇಳಿಸಲು ಸಂಸ್ಥೆ ನಿರ್ಧರಿಸಿದೆ.

ವಾಡಿಯಾ ಸಮೂಹ ಸಂಸ್ಥೆಗಳಲ್ಲಿ ಎದ್ದು ಕಾಣುವ ಹೆಸರು ಬಾಂಬೆ ಡೈಯಿಂಗ್‌. 1879 ರಲ್ಲಿ ಮುಂಬಯಿಯ ವಡಾಲಾದಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭವಾದ ಸಂಸ್ಥೆ 1960 ರ ವೇಳೆಗೆ ಬಾಂಬೆ ಡೈಯಿಂಗ್‌ ಎನ್ನುವ ಹೆಸರಲ್ಲಿ ಬೃಹತ್ತಾಗಿ ಬೆಳೆಯಿತು. ಆದರೆ, 1990 ರ ವೇಳೆಗೆ ದೇಶದ ಜವಳಿ ಉದ್ಯಮದಲ್ಲಿ ಬೀಸಿದ ಬಿಸಿಗಾಳಿ ಬಾಂಬೆ ಡೈಯಿಂಗ್‌ ಪ್ರಾಬಲ್ಯವನ್ನು ಸಾಕಷ್ಟು ತಗ್ಗಿಸಿತ್ತು .

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+