Get Updates
Get notified of breaking news, exclusive insights, and must-see stories!

80ಕ್ಕೆ ಕಾಲಿಟ್ಟ ಇಂಗ್ಲಿಷ್‌ ಮೇಷ್ಟ್ರು ಸಿಡಿ ನರಸಿಂಹಯ್ಯರಿಗೆ ಸನ್ಮಾನ

ಮೈಸೂರು : ಧ್ವನ್ಯಾಲೋಕದ ನಿರ್ದೇಶಕ ಹಾಗೂ ಪ್ರಸಿದ್ಧ ಆಂಗ್ಲ ಸಾಹಿತ್ಯ ವಿಮರ್ಶಕ ಪ್ರೊ. ಸಿ.ಡಿ. ನರಸಿಂಹಯ್ಯ ಅವರು ಸೋಮವಾರ 80ನೇ ವಯಸ್ಸಿಗೆ ಕಾಲಿಟ್ಟರು.

ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಇಂಗ್ಲಿಷ್‌ ಮೇಷ್ಟ್ರಿಗೆ ಅವರ ಶಿಷ್ಯ ಸಮೂಹದವರು ಮತ್ತು ಸ್ನೇಹಿತವರ್ಗದವರೆಲ್ಲ ಸೇರಿ ಸೋಮವಾರ ಸನ್ಮಾನ ಸಮಾರಂಭ ಇಟ್ಟುಕೊಂಡಿದ್ದರು. ಈ ಸಂದರ್ಭದಲ್ಲಿ ನರಸಿಂಹಯ್ಯ ಅವರನ್ನು ಭಾರತೀಯ ಸಾಹಿತ್ಯದ ಗುರು ಎಂದು ಬಣ್ಣಿಸಿದವರು ಸಮಾರಂಭಕ್ಕೆ ಆಗಮಿಸಿದ ನ್ಯಾಯಮೂರ್ತಿ ರಾಜೇಂದ್ರ ಬಾಬು. ಯಾಕೆಂದರೆ ಸಿಡಿಎನ್‌ ಅವರು ಜೀವನ ಪರ್ಯಂತ ಇಂಗ್ಲಿಷ್‌ ಸಾಹಿತ್ಯ ಸೇವೆಗೆ ಅದರಲ್ಲಿಯೂ ವಿಮರ್ಶಾ ಕ್ಷೇತ್ರದಲ್ಲಿ ದುಡಿಯಲು ಬದ್ಧರಾದವರು ಎಂದು ರಾಜೇಂದ್ರ ಬಾಬು ವಿವರಿಸಿದರು.

ಸಿಡಿಎನ್‌ ಅವರನ್ನು ಅಭಿನಂದಿಸಿದ ಫ್ರಂಟ್‌ಲೈನ್‌ ಆಂಗ್ಲ ಪತ್ರಿಕೆಯ ಸಂಪಾದಕ ಎನ್‌. ರಾಮ್‌ ಅವರು ಭಾರತೀಯ ಆಂಗ್ಲ ಸಾಹಿತ್ಯವನ್ನು ಅಧ್ಯಯನ ಮಾಡಿದ ಯಾವುದೇ ವಿದ್ಯಾರ್ಥಿ ಸಿಡಿಎನ್‌ ಅವರ ವಿಮರ್ಶೆಗಳನ್ನು ಓದದೇ ಇರಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟರು. ಈ ಸಂದರ್ಭದಲ್ಲಿ ಅವರು ಸಿ.ಡಿ. ಎನ್‌. ಅವರ ಗೌರವಾರ್ಥ ಸಂಪಾದಿಸಿದ ‘ಥಿಯರಿ ಆಫ್‌ ಪ್ರಾಕ್ಟೀಸ್‌’ ಪ್ರಬಂಧ ಸಂಕಲನವನ್ನು ನರಸಿಂಹಯ್ಯ ಅವರಿಗೆ ನೀಡಿ ಗೌರವಿಸಿದರು.

ಸಿಡಿಎನ್‌ ಅವರ ವಿಶಾಲ ವ್ಯಕ್ತಿತ್ವದಡಿಯಲ್ಲಿ ಬೆಳೆದ, ಅವರನ್ನು ಹತ್ತಿರದಿಂದ ಬಲ್ಲ ಲೇಖಕರು, ಸ್ನೇಹಿತರು, ಶಿಷ್ಯಂದಿರು ತಾವು ಕಂಡಂತೆ ಇಂಗ್ಲಿಷ್‌ ಮೇಷ್ಟ್ರನ್ನು ಥಿಯರಿ ಆ್ಯಂಡ್‌ ಪ್ರಾಕ್ಟೀಸ್‌ ಪುಸ್ತಕದಲ್ಲಿ ಚಿತ್ರಿಸಿದ್ದಾರೆ. ಮೇಷ್ಟ್ರು ಶಿಷ್ಯ ವರ್ಗಕ್ಕೆ ನೀಡಿದ ಮಾರ್ಗದರ್ಶನ, ಅವರು ಜೀವನದ ಮೇಲೆ ಬೀರಿದ ಪ್ರಭಾವಗಳ ಬಗ್ಗೆ ಈ ಪುಸ್ತಕ ಬೆಳಕು ಚೆಲ್ಲುತ್ತದೆ.

ಮಿತ್ರರ ಹಾಗೂ ಶಿಷ್ಯವೃಂದದ ಪ್ರೀತಿಯ ಶುಭಾಶಯಗಳಿಗೆ ಉತ್ತರಿಸಿದ ನರಸಿಂಹಯ್ಯರು , ತಾವೇನೂ ಪ್ರಮುಖ ಸಾಧನೆಗಳನ್ನು ಮಾಡಿಲ್ಲ. ಆದರೆ ಅಧ್ಯಾಪನ ವೃತ್ತಿಯನ್ನು ಉತ್ಸಾಹದಿಂದ, ಕಾಳಜಿಯಿಂದ ಮಾಡಿದ ತೃಪ್ತಿ ತಮಗಿದೆ ಎಂದು ಹೇಳಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+