ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಯುಕ್ತ ಪದವಿ ಕಾಲೇಜುಗಳಿಂದ ಪಿಯು ಕಾಲೇಜುಗಳ ವಿಭಜನೆ

By Staff
|
Google Oneindia Kannada News

ಬೆಂಗಳೂರು : ಅನುದಾನಿತ ಖಾಸಗಿ ಪದವಿ ಕಾಲೇಜುಗಳಿಂದ ಪಿಯು ಕಾಲೇಜುಗಳನ್ನು ಪ್ರತ್ಯೇಕಿಸುವುದು ಹಾಗೂ ಕಡಿಮೆ ವಿದ್ಯಾರ್ಥಿಗಳಿರುವ ಸಂಜೆ ಕಾಲೇಜುಗಳನ್ನು ಮುಚ್ಚುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಈ ಆದೇಶ ಜಾರಿಗೆ ಬರಲಿದೆ.

ಸಂಯುಕ್ತ ಕಾಲೇಜುಗಳಿಂದ ಪದವಿ ಪೂರ್ವ ಕಾಲೇಜುಗಳನ್ನು ಪ್ರತ್ಯೇಕಿಸಲಾಗುವುದು. ನಂತರ, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಪದವಿ ಪೂರ್ವ ಸಂಜೆ ಕಾಲೇಜುಗಳನ್ನು ಮುಚ್ಚಲಾಗುವುದು. ಮುಚ್ಚಲಾಗುವ ಕಾಲೇಜುಗಳ ಸಿಬ್ಬಂದಿಯನ್ನು ಕಾರ್ಯಭಾರ ಹೆಚ್ಚಾಗಿರುವ ಸ್ಥಳಗಳಿಗೆ ನಿಯೋಜಿಸಲು ಕಾಲೇಜು ಶಿಕ್ಷಣ ಕ್ರಮ ಕೈಗೊಳ್ಳಲಿದೆ. ಸರ್ಕಾರದ ಆದೇಶ ಹೊರಬಿದ್ದ 2 ತಿಂಗಳ ನಂತರ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ.

ಪ್ರತ್ಯೇಕತೆ ನಂತರ ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳ ಆಡಳಿತಗಳೂ ಸ್ವತಂತ್ರವಾಗಲಿವೆ. ಪ್ರಾಧ್ಯಾಪಕರು ಮತ್ತಿತರ ಸಿಬ್ಬಂದಿಯನ್ನು ಜೇಷ್ಠತೆಯ ಆಧಾರದ ಮೇಲೆ ಪದವಿ ಕಾಲೇಜುಗಳಿಗೆ ನಿಯೋಜಿಸಲಾಗುವುದು. ಉಳಿದವರು ಪದವಿ ಪೂರ್ವ ಕಾಲೇಜುಗಳಲ್ಲೇ ಕಾರ್ಯ ನಿರ್ವಹಿಸಲಿದ್ದಾರೆ. ಯುಜಿಸಿ ಮಾರ್ಗದರ್ಶಿಯನ್ವಯವೇ ವಿಭಜಿತ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳ ಕಾರ್ಯಗಳು ನಡೆಯಲಿವೆ.

ಪ್ರತ್ಯೇಕತೆಯ ನಂತರ ಪದವಿ (ಕಲೆ, ವಿಜ್ಞಾನ ಹಾಗೂ ವಾಣಿಜ್ಯ) ಕಾಲೇಜುಗಳಲ್ಲಿ ಮೂರೂ ವರ್ಷದ ತರಗತಿಗಳಿಂದ ಕನಿಷ್ಠ 120 ವಿದ್ಯಾರ್ಥಿಗಳು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಎರಡು ವರ್ಷದ ತರಗತಿಗಳಿಂದ ಕನಿಷ್ಠ 80 ವಿದ್ಯಾರ್ಥಿಗಳಿರಬೇಕು. ಇದಕ್ಕಿಂತ ಕಡಿಮೆ ಇರುವ ಕಾಲೇಜುಗಳನ್ನು ಮುಚ್ಚಿ, ವಿದ್ಯಾರ್ಥಿಗಳನ್ನು ಸಮೀಪದ ಕಾಲೇಜುಗಳಿಗೆ ವರ್ಗಾಯಿಸಲಾಗುವುದು. ಸಿಬ್ಬಂದಿಯನ್ನು ಕಾರ್ಯಭಾರ ಹೆಚ್ಚಿರುವ ಕಾರ್ಯಗಳಿಗೆ ಸ್ಥಳಾಂತರಿಸಲಾಗುವುದು.

ವಿರೋಧ : ನಗರದಲ್ಲಿ ಈಗಾಗಲೇ 20 ಸಂಯುಕ್ತ ಪದವಿ ಕಾಲೇಜುಗಳಿಂದ ಪದವಿ ಪೂರ್ವ ಕಾಲೇಜುಗಳನ್ನು ಪ್ರತ್ಯೇಕಿಸಲಾಗಿದೆ. ರಾಜ್ಯದಲ್ಲಿ ಒಟ್ಟು 164 ಸಂಯುಕ್ತ ಪದವಿ ಕಾಲೇಜುಗಳಿಂದ ಪಿಯು- ಕಾಲೇಜುಗಳನ್ನು ಪ್ರತ್ಯೇಕಿಸುವ ನಿರೀಕ್ಷೆಯಿದೆ. ಸರ್ಕಾರದ ಈ ಹೆಜ್ಜೆಯನ್ನು ಕರ್ನಾಟಕ ವಿವಿ ಮತ್ತು ಕಾಲೇಜು ಶಿಕ್ಷಕರ ಸಂಘಗಳ ಒಕ್ಕೂಟ ಟೀಕಿಸಿದ್ದು, ಈ ಬಗ್ಗೆ ಚರ್ಚಿಸಲು ಮೇ 18ರಂದು ಸಭೆ ಸೇರಲಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X