• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಿನ್ನಿಸ್‌ ಪುಸ್ತಕಕ್ಕೆ ಕೊಡಗಿನ ವೀರರು

By Staff
|

*ಮೋಹನ್‌ಬಾಬು

ಅಮ್ಮಾತಿ : ಪ್ರತಿಯಾಬ್ಬ ಕೊಡವ ಹುಟ್ಟುವಾಗಲೇ ಒಂದು ಕೈಯಲ್ಲಿ ಕೋವಿ, ಇನ್ನೊಂದು ಕೈಯಲ್ಲಿ ಹಾಕಿ ದಂಡ ಹಿಡಿದಿರುತ್ತಾನೆ ! ಮಂಜಿನ ಹಾಸಿನ ಸುಂದರ ತಾಣ , ಪಶ್ಚಿಮ ಘಟ್ಟಗಳಲ್ಲಿರುವ ಕೊಡಗಿನ ಜನಜನಿತ ಮಾತಿದು.

ಕೊಡವರು ಕಾಫಿ ಬೆಳೆಯುತ್ತಾರೆ. ಇದರಲ್ಲಿ ಅಷ್ಟೇನೂ ಬಿಜಿಯಾಗಿಲ್ಲ ಅಂತ ಅಂದರೆ ,ಒಂದೋ ದೇಶ ರಕ್ಷಣೆಗಾಗಿ ಯಾವುದೋ ಮೂಲೆಯಲ್ಲಿ ಯೋಧನಾಗಿ ನಿಂತಿರುತ್ತಾರೆ, ಇಲ್ಲವೇ ದೇಶಕ್ಕಾಗಿ ಹಾಕಿ ಆಡುತ್ತಾರೆ. ಜನರಲ್‌ ಕೆ.ಎಂ.ಕಾರ್ಯಪ್ಪನಂಥವರನ್ನು ನಾವು ದೇಶಕ್ಕೆ ಕೊಟ್ಟಿದ್ದೇವೆ ಎಂದು ಹೆಮ್ಮೆಯಿಂದ ಬೀಗುತ್ತಾರೆ. ದೇಶಕ್ಕಾಗಿ ನಮ್ಮೂರಿನ ಎಷ್ಟು ಹುಡುಗರು ಹಾಕಿ ಆಡಿಲ್ಲ ಹೇಳಿ ಎಂದು ಎದೆತಟ್ಟಿಕೊಂಡು ಪ್ರಶ್ನೆ ಹಾಕುತ್ತಾರೆ.

ಕೊಡಗಿನ ಪ್ರತಿಯಾಂದು ಕುಟುಂಬದ ಯಾರೊಬ್ಬರಾದರೂ ಯೋಧರಾಗಿ ಸೇವೆ ಸಲ್ಲಿಸಿರುತ್ತಾರೆ, ಇಲ್ಲವೇ ಸಲ್ಲಿಸುತ್ತಿದ್ದಾರೆ. ಮಕ್ಕಳ ಗೀಳು ಸಹಜವಾಗಿಯೇ ಹಾಕಿ ಆಟದತ್ತ. ಮೊನ್ನೆ-ಯ-ಷ್ಟೇ ಸ್ಕೇಟಿಂಗ್‌ ಇಲ್ಲಿ-ಗೆ ಕಾಲಿ-ಟ್ಟಿ-ದೆ-ಯೆ-ನ್ನು-ವು-ದು ಸುದ್ದಿ.

ಕೊಡವರನ್ನೆಲ್ಲಾ ಒಂದೆಡೆ ಸೇರಿಸಿ, ಹಾಕಿ ಆಟದ ಒಲವು ಹೆಚ್ಚಿಸುವ ಉದ್ದಿಶ್ಯದಿಂದ 5 ವರ್ಷಗಳ ಹಿಂದೆ ಶುರುವಾದ ಹಾಕಿ ಟೂರ್ನಿ ಇವತ್ತು ಕೊಡವರನ್ನು ವಿಶ್ವ ದಾಖಲೆಯ ಹೊತ್ತಗೆ- ‘ಗಿನ್ನಿಸ್‌ ಬುಕ್‌’ನ ಪುಟಗಳಲ್ಲಿ ಸೇರಿಸಲಿದೆ.

ಕೊಡಗು ಮಾಡಿದ ಗಿನ್ನಿಸ್‌ ಸೇರುವಂಥಾ ದಾಖಲೆಯಾದರೂ ಏನು?

ಕುಟ್ಟಣ್ಣಿಯವರಿಗೆ ಧನ್ಯವಾದಗಳು : ಕೊಡವರ ನೆಚ್ಚಿನ ಕುಟ್ಟಣ್ಣಿ, ಪಾದಂಡ ಎಂ. ಕುಟ್ಟಪ್ಪನವರ ಮನಸ್ಸಲ್ಲಿ ಇದ್ದಕ್ಕಿದ್ದಂತೆ ವರ್ಷಕ್ಕೊಮ್ಮೆಯಾದರೂ ಕೊಡವ ಕುಟುಂಬಗಳನ್ನು ಒಟ್ಟು ಸೇರಿಸಬೇಕು ಎಂಬ ವಿಚಾರ ಹೊಳೆಯಿತು. 1997ರಲ್ಲಿ ಕಾರಡದಲ್ಲಿ ಹಾಕಿ ಟೂರ್ನಿ ಶುರುಮಾಡಿದರು. 60 ತಂಡಗಳು ಪೋಟಿಗೆ ಬಿದ್ದವು. ಮರು ವರ್ಷ ಕಾಡಂಗದಲ್ಲಿ ಆಯೋಜಿಸಿದ ಇದೇ ಟೂರ್ನಿಗೆ 116 ತಂಡಗಳು ಬಂದವು. 3ನೇ ವರ್ಷ ಕಾಕೋಟುವಿನಲ್ಲಿ 140 ತಂಡಗಳು ಸೇರಿದವು. ಕಳೆದ ವರ್ಷ ಪೊನ್ನಂಪೇಟ್‌ನಲ್ಲಿ 170 ತಂಡಗಳು ಸ್ಪರ್ಧಾ ಕಣದಲ್ಲಿದ್ದವು. ಈ ವರ್ಷ ಟೂರ್ನಿಗೆ ಬಂದದ್ದು 226 ತಂಡಗಳು !

1003 ಗೋಲುಗಳು : ಏಪ್ರಿಲ್‌ 20ರಿಂದ ಮೇ 13ರವರೆಗೆ ಹೊಸದಾಗಿ ಸಿದ್ಧಪಡಿಸಿದ ಎರಡು ಮೈದಾನಗಳಲ್ಲಿ 225 ಪಂದ್ಯಗಳು ನಡೆದವು. ಈ ಸೆಣಸಾಟ ನಡೆದದ್ದು ನೈಕಿ- ನೆಲ್ಲಮಕ್ಕಡ ಕಪ್‌ಗಾಗಿ. ಇಡೀ ಟೂರ್ನಿಯಲ್ಲಿ ಹೊಡೆದ ಗೋಲುಗಳೆಷ್ಟು ಗೊತ್ತೆ? ಬರೋಬ್ಬರಿ 1003!

ಕುಟುಂಬವೊಂದರಿಂದ ಒಬ್ಬ ಹಾಕಿ ಪಟು. ಬಲಾಬಲದ ಸೆಣಸು. ಜನರೊಟ್ಟಿಗೆ ಬೆರೆಯುವುದರ ಜೊತೆಗೆ ಈ ಟೂರ್ನಿ ಪ್ರತಿಷ್ಠೆಯ ಪ್ರತೀಕವೂ ಹೌದು. ಕೂತಾಂಡ ಹಾಗೂ ಚಪ್ಪುಡಿರಾ ತಂಡಗಳ ನಡುವಣ ಫೈನಲ್ಸ್‌ ನೋಡಲು 25 ಸಾವಿರ ಜನ ನೆರೆದಿದ್ದರು. ಕೂತಾಂಡ ತಂಡ 3-1ರಿಂದ ಗೆದ್ದಿತು.

5 ಸಾವಿರ ಜನ ವಾಪಸ್ಸಾದರು : ಈ ಪಂದ್ಯಕ್ಕೆ ಅಕ್ಷರಶಃ ಅಂತರರಾಷ್ಟ್ರೀಯ ಕ್ರಿಕೆಟ್ಟಿನ ಮೆರುಗಿತ್ತು. ಜನರಿಗೆ ಮಿಸುಕಾಡಲೂ ಅವಕಾಶ ಇರದಂತೆ ಕ್ರೀಡಾಂಗಣ ಖಚಾಖಚಿ ತುಂಬಿತ್ತು. ಮರದ ಟೊಂಗೆಗಳು, ಅಕ್ಕ- ಪಕ್ಕದ ಕಟ್ಟಡಗಳ ಮೇಲೂ ಪ್ರೇಕ್ಷಕರು ಕುಂತು, ನಿಂತು, ನೇತಾಡಿ ಆಟ ವೀಕ್ಷಿಸಿದರು. ಆಯೋಜಕರು ಹೇಳುವಂತೆ, 5 ಸಾವಿರ ಜನ ಕ್ರೀಡಾಂಗಣದೊಳಕ್ಕೆ ಬರಲಾರದೆ ಬಂದ ದಾರಿಗೆ ಸುಂಕವಿಲ್ಲ ಎಂದು ಕಾಲಿಗೆ ಬುದ್ಧಿ ಹೇಳಿದ್ದಾರೆ.

ಫೈನಲ್ಸ್‌ ಅಷ್ಟೇ ಅಲ್ಲ. ಪೂರ್ವ ಸುತ್ತಿನ 12 ಪಂದ್ಯಗಳಿಗೆ 15 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಬಂದಿದ್ದರು.

ಚಿಗುರು- ಬೇರುಗಳ ಸಂಗಮ : ಈ ಹಾಕಿ ಟೂರ್ನಿ ಎಲ್ಲಾ ತರಹದಲ್ಲಿಯೂ ಹೊಸತರ ಸಂಗಮ. ಗಂಡು, ಹೆಣ್ಣು, ಮಕ್ಕಳು, ಅಜ್ಜಂದಿರು, ಅಜ್ಜಿಯರು ಎಲ್ಲರ ಕೈಲೂ ಹಾಕಿ ಬ್ಯಾಟು. 6 ವರ್ಷದ ಮಕ್ಕಳಿಂದ 79 ವರ್ಷದ ಹರೆಯದವರವರೆಗೆ ಎಲ್ಲರೂ ಹಾಕಿ ಆಡಲು ಅರ್ಹರು ! 27 ಹೆಂಗಸರು (ಹಾಗೂ ಹೆಣ್ಣು ಮಕ್ಕಳು) ಟೂರ್ನಿಯಲ್ಲಿ ಗಂಡಸರ ಭುಜಕ್ಕೆ ಭುಜ ತಾಕಿಸಿ, ಸೆಣಸಿದರು. ಸುಮ್ಮನೆ ಕಾಟಚಾರದ ಆಟವಲ್ಲ ಅದು. ಎಲ್ಲರೂ ಬೆವರು ಹರಿಸಿದರು. ಆಟ ಚೆನ್ನಾಗಿ ಆಡದಿದ್ದರೆ ತಮ್ಮ ಕುಟುಂಬದ ಮರ್ಯಾದೆ ಏನಾದೀತು ಎಂಬ ಪರಿಜ್ಞಾನ ಎಲ್ಲರಲ್ಲಿ.

ಹಾಕಿ ಟೂರ್ನಿ ನಮ್ಮಲ್ಲಿ ದಿನೇದಿನೇ ಜನಪ್ರಿಯವಾಗುತ್ತಿದೆ. ಕೊಡಗಿನಲ್ಲಿ ಗುರ್ತಿಸಿಕೊಂಡಿರುವ 856 ಕೊಡವ ಕುಟುಂಬಗಳಿವೆ. ವರ್ಷದಿಂದ ವರ್ಷಕ್ಕೆ ಹಾಕಿ ಆಡಲು ಮುಂದೆ ಬರುತ್ತಿರುವ ಹೊಸ ಕುಟುಂಬಗಳ ಸಂಖ್ಯೆ ಹೆಚ್ಚುತ್ತಿದೆ. 2010ರವರೆಗೆ ಈ ಟೂರ್ನಿ ಆಯೋಜಿಸಲು ಈಗಲೇ ರೂಪುರೇಷೆ ಸಿದ್ಧಪಡಿಸಲಾಗಿದೆ. ಆದರೆ ಕಾಫಿ ಬೆಳೆ ಉದ್ದಿಮೆ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವುದು ದುರದೃಷ್ಟಕರ ಎನ್ನುತ್ತಾರೆ ಟೂರ್ನಿಯ ಅಧ್ಯಕ್ಷ ಎನ್‌.ಟಿ.ಗಣಪತಿ.

ನಾವು ಇತಿಹಾಸ ನಿರ್ಮಿಸಿದೆವು. ಗಿನ್ನಿಸ್‌ ಬುಕ್‌ ಸೇರುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ನಾನು ಹಾಗೂ ನನ್ನ ಕುಟುಂಬದವರು ಒಂದು ವರ್ಷ ಕಾಲ ಟೂರ್ನಿ ಆಯೋಜಿಸಲು ಪ್ರಯತ್ನ ಪಟ್ಟಿದ್ದೇವೆ. ಪಂದ್ಯಗಳ ಪಟ್ಟಿ ಕೆಲಸಕ್ಕೇ 36 ತಾಸು ಹಿಡಿಯಿತು ಎನ್ನುತ್ತಾರೆ ಟೂರ್ನಿಯ ಚೇರ್‌ಮನ್‌, ನಲ್ಲಮಕ್ಕಡ ಕುಟುಂಬದ ಎನ್‌.ಯು.ಮೋಹನ್‌ ಅಯ್ಯಪ್ಪ. ಅಂದಹಾಗೆ, ಮೋಹನ್‌ ಅಯ್ಯಪ್ಪ ಕರ್ನಾಟಕ ಹಾಕಿ ತಂಡದ ಮಾಜಿ ಆಟಗಾರ. ಇಂಥಾ ಹಲವರ ಶ್ರಮ ಇವತ್ತು ಕೊಡಗಿಗೆ ಜಾಗತಿಕ ಮಟ್ಟದಲ್ಲಿ ಸ್ಥಾನ- ಮಾನ ತಂದಿತ್ತಿದೆ.

(ಯುಎನ್‌ಐ)

ವಾರ್ತಾ ಸಂಚಯ

ಮುಖಪುಟ / ಲೋಕೋಭಿನ್ನರುಚಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more