Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ :ಇದ್ದ ಜಾಗದಲ್ಲಿಯೇ ಇರುವುದು ನಿಮ್ಮ ಜಾಯಮಾನಕ್ಕೆ ಒಪ್ಪುವುದಲ್ಲ. ಆದ್ದರಿಂದ ಸದ್ಯಕ್ಕೆ ದೂರದೂರಿಗೆ ಪ್ರವಾಸ ಅರೇಂಜ್‌ ಮಾಡಲು ಒಳ್ಳೇ ಸಮಯ.

ವೃಷಭ : ಜಗತ್ತಿನಲ್ಲಿ ಏನು ಬೇಕಿದ್ದರೂ ಘಟಿಸಬಹುದು ಎಂಬುದು ಮನವರಿಕೆಯಾದಾಗ ಖಾಲಿ ಎನಿಸುತ್ತದೆ. ಆದರೆ ಕಚೇರಿಯಲ್ಲಿ ಮೈ ತುಂಬಾ ಕೆಲಸ ಇರುವುದರಿಂದ ಬೇಜಾರು ಕ್ಷಣದಲ್ಲಿ ದೂರಾಗುತ್ತದೆ.

ಮಿಥುನ : ಲಕ್‌ ಆಗಲೀ ಪರಿಶ್ರಮವಾಗಲೀ ಕೆಲವು ವಿಷಯಗಳನ್ನು ಬದಲಾಯಿಸುವುದು ಸಾಧ್ಯವಿಲ್ಲ. ಇವತ್ತು ಬಿಡುವಿನ ವೇಳೆ ಹೆಚ್ಚಾಗಿರುತ್ತದೆ.

ಕಟಕ : ಸಂಜೆ ಹೊತ್ತಿಗೆ ನಿಮ್ಮ ಆತ್ಮಿಯ ಸ್ನೇಹಿತರು ಭೇಟಿಯಾಗುತ್ತಾರೆ. ಹಲವು ದಿನಗಳಿಂದ ತೋಡಿಕೊಳ್ಳಬೇಕೆಂದುಕೊಂಡಿರುವ ದುಃಖ ಇಂದು ಹರಿಯುತ್ತದೆ.

ಸಿಂಹ : ವಿನಾ ಕಾರಣ ಎದುರಾಗುವ ತೊಂದರೆಯಿಂದ ಕಿರಿಕಿರಿಗೊಂಡಿದ್ದೀರಿ. ಆಧ್ಯಾತ್ಮದಿಂದ ಸಾಕಷ್ಟು ಪ್ರಯೋಜನವಾಗಲಿದೆ.

ಕನ್ಯಾ : ಅಕಸ್ಮಿಕವಾಗಿ ಎದುರಾಗುವ ಸಮಸ್ಯೆಗಳನ್ನು ನೀವು ಚಕಚಕನೆ ಪರಿಹರಿಸುತ್ತೀರಿ. ಆದ್ದರಿಂದ ವಿಜಯದ ಸಂತೋಷ.

ತುಲಾ : ಇವತ್ತು ಮನೆಯಲ್ಲಿ ಅತಿಥಿ ಸತ್ಕಾರದ ಭಾಗ್ಯ. ನಿಮ್ಮ ಅತೀ ಹತ್ತಿರದ ಬಂಧುಗಳು ಅಪರೂಪಕ್ಕೆ ಬರಲಿದ್ದಾರೆ. ಕಂಜೂಸ್‌ತನ ಬೇಡ.

ವೃಶ್ಚಿಕ : ಹಣದ ವ್ಯವಹಾರ ನಡೆಸುವಾಗ ನಿಮ್ಮನ್ನು ಮೋಸಗೊಳಿಸಲೇ ನಿಮ್ಮ ಸ್ನೇಹಿತರು ಕಾಯುತ್ತಿರುತ್ತಾರೆ. ಆದ್ದರಿಂದ ಜೋಪಾನವಾಗಿರಿ.

ಧನಸ್ಸು : ಕೋರ್ಟ್‌ ವ್ಯವಹಾರಗಳಲ್ಲಿ ಈ ದಿನ ನಿಮಗೆ ಧನಾತ್ಮಕ ಫಲಿತಾಂಶ ಕಾಣಬಹುದು, ಆದರೆ ವೃತ್ತಿ ಸಂಬಂಧ ಹಿನ್ನಡೆ ಕಾಣಬೇಕಾಗುತ್ತದೆ.

ಮಕರ : ಮತ್ತೊಮ್ಮೆ ಕಳೆದುಕೊಳ್ಳುತ್ತಿರುವ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇಲ್ಲವಾದಲ್ಲಿ ಅಪಾರ ನಷ್ಟವಾಗುತ್ತದೆ. ಬಿಡುವಿನ ವೇಳೆಯನ್ನು ಸದುಪಯೋಗಗೊಳಿಸಿ.

ಕುಂಭ : ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ದಿನ ಇದು. ಮನೆಯ ಎಲ್ಲ ಕೆಲಸ ಕಾರ್ಯಗಳಲ್ಲಿ ಪ್ರಗತಿ ಕಾಣುತ್ತೀರಿ. ಧನಲಾಭವೂ ಇರಬಹುದು.

ಮೀನ : ಕೆಂಡ ಮಂಡಲ ಸಿಟ್ಟು ಬಂದರೂ ಏನೂ ಮಾಡಲಾಗದ ಪರಿಸ್ಥಿತಿಯನ್ನು ನಿಭಾಯಿಸುವ ಜಾಣತನ ನಿಮಗಿರುವುದರಿಂದ ಇಂದು ಸುದಿನವೇ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+