Get Updates
Get notified of breaking news, exclusive insights, and must-see stories!

ರಾಮದೇವರ ದೊಡ್ಡಿ : ರಾಗಿಮುದ್ದೆಯುಂಡು ಹಾರಿದ ಪಂಚಪ್ರಾಣಗಳು

ಕನಕಪುರ : ತಾಲ್ಲೂಕಿನ ರಾಮದೇವರ ದೊಡ್ಡಿಯ ಒಂದೇ ಕುಟುಂಬದ ಐವರು ನತದೃಷ್ಟರು ವಿಷಪೂರಿತ ಆಹಾರ ಸೇವಿಸಿ ಸಾವಿಗೀಡಾಗಿರುವ ಹೃದಯ ವಿದ್ರಾವಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಲಕ್ಷ್ಮಿಯನ್ನು ಬರಮಾಡಿಕೊಳ್ಳುವ ಶುಕ್ರವಾರ ದೊಡ್ಡಿಯ ಗೋಪಾಲ್‌ ಅವರ ಬದುಕಿಗೆ ಬರ ಸಿಡಿಲಿನ ದಿನವಾಗಿತ್ತು . ತಾಯಿ ದೇವಮ್ಮ (75), ಪತ್ನಿ ಸುಶೀಲಮ್ಮ , ಇಬ್ಬರು ಪುತ್ರಿಯರಾದ ನಾಗಮ್ಮ (15) ಮತ್ತು ಸತ್ಯಾ (9) ಹಾಗೂ ಪುತ್ರ ವಿನೋದ (9) ಐವರನ್ನೂ ಒಟ್ಟಿಗೆ ಕಳೆದುಕೊಂಡ ದುರಂತ ಅವರದು. ಶನಿವಾರ ಮಧ್ಯಾಹ್ನ ಸೊಪ್ಪಿನ ಸಾರು, ರಾಗಿ ಮುದ್ದೆಯುಂಡು ನಿರ್ಜೀವವಾದ ಪಂಚ ಪ್ರಾಣಗಳನ್ನು ರಾಮದೇವರ ಬೆಟ್ಟದ ತಪ್ಪಲಿನಲ್ಲಿ ಗೋಪಾಲ್‌ ಸಾಮೂಹಿಕ ಅಂತ್ಯ ಸಂಸ್ಕಾರದ ಮೂಲಕ ವಿದಾಯ ಹೇಳಿದರು.

ರಾಗಿಮುದ್ದೆಯಲ್ಲಿ ಕೀಟನಾಶಕ ಬೆರೆತಿದ್ದುದೆ ಸಾವಿಗೆ ಕಾರಣವೆಂದು ಶಂಕಿಸಲಾಗಿದೆ. ಮುದ್ದೆ ತಿಂದ ನಾಯಿ ಕೂಡ ಸಾವಿಗೀಡಾಗಿರುವುದು ಶಂಕೆಯನ್ನು ಬಲಪಡಿಸಿದೆ. ವಾರಂಪ್ರತಿಯಂತೆ ಶುಕ್ರವಾರ ಬೆಳಿಗ್ಗೆ ಮರಳವಾಡಿ ಸಂತೆಗೆ ಮೇಕೆ ಖರೀದಿಗಾಗಿ ತೆರಳಿದ್ದರು. ಆ ಹೊತ್ತಿನಲ್ಲಿ ಸೀಗೆಸೊಪ್ಪಿನ ಸಾರು, ರಾಗಿಮುದ್ದೆಯುಂಡ ಕುಟುಂಬದವರು ಸಾವಿಗೀಡಾಗಿದ್ದಾರೆ.

ಮೂಢನಂಬಿಕೆಗೆ ತಮ್ಮನ್ನೇ ಬಲಿ ಕೊಟ್ಟುಕೊಂಡರು

ವಿಷಾಹಾರವುಂಡು ನಿತ್ರಾಣದಿಂದ ಬಳಲಿಕೆ ಹೆಚ್ಚಾದಾಗ, ಸಹಾಯಕ್ಕೆ ಬಂದ ದೊರಟ್ಟಿ ಗೌಡರು , ಇದೆಲ್ಲಾ ದೇವರ ಕೋಪ, ಆದ್ದರಿಂದ ಸಾತನೂರಿನ ಕಬ್ಬಳಮ್ಮನಿಗೆ ಮೇಕೆ ಬಿಡಲು ಸೂಚಿಸಿದರು. ತಕ್ಷಣವೇ ಕಾಡಿಗೆ ತೆರಳಿ ಮೇಯುತ್ತಿದ್ದ ಮೇಕೆಯನ್ನು ಹಿಡಿದು ತಂದ ಬಾಲಕ ಗೋಪಾಲ್‌, ಮೇಕೆಗೆ ಪೂಜೆ ಸಲ್ಲಿಸುತ್ತಿರುವಾಗಲೇ ಕುಸಿದುಬಿದ್ದು ಪ್ರಾಣಬಿಟ್ಟ . ಆದರೂ ಎಚ್ಚತ್ತುಕೊಳ್ಳದ ಹಿರೀಕ ಗೌಡ, ವಿನೋದನ ಸಾವಿಗೆ ರಾಹು ಕಾಟ ಕಾರಣವೆಂದು ನಂಬಿ ಕೋಳಿ ಬಲಿ ಕೊಟ್ಟ . ಸ್ವಲ್ಪ ಹೊತ್ತಿನಲ್ಲೇ ಇಬ್ಬರು ಹೆಣ್ಣು ಮಕ್ಕಳು ಹಾಗೂ ಗೋಪಾಲ್‌ ತಾಯಿ ಒಬ್ಬೊಬ್ಬರಾಗಿ ಸತ್ತರು.

ಈ ಹೊತ್ತಿನಲ್ಲಿ ಕುಟುಂಬದವರು ವಿಷಾನ್ನ ತಿಂದಿರಬಹುದೆಂದು ಯುವಕನೊಬ್ಬ ಅನುಮಾನಪಟ್ಟ . ಮನೆಯಲ್ಲಿ ಉಳಿದಿದ್ದ ಮುದ್ದೆಯನ್ನು ನಾಯಿಗೆ ಎಸೆದಾಗ, ಮುದ್ದೆಯುಂಡ ನಾಯಿ ಸ್ವಲ್ಪ ಹೊತ್ತಿನಲ್ಲೇ ಸತ್ತು ಬಿದ್ದಾಗ, ಉಳಿದಿದ್ದ ಸುಶೀಲಮ್ಮನನ್ನು ಕನಕಪುರ, ಆನಂತರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಯಿತು. ಅವರು ಆಸ್ಪತ್ರೆಯಲ್ಲಿ ಅಸು ನೀಗಿದರು. ಸಮಯ ವಿಳಂಬ ಮಾಡದೆ ಆಸ್ಪತ್ರೆಗೆ ಸೇರಿಸಿದ್ದಲ್ಲಿ ಕೆಲವರಾದರೂ ಉಳಿಯುವ ಸಂಭವವಿತ್ತು .

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+