ಬೆಳ್ತಂಗಡಿ : ಕಾಜೂರು ಉರುಸ್‌ನಲ್ಲಿ ಸರ್ವ ಧರ್ಮ ಸಮ್ಮೇಳನ
ಬೆಳ್ತಂಗಡಿ : ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲ್ಲೂಕಿನ ಪ್ರಖ್ಯಾತ ಕಾಜೂರು ದರ್ಗಾ ಉರೂಸ್ ಭಾನುವಾರ ವಿಜೃಂಭಣೆಯಿಂದ ನಡೆಯಿತು.
ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಹರಿಯುವ ನೇತ್ರಾವತಿ ನದಿ ದಡದಲ್ಲಿರುವ ಕಾಜೂರು ದರ್ಗಾ ದಕ್ಷಿಣ ಕನ್ನಡದ ಪ್ರಖ್ಯಾತ ದರ್ಗಾಗಳಲ್ಲೊಂದು. ಉಳ್ಳಾಲ ಮತ್ತು ಕಾಜೂರು ದರ್ಗಾ ಉರೂಸ್ ದಕ್ಷಿಣ ಕನ್ನಡದ ಬ್ಯಾರಿ ಜನಾಂಗದವರಿಗೆ ಮಾತ್ರವಲ್ಲದೆ ಕೇರಳದ ಮಲಯಾಳೀ ಮುಸ್ಲಿಮರಿಗೂ ಪವಿತ್ರವಾದುದು. ಜಾತಿಯ ಬೇಲಿಯಿಲ್ಲದೆ, ಭಕ್ತಾದಿಗಳು ಬಂದು ಇಲ್ಲಿ ಹರಕೆ ಸಲ್ಲಿಸುತ್ತಾರೆ. ಯಾಸೀನ್ ಪಾರಾಯಣ ಮಾಡುತ್ತಾರೆ.
ಈ ಬಾರಿಯ ಉರೂಸಿನ ಅಂಗವಾಗಿ ಭಾನುವಾರ ರಾತ್ರಿ ಸರ್ವಧರ್ಮಿಯರ ಸಮ್ಮೇಳನ ಆಯೋಜಿಸಲಾಗಿತ್ತು. ಸಮ್ಮೇಳನವನ್ನು ಬೆಳ್ತಂಗಡಿ ಶಾಸಕ ಪ್ರಭಾಕರ್ ಬಂಗೇರಾ ಉದ್ಘಾಟಿಸಿ, ಧಾರ್ಮಿಕ ಸಹಿಷ್ಣುತೆ ಇಂದಿನ ಕಾಲದಲ್ಲಿ ಅತೀ ಅಗತ್ಯ ಎಂದರು.
ಶಾಸಕ ಕೆ. ಎಂ. ಇಬ್ರಾಹಿಂ , ಫಾದರ್ ಎಫ್. ಎಕ್ಸ್ . ಗೇಮ್ಸ್, ಬಿ. ಇಬ್ರಾಹಿಂ , ಸಂಸದ ಡಿ. ಸಿ. ಶ್ರೀ ಕಂಠಪ್ಪ ಪಾಲ್ಗೊಂಡು ಮಾತನಾಡಿ ಪರಸ್ಪರ ಪ್ರೀತಿ ಅನ್ಯೋನ್ಯತೆಯಿಂದ ಹೊಂದಿಕೊಂಡು ಹೋಗುವುದೇ ಧರ್ಮ . ಮುಸಲ್ಮಾನರಲ್ಲಿ ಶಿಕ್ಷಣ ಕಡಿಮೆ. ಅವರು ಸುಶಿಕ್ಷಿತರಾಗಬೇಕು. ಕಾಜೂರಿನಲ್ಲೊಂದು ಸೌಹಾರ್ದ ಭವನ ನಿರ್ಮಾಣವಾಗಬೇಕು ಎಂದರು.
ಬುದ್ಧ ಪ್ರತಿಮೆ ನಾಶಕ್ಕೆ ಇಸ್ಲಾಂನ ಬೆಂಬಲವಿಲ್ಲ
ಹಾಜಿ ಬಿ.ಎಂ. ಉಮರ್ ಕುಂಞಿ ಮಸ್ಲಿಯಾರ್ ಅವರು ತಾಲಿಬಾನ್‌ಗಳು ಧರ್ಮದ ತಿರುಳು ಅರಿಯದವರು. ಬುದ್ಧನ ಪ್ರತಿಮೆ ನಾಶ ಮಾಡಿದ ಅವರಿಗೆ ಧರ್ಮದ ಬೆಂಬಲ ಇಲ್ಲ ಎಂದರು. ಬುದ್ಧವ ಪ್ರತಿಮೆ ನಾಶಕ್ಕೆ ಇಸ್ಲಾಂ ಧರ್ಮ ಕಾರಣವಲ್ಲ. ಅದು ವಿಗ್ರಹಾರಾಧನೆಯನ್ನು ಖಂಡಿಸುತ್ತದೆಯಾದರೂ ವಿಗ್ರಹಾರಾಧನೆ ಮಾಡುವವರನ್ನು ಗೌರವಿಸಬೇಕು ಎನ್ನುತ್ತದೆ. ನೀತಿ ಧರ್ಮವಿಲ್ಲದ ರಾಜಕೀಯದಿಂದಾಗಿ ಇಂದು ಕ್ಷೋಭೆ ಉಂಟಾಗುತ್ತಿದೆ ಎಂದರು. ಮಾಜಿ ಶಾಸಕ ಕೆ. ಗಂಗಾಧರ ಗೌಡ, ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ ಎಲ್ಲರೂ ಸಹೋದರರು ಎಂಬ ಭಾವನೆ ಬೆಳೆಯಲು ಧರ್ಮಗಳು ಕಾರಣವಾಗಬೇಕು ಎಂದರು.
ಕಾಜೂರು ದರ್ಗಾ ಶರೀಫ್ ಆಡಳಿತ ಸಮಿತಿಯ ಅಧ್ಯಕ್ಷ ಹಾಜಿ ಕೆ. ಎಂ. ಉಸ್ಮಾನ್ ಅಧ್ಯಕ್ಷತೆ ವಹಿಸಿದ್ದರು. ಹಾಜಿ ಉಸ್ತಾದ್ ನೇತೃತ್ವದಲ್ಲಿ ದಪ್ಪು ಕಾರ್ಯಕ್ರಮ ನಡೆಯಿತು.
(ಮಂಗಳೂರು ಪ್ರತಿನಿಧಿಯಿಂದ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications