ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಕ್ರಿಯಾತ್ಮಕ ಯೋಜನೆಯಲ್ಲಿ ಹಲವಾರು ಹೊಸ ಐಡಿಯಾಗಳನ್ನು ಕಾಣುತ್ತಿದ್ದೀರಿ. ಅವುಗಳನ್ನು ಯಶಸ್ವಿಯಾಗಿ ಪ್ರಾಯೋಗಿಕವಾಗಿ ಸಾಧಿಸಿದ್ದೇ ಆದಲ್ಲಿ ಬಹುದೊಡ್ಡ ಯಶಸ್ಸನ್ನು ಪಡೆಯುತ್ತೀರಿ. ಅಧಿಕ ಶ್ರಮ ಅಗತ್ಯ.ವೃಷಭ : ಪರಿಸ್ಥಿತಿಗಳಿಂದ ಪಾಠ ಕಲಿಯದಿದ್ದರೆ ನೀವೂ ಯಾವತ್ತೂ ಎದುರಾಳಿಗಳ ವಂಚನೆಗೆ ಬಲಿಯಾಗುತ್ತಿರುತ್ತೀರಿ. ಅಂದಮಾತ್ರಕ್ಕೆ ನಿಮ್ಮನ್ನು ಮೋಸ ಮಾಡುವುದು ಸುಲಭ ಅಂದೇನೂ ಅಲ್ಲ . ಆದರೆ, ಮೋಸ ಹೋಗುವುದು ಅಭ್ಯಾಸವಾಗಬಾರದು.
ಮಿಥುನ : ಈ ಪ್ರಯಾಣದ ಆಯಾಸದಿಂದ ಬಳಲುತ್ತಿದ್ದೀರಿ. ಆದರೆ, ನಿಮ್ಮನ್ನು ಗೋಳಾಡಿಸಲು ಸಹೋದ್ಯೋಗಿಗಳು ನಿಶ್ಚಯಿಸಿರುವುದರಿಂದ ತಲೆನೋವು ತಪ್ಪದು. ಅನಾಸಿನ್ ಅನಿವಾರ್ಯ.
ಕಟಕ : ಈ ದಿನ ಹೆಚ್ಚೆಚ್ಚು ಕ್ರಿಯಾಶೀಲ ಹಾಗೂ ಸ್ನೇಹಶೀಲರಾಗಿದ್ದೀರಿ. ಅಂದಮೇಲೆ, ಆಕರ್ಷಣೆಯ ಕೇಂದ್ರ ನೀವೇ. ಪಾರ್ಟಿಗೋಸ್ಕರ ಇಂದಿನದು ಅತ್ಯುತ್ತಮ ದಿನ.
ಸಿಂಹ : ಇತರರೊಂದಿಗಿನ ಒಪ್ಪಂದವನ್ನು ಸಾಧಿಸುವಲ್ಲಿ ಸುಲಭದ ದಾರಿಗಳನ್ನು ಹುಡುಕಿ. ಹೊಸ ಗೆಳೆಯರು ಅಥವಾ ಪ್ರಣಯದ ಸಾಧ್ಯತೆಯಿದೆ. ನಿಮ್ಮ ಜನಪ್ರಿಯತೆಯೂ ಏರು ಮುಖದಲ್ಲಿದೆ.
ಕನ್ಯಾ : ಹಳತಾಗುತ್ತಿರುವ ಸಂಬಂಧಗಳನ್ನು ಕೊಳೆಯದಂತೆ ಪ್ಯಾಚ್ ಮಾಡಲೀಗ ಸಕಾಲ. ಸಂಬಂಧಿಗಳು ಕೂಡ ನಿಮ್ಮ ಬಗ್ಗೆ ಮೆದು ಭಾವನೆ ತಾಳಿದ್ದಾರೆ. ಇನ್ನು ಮುಂದಾದರೂ ಸಾಕಷ್ಟು ಮುಕ್ತ ಮನಸ್ಸಿನವರಾಗಿರುವುದು ಒಳ್ಳೆಯದು.
ತುಲಾ : ನಿಮ್ಮ ಮನಸ್ಸು ಹೆಚ್ಚೆಚ್ಚು ಅಧ್ಯಾತ್ಮಿಕಗೊಳ್ಳುತ್ತಿದೆ. ಇದರಿಂದಾಗಿಯೇ, ನೀವು ಪ್ರತಿಯಾಂದಕ್ಕೂ ವಿಪರೀತಾರ್ಥ ಕಲ್ಪಿಸಿಕೊಳ್ಳುತ್ತಿದ್ದೀರಿ. ನಿಮ್ಮ ವಯಸ್ಸು ಅಧ್ಯಾತ್ಮಕ್ಕೆ ಸರಿಹೊಂದುವುದಿಲ್ಲ . ಈ ಹೊತ್ತು ಧನಲಾಭವಿದೆ.
ವೃಶ್ಚಿಕ : ನಿಮ್ಮ ಯೋಚನೆಗಳು ಹೆಚ್ಚೆಚ್ಚು ಸ್ಪಷ್ಟಗೊಳ್ಳುತ್ತಿವೆ. ಅಂದರೆ, ನೀವು ವಾಸ್ತವಕ್ಕೆ ಹತ್ತಿರವಾಗುತ್ತಿದ್ದೀರಿ. ಬರವಣಿಗೆ ಕೂಡ ಸಾಧ್ಯವಾಗಲಿದೆ. ಬಂಧುಗಳು ಮರಳಿ ಮನೆ ತುಂಬಲಿದ್ದಾರೆ. ಸಂತೋಷದ ದಿನ.
ಧನಸ್ಸು : ಆತ್ಮ ವಿಶ್ವಾಸವನ್ನು ದ್ವಿಗುಣಗೊಳಿಸಿಕೊಳ್ಳುತ್ತೀರಿ. ಎಲ್ಲ ಮೂಲಗಳಿಂದಲೂ ಯಶಸ್ಸು ನಿಮ್ಮೆಡೆಗೇ ಹರಿದು ಬರುತ್ತಿದೆ. ಈ ಹೊತ್ತಿನಲ್ಲಿ ಆತ್ಮ ಸಂಯಮವನ್ನು ಕಾಯ್ದುಕೊಳ್ಳುವುದರಿಂದ ನಿಮ್ಮ ಘನತೆ ಮತ್ತಷ್ಟು ಹೆಚ್ಚುತ್ತದೆ.
ಮಕರ : ಪಕ್ಕಾ ವೇಳಾಪಟ್ಟಿ ತಯಾರಿಯಿಂದ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಬಹುದು. ಅತ್ತಿತ್ತ ಹರಿಯಬಿಡದೆ, ಮನಸ್ಸನ್ನು ವ್ಯಾಸಂಗದತ್ತಲೇ ಕಟ್ಟಿರಿಸಿಕೊಳ್ಳಿ. ಇತರ ಯೋಚನೆಗಳಿಗೆಲ್ಲ ಈಗ ರಜೆಯಿರಲಿ.
ಕುಂಭ : ನೀವು ಅಂದುಕೊಂಡದ್ದನ್ನು ಸಾಧಿಸಲಿಕ್ಕೆ ಈ ದಿನ ಸುಮುಹೂರ್ತವಿದೆ. ಹೊಸ ಕಾರ್ಯಗಳನ್ನು ಪ್ರಾರಂಭಿಸುವವರಿಗೂ ಸಕಾಲವಿದು. ಉನ್ನತ ವ್ಯಾಸಂಗದಲ್ಲಿ ಹಿನ್ನಡೆಯಿದೆ. ಸಂಜೆ ಬಲು ಸುಂದರ.
ಮೀನ : ಇತರರನ್ನು ಅನುವರ್ತಿಗಳಾಗಿಸಿಕೊಳ್ಳಲು ಸುದಿನವಿದು. ಅಂದರೆ, ನಿಮ್ಮ ಮಾತನ್ನು ಇತರರು ತಾಳ್ಮೆಯಿಂದ ಕೇಳುತ್ತಾರೆ ಎಂದರ್ಥ. ಭಾವನೆಗಳನ್ನು ಮುಟ್ಟಿಸುವಲ್ಲಿ ಉತ್ತಮ ಸಂವಹನ ಅಗತ್ಯ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications