ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಗೇಶ್‌ಹೆಗಡೆ, ಸುಧಾ ನಾರಾಯಣಮೂರ್ತಿಗೆ ವಿಶ್ವೇಶ್ವರಯ್ಯ ಪ್ರಶಸ್ತಿ

By Staff
|
Google Oneindia Kannada News

ಬೆಂಗಳೂರು : ಪತ್ರಕರ್ತ ಹಾಗೂ ಪರಿಸರ ಕಾಳಜಿಯ ಮನುಷ್ಯ ನಾಗೇಶ್‌ ಹೆಗಡೆ, ಕಿರಿಯ ವಿಜ್ಞಾನಿ ಹಾಗೂ ಕಥೆಗಾರ್ತಿ ನೇಮಿಚಂದ್ರ, ಇನ್‌ಫೋಸಿಸ್‌ನ ಸುಧಾ ನಾರಾಯಣಮೂರ್ತಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು 2000 ಸಾಲಿನ ವಿಶ್ವೇಶ್ವರಯ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಏಪ್ರಿಲ್‌ 28 ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಗುವುದು. ಭಾರತರತ್ನ ಸರ್‌ ಎಂ. ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಪ್ರತಿಷ್ಠಾನ, ವಿವಿಧ ಕ್ಷೇತ್ರಗಳ ಗಣ್ಯರಿಗೆ ಪ್ರತಿ ವರ್ಷ ವಿಶ್ವೇಶ್ವರಯ್ಯ ಪ್ರಶಸ್ತಿಗಳನ್ನು ನೀಡುತ್ತದೆ. ಪ್ರಶಸ್ತಿಗಳ ವಿವರ ಇಂತಿದೆ -

ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿಗಳು
ಅ.ರಾ. ಚಂದ್ರಹಾಸಗುಪ್ತ (ಆಡಳಿತ), ಎ.ಎಸ್‌. ಮೂರ್ತಿ (ರಂಗಭೂಮಿ), ಸುಧಾಮೂರ್ತಿ (ಸಮಾಜ ಸೇವೆ), ಪ್ರೊ. ಬಿ.ವಿ. ಶಿರೂರು (ಶಿಕ್ಷಣ), ಬಿ.ವಿ. ವೀರಭದ್ರಪ್ಪ (ಸೃಜನಶೀಲತೆ), ಎಸ್‌. ಮಲ್ಲಿಕಾರ್ಜುನಯ್ಯ (ತಾಂತ್ರಿಕ), ಎಸ್‌. ವಿ. ಪರಮೇಶ್ವರ (ವೈದ್ಯಕೀಯ), ಸಿ.ಆರ್‌. ರಾಜು (ತಾಂತ್ರಿಕ), ಡಾ. ವಿ.ಎಸ್‌. ಸ್ಕಂದ ಪ್ರಸಾದ (ಬ್ಯಾಂಕಿಂಗ್‌), ಶಾ. ಅಶೋಕ್‌ ಬಾಬು (ಪತ್ರಿಕೋದ್ಯಮ).

ವಿಶ್ವೇಶ್ವರಯ್ಯ ಪ್ರಶಸ್ತಿ
ಬಸವರಾಜ ಮಟಗಾರ (ಸಮಾಜ ಸೇವೆ), ಗುಡಿಬಂಡೆ ಪೂರ್ಣಿಮಾ (ಸಾಹಿತ್ಯ), ಎಸ್‌.ವಿ. ಶ್ರೀನಿವಾಸರಾವ್‌(ಸಾಹಿತ್ಯ), ಸುರೇಶ್‌ ಕುಲಕರ್ಣಿ (ಪತ್ರಿಕಾ ಸಿನಿಮಾ), ಜೆ.ಆರ್‌.ಕೆ.ಕರಡಿ(ತಾಂತ್ರಿಕ), ಲತಾಗುತ್ತಿ (ಸಾಹಿತ್ಯ), ಅಪ್ಪಗೆರೆ ತಿಮ್ಮರಾಜು (ಜನಪದ ಸಂಗೀತ), ಮನೋಹರ ಮಸ್ಕಿ (ಆರ್ಥಿಕ ಕ್ಷೇತ್ರ), ಡಿ.ಎಸ್‌. ಚೌಗಲೆ (ಕಲೆ), ಡಿ.ಜಿ. ಸಾಗರ (ಸಂಘಟನೆ), ಎನ್‌.ಎಸ್‌. ನಾಗರಾಜ (ಆಡಳಿತ), ಎಸ್‌.ಎಂ. ಬೆಳಗಲಿ (ತಾಂತ್ರಿಕ), ಆನಂದ ಅಪ್ಪುಗೋಳ್‌ (ಯುವ ಸಂಘಟನೆ), ಬಿ.ಬಿ.ಪಾಟೀಲ (ಸಹಕಾರ ಕ್ಷೇತ್ರ).

ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ
ನೇಮಿಚಂದ್ರ, ನಾಗೇಶ್‌ಹೆಗಡೆ, ಬಿ.ಜಿ. ಸತ್ಯಮೂರ್ತಿ ಹಾಗೂ ಜಿ.ಜೆ. ಹರಿಜಿತ್‌

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X