ಧಾರವಾಡಕ್ಕೆ ಇನ್ನು 3 ತಿಂಗಳಲ್ಲಿ ಬಯೋಟೆಕ್ ಸಂಸ್ಥೆ
ಬೆಂಗಳೂರು : ಉತ್ತರ ಕರ್ನಾಟಕದ ಹತ್ತಿ ಬೆಳೆಗಾರರು ಬೀಟಿ ಹತ್ತಿ ಬೆಳೆ ತೆಗೆಯಲು ವಿರೋಧಿಸುತ್ತಿದ್ದರೂ, ಧಾರವಾಡದಲ್ಲಿ ಇನ್ನು 3 ತಿಂಗಳಲ್ಲಿ ಬಯೋಟೆಕ್ ಸಂಸ್ಥೆ ಸ್ಥಾಪಿಸುವಂತೆ ಮುಖ್ಯಮಂತ್ರಿ ಕೃಷ್ಣ ಆದೇಶಿಸಿದ್ದಾರೆ.
ಭಾನುವಾರ ನಗರದ ಅರಮನೆ ಆವರಣದಲ್ಲಿ ಪ್ರಾರಂಭವಾದ ಜೈವಿಕ ತಂತ್ರಜ್ಞಾನ ಜಾತ್ರೆಯಲ್ಲಿ ಕೃಷ್ಣ ಈ ಆದೇಶ ಹೊರ ಹಾಕಿದರು. ತಮ್ಮ ಬಜೆಟ್‌ನಲ್ಲಿ ತಿಳಿಸಿರುವಂತೆ ಜೈವಿಕ ತಂತ್ರಜ್ಞಾನ ಸಂಸ್ಥೆ ಸ್ಥಾಪಿಸಲು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿಗೆ ಮುಖ್ಯಮಂತ್ರಿ ಕೃಷ್ಣ 5 ಕೋಟಿ ರುಪಾಯಿ ಚೆಕ್ ಕೊಟ್ಟರು. ಕಟ್ಟಡದ ನಿರ್ಮಾಣ, ಆಡಳಿತ ವೆಚ್ಚಕ್ಕೆ ಈ ಹಣ ಬಳಸಕೂಡದು. ಇದೇನಿದ್ದರೂ ಸಂಶೋಧನೆ ಹಾಗೂ ಪರಿಕರಗಳ ಕೊಳ್ಳಲು ಮೀಸಲು ಎಂದು ಅವರು ತಾಕೀತು ಮಾಡಿದರು.
ನಮ್ಮ ದೇಶದಲ್ಲಿ ರೈತರು ಕ್ರಿಮಿನಾಶಕಗಳಿಗಾಗಿ 3 ಸಾವಿರ ಕೋಟಿ ರುಪಾಯಿ ಖರ್ಚು ಮಾಡುತ್ತಿದ್ದಾರೆ. ಇದರಲ್ಲಿ ಅರ್ಧ ಪಾಲು ಹತ್ತಿ ಬೆಳೆಗಾರರದು. ಜೈವಿಕ ತಂತ್ರಜ್ಞಾನ (ಬೀಟಿ) ದಿಂದ ಕುಲಾಂತರಿ ತಳಿಯ ಹತ್ತಿ ಉತ್ಪಾದಿಸುವುದರಿಂದ ಈ ವೆಚ್ಚವನ್ನು ಅರ್ಧದಷ್ಟು ತಗ್ಗಿಸಬಹುದಾಗಿದೆ. ಹೇಗೆಂದರೆ, ಬೀಟಿ ಹತ್ತಿ ಕೀಟಗಳ ದಾಳಿಗೆ ಅಷ್ಟು ಸುಲಭವಾಗಿ ಬಲಿಯಾಗುವುದಿಲ್ಲ ಎಂದರು.
ಬೀಟಿ ಜಾತ್ರೆ ಬಿಕೋ ಬಿಕೋ : ಮಧುಮೇಹಕ್ಕೆ ಮದ್ದು ಕೊಡುವ ವಿಶ್ವದ ದೊಡ್ಡ ಕಂಪನಿ ನಾರ್‌ಡಿಸ್ಕ್, ಹೆಪಟೈಟಿಸ್- ಬಿಗೆ ಔಷಧಿ ಕಂಡುಹಿಡಿದ ಹೈದರಾಬಾದಿನ ಶಾಂತಾ ಬಯೋಟೆಕ್ನಿಕ್ಸ್, ಬೆಂಗಳೂರಿನ ಬಯೋಕಾನ್ ಮೊದಲಾದ ಜೈವಿಕ ತಂತ್ರಜ್ಞಾನದ ದಿಗ್ಗಜ ಕಂಪನಿಗಳು ಜಾತ್ರೆಯಲ್ಲಿ ಭಾಗವಹಿಸಿವೆ. ವಿವಿಧ ಜನಾಕರ್ಷಣೀಯ ಮಳಿಗೆಗಳಿವೆ. ಜೊತೆಗೆ ಬೀಟಿ ಪರಿಣತರ ಮಾತನ್ನು ಇಲ್ಲಿ ಮುಫತ್ತಾಗಿ ಕೇಳಬಹುದು. ಹೀಗಿದ್ದೂ ಬೆಂಗಳೂರು ಬಯೋ ಡಾಟ್ ಕಾಂ ಜಾತ್ರೆಯಲ್ಲಿ ಮೊದಲ ದಿನ ಸೇರಿದ್ದು ಬರೀ ಐದಾರು ಸಾವಿರ ಜನ.
ಈ ಜಾತ್ರೆ ಸಹಜವಾಗೇ ಸಾಮಾನ್ಯ ಜನರನ್ನು ಆಕರ್ಷಿಸದು. ಜೊತೆಗೆ ಕೇವಲ ಜನವರಿಯಿಂದಷ್ಟೇ ಈ ಮೇಳದ ಸಿದ್ಧತೆಗಳು ಶುರುವಾದದ್ದು. ಇದಕ್ಕೆ ಸಿಗಬೇಕಾದಷ್ಟು ಪ್ರಚಾರ ಲಭಿಸದ ಕಾರಣ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂದು ಸಂಘಟಕರು ಹೇಳಿದ್ದಾರೆ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications