Get Updates
Get notified of breaking news, exclusive insights, and must-see stories!

ಹೈದ್ರಾಬಾದ್‌ ಕರ್ನಾಟಕ 18 ಮಹಾ ಕವಿಗಳ ತವರು : ಸಬರದ

ಆಳಂದ : ಹೈದರಾಬಾದ್‌ ಕರ್ನಾಟಕದ ಮಹಾಕವಿಗಳ ತವರು. ನವೋದಯ ಆರಂಭವಾಗುವ ಮೊದಲ ಪೂರ್ವ ಯುಗದಲ್ಲಿ ಹರಿಹರ, ರಾಘವಾಂಕ, ಚಾಮರಸ, ಮುದ್ದಣ, ಲಕ್ಷ್ಮೀಶರೇ ಮೊದಲಾದ 18 ಮಹಾಕವಿಗಳು ರಚಿಸಿದ ಕಾವ್ಯಗಳು ಸರ್ವಶ್ರೇಷ್ಠವಾಗಿವೆ ಎಂದು ಪ್ರೊ. ಬಸವರಾಜ ಸಬರದ ಹೇಳಿದರು.

ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ 1870ರಿಂದ 1940ರ ಅವಧಿಯಲ್ಲಿ 18 ಮಹಾ ಕವಿಗಳು ರಚಿಸಿದ ಮಹಾಕಾವ್ಯಗಳ ಬಗ್ಗೆ ಸಂಶೋಧನೆ ನಡೆಸಿ, ಪ್ರೌಢಪ್ರಬಂಧ (ಪಿ.ಎಚ್‌.ಡಿ.) ಮಂಡಿಸಲು ಗುಲ್ಬರ್ಗಾ ವಿಶ್ವವಿದ್ಯಾಲಯ ಅವಕಾಶ ಕಲ್ಪಿಸಿದೆ ಎಂದು ಗುಲ್ಬರ್ಗಾ ವಿ.ವಿ. ಕನ್ನಡ ವಿಭಾಗದ ಪ್ರಾಧ್ಯಾಪಕರೂ ಆದ ಪ್ರೊ. ಬಸವರಾಜ ಸಬರದ ತಿಳಿಸಿದರು.

ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ನಡೆದ ವಲಯ ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ಅವರು, ದಾಸರು, ತತ್ವಪದಗಾರರು ಹಾಗೂ ಶರಣರು ನೀಡಿದ ಸಾಹಿತ್ಯ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹೊಸ ಆಯಾಮ ನೀಡಿದೆ ಎಂದರು.

ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ನಮ್ಮ ನಾಡಿನಲ್ಲೂ ರಮ್ಯ ಸಾಹಿತ್ಯ ಕೃಷಿ ಆರಂಭವಾಯಿತು. ರಸಋಷಿ ಕುವೆಂಪು, ಕನ್ನಡದ ಕಣ್ವ ಬಿ.ಎಂ.ಶ್ರೀ. ರಮ್ಯ ಕಾವ್ಯ ಯುಗಕ್ಕೆ ನಾಂದಿ ಹಾಡಿದ ಮಹನೀಯರು ಎಂದ ಸಬರದ ಅವರು, ಉತ್ತರ ಕರ್ನಾಟಕದಲ್ಲಿ ದ.ರಾ. ಬೇಂದ್ರೆ, ದಕ್ಷಿಣ ಕರ್ನಾಟಕದ ಭಾಗದಲ್ಲಿ ಕುವೆಂಪು ಅವರಂಥ ಕವಿಶ್ರೇಷ್ಠರಿದ್ದರೆ, ಹೈದರಾಬಾದ್‌ ಕರ್ನಾಟಕದಲ್ಲಿ 18 ಕವಿ ಸಾರ್ವಭೌಮರಿದ್ದರು ಎಂದರು.

ರಾಜ್ಯ ಲಲಿತ ಕಲಾ ಅಕಾಡಮಿ ಅಧ್ಯಕ್ಷ ಪ್ರೊ. ಅಂದಾನಿ, ಡಾ. ಸ್ವಾಮಿರಾವ್‌ ಕುಲಕರ್ಣಿ ಮೊದಲಾದವರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಶಿವಲಿಂಗ ತೇಲ್ಕರ್‌ ಸ್ವಾಗತ ಕೋರಿದರು.

(ನಮ್ಮ ಪ್ರತಿನಿಧಿಯಿಂದ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+